ಭಾರತದ ಚಿರಪರಿಚಿತ ಬ್ರ್ಯಾಂಡ್ ದಾವತ್ ಜಾಗತಿಕವಾಗಿ ಖ್ಯಾತಿಗೊಳಗಾಗಿದ್ದು ಹೇಗೆ..? ಇಲ್ಲಿದೆ ವಿವರ...

ಪಲಾವ್ ಹಾಗೂ ಬಿರಿಯಾನಿಗೆ ಪ್ರಸಿದ್ಧವಾಗಿದ್ದ ಬಾಸ್ಮತಿ ಅಕ್ಕಿಯನ್ನು ಕಷ್ಟಪಟ್ಟು ದುಡಿಯುವ ರೈತರಿಗಾಗಿ ನ್ಯಾಯಯುತ ಬೆಲೆ ದೊರಕಿಸಿಕೊಡುವ ಮೂಲಕ ಅಮೃತ್‌ಸರದಾಚೆಗೂ ಅಕ್ಕಿಯ ಬೇಡಿಕೆ ವಿಸ್ತರಿಸಲು ಬಯಸಿದ್ದರು.

ಬ್ರ್ಯಾಂಡ್ ದಾವತ್ ಸಿಇಓ ಅಶ್ವಾನಿ ಅರೋರ.

ಬ್ರ್ಯಾಂಡ್ ದಾವತ್ ಸಿಇಓ ಅಶ್ವಾನಿ ಅರೋರ.

 • Share this:

  ತನ್ನ ಹಳ್ಳಿಯ ರೈತರಿಗಾಗಿ ಗುಣಮಟ್ಟದ ಅಕ್ಕಿ ಬೆಳೆಯುವ ನಿಟ್ಟಿನಲ್ಲಿ ಎಲ್‌ಟಿ ಫುಡ್ಸ್ ಸಂಸ್ಥೆ ಆರಂಭಿಸಿದ ರಘುನಾಥ್ ಅರೋರಾ 60 ದೇಶಗಳಾದ್ಯಂತ ವಿಸ್ತರಿಸಿದ ಜಾಗತಿಕ ಬ್ರ್ಯಾಂಡ್ ದಾವತ್ ಅನ್ನು ತಮ್ಮ ಅವಿರತ ಪರಿಶ್ರಮದಿಂದ ಕಟ್ಟಿ ಬೆಳೆಸಿದರು. ತನ್ನ ಊರಿನ ರೈತರಿಗೆ ನ್ಯಾಯೋಚಿತವಾದ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ರಘುನಾಥ್ ಆರಂಭಿಸಿದ ಸಂಸ್ಥೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.ಅಮೃತಸರದ ಭಿಕಿವಿಂಡ್ ಹಳ್ಳಿಯಲ್ಲಿರುವ ತನ್ನ ಜನರಿಗಾಗಿ ರೈಸ್ ಏಜೆಂಟ್ ರಘುನಾಥ್ ಅರೋರಾ ಗುಣಮಟ್ಟದ ಅಕ್ಕಿ ಉತ್ಪಾದನೆಯ ಧ್ಯೇಯವನ್ನಿರಿಸಿಕೊಂಡು 1965ರಲ್ಲಿ ಸಣ್ಣದಾದ ಅಕ್ಕಿ ವ್ಯಾಪಾರ ಸಂಸ್ಥೆ ಆರಂಭಿಸಿದರು. 1977ರಲ್ಲಿ ಲಾಲ್‌ಚಂದ್ ತಿರಾತ್ರಮ್ ರೈಸ್ ಮಿಲ್ಸ್ (LT ಫುಡ್ಸ್) ಪಾಲುದಾರಿಕೆ ಸಂಸ್ಥೆಯಾಗಿ ಮಾರ್ಪಟ್ಟಿತು. ಇದರೊಂದಿಗೆ ರಘುನಾಥನ್ ಯೋಜನೆಗಳೂ ಗರಿಗೆದರಿದವು.


  ಪಲಾವ್ ಹಾಗೂ ಬಿರಿಯಾನಿಗೆ ಪ್ರಸಿದ್ಧವಾಗಿದ್ದ ಬಾಸ್ಮತಿ ಅಕ್ಕಿಯನ್ನು ಕಷ್ಟಪಟ್ಟು ದುಡಿಯುವ ರೈತರಿಗಾಗಿ ನ್ಯಾಯಯುತ ಬೆಲೆ ದೊರಕಿಸಿಕೊಡುವ ಮೂಲಕ ಅಮೃತ್‌ಸರದಾಚೆಗೂ ಅಕ್ಕಿಯ ಬೇಡಿಕೆ ವಿಸ್ತರಿಸಲು ಬಯಸಿದ್ದರು. ಗುಣಮಟ್ಟವನ್ನು ರಘುನಾಥ್ ಸ್ವತಃ ತಮ್ಮ ಕೈಯಿಂದಲೇ ಪರಿಶೀಲಿಸುತ್ತಿದ್ದರು. ತಮ್ಮೂರಲ್ಲೇ ಬೆಳೆಯುವ ಬಾಸ್ಮತಿ ಅಕ್ಕಿಗೆ ಪರದೇಶದಲ್ಲಿಯೂ ಸ್ಥಾನವನ್ನು ದೊರಕಿಸಿಕೊಡಬೇಕು. ಜೊತೆಗೆ ಇದನ್ನು ಬೆಳೆಯುವ ರೈತರಿಗೂ ನ್ಯಾಯೋಚಿತ ಬೆಲೆ ದೊರಕಿಸಿಕೊಡಬೇಕು ಎಂಬುದು ರಘುನಾಥ್ ನಿರ್ಧಾರವಾಗಿತ್ತು.


  ಹಲವಾರು ವರ್ಷ ಕಳೆದರೂ ಬ್ರ್ಯಾಂಡ್ ತನ್ನ ಪ್ರಸ್ತುತತೆಯನ್ನು ಹೇಗೆ ಉಳಿಸಿಕೊಂಡಿದೆ ಎಂಬ ಪ್ರಶ್ನೆಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವನಿ ಅರೋರಾ ಪ್ರತಿಕ್ರಿಯೆ ನೀಡಿದ್ದು, ಕಂಪನಿಯು ತನ್ನ ಮೌಲ್ಯವನ್ನು ಹಾಗೆಯೇ ಉಳಿಸಿಕೊಳ್ಳುವ ಮೂಲಕ ಅಧಿಪತ್ಯ ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.


  ನನ್ನ ತಂದೆ ಉದ್ಯಮ ಆರಂಭಿಸಿದರು. ಸಹೋದರ ವಿಜಯ್ ಕುಮಾರ್ ಅರೋರಾ ಇದನ್ನು ಜಾಗತಿಕವಾಗಿ ಪರಿಚಯಿಸಿದರು. ನಮ್ಮ ತಂದೆ ಸ್ಥಾಪಿಸಿದ ಉದ್ಯಮವನ್ನು ನಾವು ಹಾಗೆಯೇ ಉಳಿಸಿಕೊಂಡು ಬಂದಿದ್ದು ಗುಣಮಟ್ಟವನ್ನು ಹಾಗೆಯೇ ಇರಿಸುವ ಮೂಲಕ ಬದಲಾಗುತ್ತಿರುವ ಕಾಲದಲ್ಲಿ ಕೆಲವೊಂದು ಆವಿಷ್ಕಾರಗಳನ್ನು ನಡೆಸುವ ಮೂಲಕ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಅಶ್ವನಿ ತಿಳಿಸಿದ್ದಾರೆ.


  ಇಂಡಿಯಾ ಗೇಟ್, ಕೊಹಿನೂರ್ ಮೊದಲಾದ ಬ್ರ್ಯಾಂಡ್‌ಗಳ ಕಠಿಣ ಪೈಪೋಟಿಯ ನಡುವೆ ಕೂಡ ದಾವತ್ ಬ್ರ್ಯಾಂಡ್ ಭಾರತದಲ್ಲಿ 20%ದಷ್ಟು ಮಾರುಕಟ್ಟೆ ಷೇರನ್ನು ಗಳಿಸಿದೆ. ಪ್ರಸ್ತುತ ಇದು 60 ದೇಶಗಳಿಗೆ ಸಾಗಣೆ ಪಡೆದುಕೊಂಡಿದೆ. ಅಶ್ವನಿ ತಿಳಿಸಿರುವಂತೆ ಆರ್ಥಿಕ ವರ್ಷ 2021ರಲ್ಲಿ ಎಲ್‌ಟಿ ಫುಡ್ಸ್ 4,686 ಕೋಟಿ ರೂ. ಆದಾಯ ಗಳಿಸಿದೆ.


  ಪುಟ್ಟ ಹೆಜ್ಜೆಯಿಂದ ಆರಂಭಿಸಿ ಜಾಗತಿಕ ಖ್ಯಾತಿಯವರೆಗೆ:


  1950 ಹಾಗೂ 1977ರ ನಡುವಿನ ಅವಧಿಯಲ್ಲಿ ಯಾವುದೇ ಬ್ರ್ಯಾಂಡ್ ಇಲ್ಲದೆ ಪಂಜಾಬ್‌ ಸುತ್ತಮುತ್ತಲಿನ ಪ್ರದೇಶಗಳಿಗೆ ಎಲ್‌ಟಿ ಫುಡ್ಸ್ ಮಧ್ಯಮ ಪ್ರಮಾಣದ ವ್ಯಾಪಾರ ವಹಿವಾಟನ್ನು ನಡೆಸುತ್ತಿತ್ತು. 1978ರಲ್ಲಿ ರಘುನಾಥ್ ಹಿರಿಯ ಪುತ್ರ ವಿಜಯ್ ಉದ್ಯಮಕ್ಕೆ ಕೈಜೋಡಿಸಿದಾಗ ಯುಎಸ್‌ಗೆ ಬಾಸ್ಮತಿ ಅಕ್ಕಿ ರಫ್ತಾಗುವ ಮೂಲಕ ಉದ್ಯಮ ವಿಸ್ತರಿಸಿಕೊಂಡಿತು.


  ಬಾಸ್ಮತಿ ಅಕ್ಕಿ ಮೂಲತಃ ಭಾರತದಲ್ಲಿ ಬೆಳೆಯುತ್ತದೆ ಹಾಗೂ ದಶಕಗಳಿಂದ ಈ ಅಕ್ಕಿ ವಿದೇಶಕ್ಕೆ ರಫ್ತುಆಗುತ್ತಿದೆ. ನನ್ನ ತಂದೆ ಹಾಗೂ ಸಹೋದರ ಈ ಅವಕಾಶ ಬಳಸಿಕೊಳ್ಳಲು ನಿರ್ಧರಿಸಿದರು ಹಾಗೂ ರಫ್ತು ಉದ್ಯಮವನ್ನು ಆರಂಭಿಸಿದರು. ಪ್ರಸ್ತುತ ನಮ್ಮ ಅಕ್ಕಿಯ ಮೂಲಕ ನಾವು ಅಮೆರಿಕದ 50% ಮಾರುಕಟ್ಟೆ ವಶಪಡಿಸಿಕೊಂಡಿದ್ದೇವೆ ಎಂದು ಅಶ್ವನಿ ತಿಳಿಸಿದ್ದಾರೆ.


  ಅಸಂಘಟಿತ ಉದ್ಯಮ ವಲಯಗಳು ಗ್ರಾಹಕರನ್ನು ಕೊಳ್ಳೆ ಹೊಡೆಯುವುದನ್ನು ಗಮನಿಸಿದ ವಿಜಯ್ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ಒದಗಿಸಿಕೊಡುವ ನಿರ್ಧಾರಕ್ಕೆ ಬಂದರು. 1984ರಲ್ಲಿ ತಂದೆ ಹಾಗೂ ಪುತ್ರ ಇಬ್ಬರೂ ಸೋನೆಪೇಟೆಯಲ್ಲಿ ಅಕ್ಕಿ ತಯಾರಿಕಾ ಘಟಕ ಸ್ಥಾಪಿಸಲು ನಿರ್ಧರಿಸಿದರು. ಸ್ಥಳೀಯ ಅಕ್ಕಿಯ ಬೇಡಿಕೆಗಳನ್ನು ಪೂರೈಸಲು ಬ್ರ್ಯಾಂಡ್‌ವುಳ್ಳ ಪ್ಯಾಕೇಜ್ ರೂಪ ಅಗತ್ಯವಿದ್ದುದರಿಂದ ದಾವತ್‌ ಸೃಷ್ಟಿಯಾಯಿತು ಎಂದು ಅಶ್ವನಿ ತಿಳಿಸುತ್ತಾರೆ.


  ಪ್ರಸ್ತುತ ಎಲ್‌ಟಿ ಫುಡ್ಸ್ ಭಾರತದಾದ್ಯಂತ 100,000 ರೈತರೊಂದಿಗೆ ಕೈಜೋಡಿಸಿದೆ. ಭಾರತ ಹಾಗೂ ಅಮೆರಿಕದಾದ್ಯಂತ ಏಳು ಉತ್ಪಾದನಾ ಘಟಕಗಳನ್ನು ಹೊಂದಿರುವ ಸಂಸ್ಥೆಯು ಅಮೆರಿಕದಲ್ಲಿ ಮೂರು ಪ್ಯಾಕೇಜಿಂಗ್ ಸಂಸ್ಥೆಗಳನ್ನು ಹೊಂದಿದೆ. ಕಂಪೆನಿಯ ಪ್ರಸ್ತುತ ಮುಖ್ಯ ಸಂಸ್ಥೆ ಹರಿಯಾಣದ ಗುರ್‌ಗ್ರಾಮ್‌ನಲ್ಲಿದೆ.


  ಇದನ್ನೂ ಓದಿ: IPL 2021 Broadcast Banned in Afghanistan| ಇಸ್ಲಾಂ ವಿರೋಧಿ ಎಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್!

  ನಿರ್ದಿಷ್ಟ ದರವನ್ನು ಅನುಸರಿಸುವುದು:


  ಭಾರತದಲ್ಲಿ ಸುಸ್ಥಿರ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಅನುಸರಿಸಿಕೊಂಡು ಎಲ್‌ಟಿ ಫುಡ್ಸ್ ಬದಲಾವಣೆ ಮಾಡಿಕೊಂಡಿತು. ವಿದೇಶಿ ಮಾರುಕಟ್ಟೆಗೆ ಎಲ್‌ಟಿ ಫುಡ್ಸ್ ಪಾದಾರ್ಪಣೆ ಮಾಡಿದಾಗ ಈ ಬೇಡಿಕೆ ಬೇಗನೇ ಪ್ರವರ್ಧಮಾನಕ್ಕೆ ಬಂದಿತು.


  ಅಕ್ಕಿ ಬೆಳೆಯ ಕುರಿತು ನಾವು ರೈತರಿಗೆ ಉತ್ತಮ ತರಬೇತಿ ಹಾಗೂ ಜ್ಞಾನವನ್ನು ನೀಡಿದ್ದೇವೆ. ಇದರೊಂದಿಗೆ ಸುಸ್ಥಿರ ಕೃಷಿ ಪದ್ಧತಿಯ ಅವಲಂಬನೆಯೊಂದಿಗೆ ಜೋಡಿಸಿದೆವು. ರೈತರಿಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲು ಹಾಗೂ ವಿಸ್ತರಿತ ಸೇವೆಗಳನ್ನು ಒದಗಿಸಲು ನಾವು ಕೃಷಿ ವಿಭಾಗ ಹೊಂದಿದ್ದೇವೆ ಎಂದು ಅಶ್ವನಿ ಹೇಳುತ್ತಾರೆ.


  ಎದುರಾದ ಸವಾಲುಗಳು ಹಾಗೂ ಮುಂದುವರಿದ ಪ್ರಗತಿ:


  ಸಾಂಕ್ರಾಮಿಕದ ಸಮಯದಲ್ಲಿ ಗ್ರಾಹಕರ ಕಡೆಯಿಂದ ಉತ್ತಮ ವ್ಯಾಪಾರ ದೊರಕಿದರೂ ಪೂರೈಕೆ ಸರಪಳಿಯ ಸಮಸ್ಯೆ ಪ್ರತಿಯೊಬ್ಬರನ್ನೂ ಬಾಧಿಸಿತು. ಸಾಂಕ್ರಾಮಿಕದ ನಡುವೆಯೂ ಕಂಪನಿ ತನ್ನ ಗ್ರಾಹಕರಿಗೆ ನಿರಂತರ ಅನುಭವ ನೀಡಿತು. ಲಾಕ್‌ಡೌನ್ ಸಮಯದಲ್ಲಿ ಪೂರೈಕೆ ಸರಪಳಿ ತೊಂದರೆಯಿಂದಾಗಿ ಅನೇಕ ತಯಾರಕರಿಗೆ ನಷ್ಟ ಎದುರಾದರೂ ಅಭೂತಪೂರ್ವ ಸಮಯದಲ್ಲಿ ಫಲಿತಾಂಶಗಳನ್ನು ನೀಡಿತು ಎಂದು ಅಶ್ವನಿ ತಿಳಿಸುತ್ತಾರೆ.


  ಇದನ್ನೂ ಓದಿ: ರಷ್ಯಾದ ಪೆರ್ಮ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ; 8 ಜನ ಸಾವು, 6 ಜನರಿಗೆ ಗಂಭೀರ ಗಾಯ

  ಭಾರತೀಯ ಮಾರುಕಟ್ಟೆಯಲ್ಲಿ ಸಾವಯವ ಅಕ್ಕಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಎಲ್‌ಟಿ ಫುಡ್ಸ್ ಬ್ರ್ಯಾಂಡ್ ಇಕೋಲೈಫ್ ಸಾವಯವ ಅಕ್ಕಿಯ ಮೇಲಿನ ಹತೋಟಿಯನ್ನು ಕಾಯ್ದುಕೊಂಡು ಸುಸ್ಥಿರ ಕೃಷಿ ಪದ್ಧತಿಗಳ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸಂಸ್ಥೆಯು ಸಿದ್ಧ ಆಹಾರಗಳನ್ನು ಪರಿಚಯಿಸಲು ಮತ್ತು ಆಹಾರ ಉತ್ಪನ್ನಗಳ ಇತರ ವರ್ಗಗಳಲ್ಲೂ ತನ್ನ ಅಧಿಪತ್ಯ ಸ್ಥಾಪಿಸುವ ಗುರಿಯನ್ನಿರಿಕೊಂಡಿದೆ.

  Published by:MAshok Kumar
  First published: