• Home
 • »
 • News
 • »
 • national-international
 • »
 • Bateshwar Temple: ಶಿಥಿಲವಾಗಿದ್ದ ಹಿಂದೂ ದೇವಾಲಯಕ್ಕೆ ಮರುಜೀವ ನೀಡಿದ ಡಕಾಯಿತ, ಮುಸ್ಲಿಂ ಪುರಾತತ್ವಶಾಸ್ತ್ರಜ್ಞ!

Bateshwar Temple: ಶಿಥಿಲವಾಗಿದ್ದ ಹಿಂದೂ ದೇವಾಲಯಕ್ಕೆ ಮರುಜೀವ ನೀಡಿದ ಡಕಾಯಿತ, ಮುಸ್ಲಿಂ ಪುರಾತತ್ವಶಾಸ್ತ್ರಜ್ಞ!

ಬಟೇಶ್ವರ ದೇವಾಲಯ

ಬಟೇಶ್ವರ ದೇವಾಲಯ

ಬಟೇಶ್ವರ ದೇವಾಲಯವು ಕುಖ್ಯಾತ ಚಂಬಲ್ ಕಣಿವೆಯ ಭಾಗವಾಗಿದ್ದು ಡಕಾಯಿತರು ಅಲ್ಲಿ ಆಳ್ವಿಕೆ ನಡೆಸಿದ್ದರು ಹಾಗೂ ಈ ಭೂಭಾಗ ಅವರ ವಶದಲ್ಲಿಯೇ ಇತ್ತು. ಇಲ್ಲಿ ಪ್ರಭಾವ ಸ್ಥಾಪಿಸಿದ್ದ ಬೆರಳೆಣಿಕೆಯ ಗ್ಯಾಂಗ್‌ಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ನಿರ್ಭಯ್ ಸಿಂಗ್ ಗುಜ್ಜರ್ ಈ ಅವಶೇಷಗಳನ್ನು ತನ್ನ ನಿವಾಸವನ್ನಾಗಿ ಮಾಡಿಕೊಂಡಿದ್ದ ಎನ್ನಲಾಗಿದೆ.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ಮಧ್ಯಪ್ರದೇಶದ ಗ್ವಾಲಿಯರ್‌ನಿಂದ (Gwalior) ಒಂದು ಗಂಟೆಯ ಪ್ರಯಾಣವು ಬಂಜರು ಭೂಮಿಯಂತಾಗಿರುವ ಬಟೇಶ್ವರ ದೇವಾಲಯದ ದರುಶನವನ್ನು ಮಾಡಿಸುತ್ತದೆ. ಈ ಶತಮಾನದ ಆರಂಭದವರೆಗೆ, 200-ಶಿಥಿಲಗೊಂಡ ದೇವಾಲಯಗಳು ಹೆಚ್ಚಾಗಿ ಕಲ್ಲುಮಣ್ಣುಗಳ ರಾಶಿಯಾಗಿತ್ತು ಎಂದು ಅಧ್ಯಯನಕಾರರ ಮಾತಾಗಿದೆ. ಹೆಚ್ಚಿನ ಜನರಿಗೆ ಪ್ರವೇಶವನ್ನು ನಿರ್ಬಂಧಗೊಳಿಸುವಷ್ಟು ಶಿಥಿಲಾವಸ್ಥೆಯನ್ನು ಈ ದೇವಾಲಯಗಳು ಹೊಂದಿದ್ದವು. 1924 ರಲ್ಲಿಯೇ ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದ್ದ ಆರ್ಕಿಯಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ASI) ತಂಡಗಳು ಸಹ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಸ್ಥಳಕ್ಕೆ ಭೇಟಿ ನೀಡಲು ಸಿದ್ಧರಿರಲಿಲ್ಲ.


  ಡಕಾಯಿತರ ಅಧಿಪತ್ಯದಲ್ಲಿದ್ದ ದೇವಾಲಯ


  ಬಟೇಶ್ವರ ದೇವಾಲಯವು ಕುಖ್ಯಾತ ಚಂಬಲ್ ಕಣಿವೆಯ ಭಾಗವಾಗಿದ್ದು ಡಕಾಯಿತರು ಅಲ್ಲಿ ಆಳ್ವಿಕೆ ನಡೆಸಿದ್ದರು ಹಾಗೂ ಈ ಭೂಭಾಗ ಅವರ ವಶದಲ್ಲಿಯೇ ಇತ್ತು. ಇಲ್ಲಿ ಪ್ರಭಾವ ಸ್ಥಾಪಿಸಿದ್ದ ಬೆರಳೆಣಿಕೆಯ ಗ್ಯಾಂಗ್‌ಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ನಿರ್ಭಯ್ ಸಿಂಗ್ ಗುಜ್ಜರ್ ಈ ಅವಶೇಷಗಳನ್ನು ತನ್ನ ನಿವಾಸವನ್ನಾಗಿ ಮಾಡಿಕೊಂಡಿದ್ದ ಎನ್ನಲಾಗಿದೆ.


  ಇದನ್ನೂ ಓದಿ: Tirupati Tirumala: ತಿರುಪತಿ ದೇವಸ್ಥಾನ 12 ಗಂಟೆ ಬಂದ್


  8 ನೇ ಮತ್ತು 10 ನೇ ಶತಮಾನಗಳ ನಡುವೆ ಆ ಅವಧಿಯಲ್ಲಿ ಉತ್ತರ ಭಾರತದ ಬಹುಭಾಗವನ್ನು ಆಳಿದ ಗುರ್ಜರ ಪ್ರತಿಹಾರ ರಾಜವಂಶದಿಂದ ನಿರ್ಮಿಸಲಾದ ಭವ್ಯವಾದ ದೇವಾಲಯಗಳೇ ಈ ಅವಶೇಷಗಳಾಗಿವೆ ಎಂಬ ವಿವರವೂ ಇದೆ. ರಾಜವಂಶದ ರಾಜರು ಶಿಲ್ಪಿಗಳನ್ನು ಪೋಷಿಸಲು ಹೆಸರುವಾಸಿಯಾಗಿದ್ದರು ಮತ್ತು ಖಜುರಾಹೊದಲ್ಲಿನ ದೇವಾಲಯಗಳು ಸೇರಿದಂತೆ ಹಲವಾರು ದೇವಾಲಯಗಳನ್ನು ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಖಜುರಾಹೊಗೆ ಮುಂಚೆ ನಿರ್ಮಿಸಲಾದ ಬಟೇಶ್ವರ ದೇವಾಲಯಗಳು ಹೆಚ್ಚಾಗಿ ಪ್ರವಾಸಿಗರ ಗಮನಗಳಿಂದ ದೂರ ಉಳಿದಿವೆ ಏಕೆಂದರೆ ಗುಜ್ಜರ್‌ನಂತಹ ಡಕಾಯಿತರು ಈ ಪ್ರದೇಶವನ್ನು ನಿಯಂತ್ರಿಸಿದರು.


  ಡಕಾಯಿತರನ್ನು ಒಲಿಸಿಕೊಳ್ಳುವ ಪುರಾತತ್ವ ಶಾಸ್ತ್ರಜ್ಞರ ಯೋಜನೆ


  ಇದು 2000 ರ ದಶಕದ ಮಧ್ಯಭಾಗದವರೆಗೆ ASI ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಅವರನ್ನು ಮಧ್ಯಪ್ರದೇಶದಲ್ಲಿ ನಿಯೋಜಿಸಲಾಯಿತು, ಆ ಸಮಯದಲ್ಲಿ ಒಂದೊಂದೇ ಅಂಶಗಳು ಬೆಳಕಿಗೆ ಬರಲಾರಂಭಿಸಿದವು. ಮುಹಮ್ಮದ್ ಪ್ರಕಾರ ಚಂಬಲ್‌ನ ಕಣಿವೆಗಳು ಡಕಾಯಿತರಿಂದ ಮುತ್ತಿಕೊಂಡಿದ್ದ ಸಮಯವನ್ನು ನೆನಪಿಸಿಕೊಳ್ಳುವ ಅವರು, ತಮ್ಮ ತಂಡಗಳಿಗೆ ಈ ದೊಡ್ಡ ದೇವಾಲಯದ ಸಂಕೀರ್ಣವನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.


  ಮಧ್ಯವರ್ತಿಗಳ ಮೂಲಕ ಗುಜ್ಜರ್‌ಗೆ ಸಂದೇಶ


  ಈ ಸ್ಥಳಗಳಲ್ಲಿ ಪ್ರಗತಿ ಸಾಧಿಸಲು ಡಕಾಯಿತರುಗಳನ್ನು ವಿಶೇಷವಾಗಿ ಗುಜ್ಜರ್ ಅವರನ್ನು ಪುಸಲಾಯಿಸಿಕೊಳ್ಳಬೇಕು ಎಂಬುದನ್ನು ಮುಹಮ್ಮದ್ ಮನಗಂಡರು. ಅದಕ್ಕಾಗಿ ಮಧ್ಯವರ್ತಿಗಳ ಮೂಲಕ ಗುಜ್ಜರ್‌ಗೆ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ ಅವರು, ದೇವಾಯಗಳಿಗೆ ಪ್ರವೇಶವನ್ನು ಒದಗಿಸುವಂತೆ ವಿನಾಯಿಸಿದರು. ಹೀಗೆ ನಿಧಾನವಾಗಿ ಮುಹಮ್ಮದ್ ಗುಜ್ಜರ್‌ನ ಸ್ನೇಹವನ್ನು ಸಂಪಾದಿಸಿಕೊಂಡರು ಹಾಗೂ ಪುರಾತನ ದೇವಾಯಗಳನ್ನು ಪುನಃಸ್ಥಾಪಿಸುವುದೇ ತಮ್ಮ ಹಾಗೂ ತಂಡದ ಗುರಿ ಎಂಬುದನ್ನು ಆತನಿಗೆ ಮನದಟ್ಟು ಮಾಡಿಸಿದರು ಎಂದು ತಿಳಿಸಿದ್ದಾರೆ. ಇದಕ್ಕೆ ಅಂಗೀಕರಿಸಿದ ಗುಜ್ಜರ್, ತನ್ನ ನೆಲೆಯನ್ನು ಸ್ವಲ್ಪ ಸಮಯದವರೆಗೆ ಬೇರೆಡೆಗೆ ಸ್ಥಳಾಂತರಿಸಲು ಒಪ್ಪಿಕೊಂಡನು ಹಾಗೂ ASI ತಂಡಕ್ಕೆ ಪ್ರವೇಶವನ್ನು ನೀಡಿದನು.


  ಬಟೇಶ್ವರ ದೇವಾಲಯದಲ್ಲಿ ಕಲ್ಲುಮಣ್ಣುಗಳ ರಾಶಿ


  ಬಟೇಶ್ವರ ದೇವಾಲಯಕ್ಕೆ ತಂಡವು ಬಂದಾಗ ಕಲ್ಲುಮಣ್ಣುಗಳ ರಾಶಿಯೇ ಅಲ್ಲಿ ತುಂಬಿತ್ತು ಎಂಬುದಾಗಿ ಮುಹಮ್ಮದ್ ತಿಳಿಸಿದ್ದಾರೆ. ಒಂದು ಕಾಲದಲ್ಲಿ ಭವ್ಯವಾದ ದೇವಾಲಯ ಅಲ್ಲಿತ್ತು ಎಂಬುದಕ್ಕೆ ಯಾವುದೇ ಕುರುಹೇ ಇಲ್ಲದೆ ಮರವು ಬೆಳೆದು ಆಕಾರವನ್ನೇ ನಾಶಪಡಿಸಿತ್ತು. ಸಾಕಷ್ಟು ಶ್ರಮಪಡಬೇಕಾಗಿತ್ತು ಎಂಬುದಾಗಿ ಅಂದಿನ ಸ್ಮರಣೆಯನ್ನು ಮೆಲುಕು ಹಾಕುತ್ತಾರೆ.


  ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಬಟೇಶ್ವರ ದೇವಾಲಯದ ಸ್ಥಿತಿಗತಿಯನ್ನು ನೋಡಲು ಗುಜ್ಜರ್ ಅಜ್ಞಾತವಾಗಿ ಭೇಟಿ ನೀಡಿದ್ದನು ಎಂಬುದಾಗಿ ತಿಳಿಸುವ ಮುಹಮ್ಮದ್ ಆತ ತುಂಬಾ ಸಂತೋಷಪಟ್ಟನೆಂದು ತಿಳಿಸಿದ್ದಾರೆ. ಇಂದು ಅಲ್ಲಿ ಕೊಂಚವಾದರೂ ಮಾರ್ಪಾಡು ನಡೆದಿದೆ ಎಂದಾದರೆ ಅದಕ್ಕೆ ಕಾರಣ ವರ್ಷಗಳ ಕಾಲ ನಡೆದ ಪ್ರಗತಿಯಾಗಿದೆ ಎಂಬುದು ಮುಹಮ್ಮದ್ ಹೇಳಿಕೆಯಾಗಿದೆ.


  ಗುಜ್ಜರ್ ಹಾಗೂ ಮುಹಮ್ಮದ್‌ರ ಭೇಟಿ


  ಆ ಪ್ರದೇಶದಲ್ಲಿ ಗುಜ್ಜರ್ ಆಳ್ವಿಕೆ ನಡೆಸುತ್ತನೆಂಬುದು ಮುಹಮ್ಮದ್‌ಗೆ ಅರಿವಿದ್ದರೂ ಅವರು ಡಕಾಯಿತ ನಾಯಕನನ್ನು ಇದುವರೆಗೆ ಭೇಟಿ ಮಾಡಿರಲಿಲ್ಲ. ಅದಾಗ್ಯೂ ಒಂದು ಸಂಜೆ ಮುಹಮ್ಮದ್ ಅಲ್ಲಿಯವರೆಗೆ ನಡೆದ ಕೆಲಸವನ್ನು ಸಮೀಕ್ಷೆ ನಡೆಸುತ್ತಿದ್ದಾಗ ದೇವಸ್ಥಾನದ ಹೊರಗೆ ಬೀಡಿ ಸೇದುತ್ತಿದ್ದ ಒಬ್ಬ ವ್ಯಕ್ತಿಯನ್ನು ಗಮನಿಸಿದರು. ದೇವಸ್ಥಾನಕ್ಕೆ ಅಗೌರವ ಕೋರಿದ್ದಕ್ಕೆ ಮುಹಮ್ಮದ್ ವ್ಯಕ್ತಿಯನ್ನು ದೂಷಿಸಿದರು. ನಂತರ ಮುಹಮ್ಮದ್‌ಗೆ ಆ ವ್ಯಕ್ತಿ ಯಾರೆಂಬುದು ಅರಿವಾಯಿತು. ಅದು ನಿರ್ಭಯ್ ಸಿಂಗ್ ಗುಜ್ಜರ್ ಆಗಿದ್ದ. ಗುಜ್ಜರ್‌ನೊಂದಿಗೆ ಮುಹಮ್ಮದ್ ತಾವು ನಡೆಸಿರುವ ಕಾಮಗಾರಿ ಹಾಗೂ ಇನ್ನು ಮುಂದೆ ಆಗಬೇಕಾಗಿರುವ ಪ್ರಗತಿಗಳ ಬಗ್ಗೆ ತಿಳಿಸಿದರು. ಆತನಿಂದಲೇ ದೇವಸ್ಥಾನದ ಪ್ರಗತಿ ನಡೆಯಲಿದೆ ಎಂಬುದನ್ನು ಮುಹಮ್ಮದ್ ಗುಜ್ಜರ್‌ಗೆ ಮನವರಿಕೆ ಮಾಡಿಕೊಟ್ಟರು.


  ಕೂಡಲೇ ಆ ಸ್ಥಳವನ್ನು ಖಾಲಿಮಾಡಲು ಒಪ್ಪಿಕೊಂಡ ಗುಜ್ಜರ್‌


  ಇದೊಂದು ಮಹತ್ವದ ಯೋಜನೆಯಾಗಿದೆ ಎಂಬುದನ್ನು ಗುಜ್ಜರ್‌ಗೆ ತಿಳಿಸಿಕೊಟ್ಟ ಮುಹಮ್ಮದ್, ಕೂಡಲೇ ಆ ಸ್ಥಳವನ್ನು ಖಾಲಿಮಾಡಲು ಒಪ್ಪಿಕೊಂಡನು ಹಾಗೂ ಹನುಮಾನ್ ದೇವಾಲಯದಲ್ಲಿ ತನಗೆ ಹಾಗೂ ತಂಡಕ್ಕೆ ಅವಕಾಶ ನೀಡಬೇಕು ಎಂಬ ಷರತ್ತನ್ನು ವಿಧಿಸಿದನು. ಡಕಾಯಿತಿಗೆ ಹೋಗುವ ಮುನ್ನ ತಂಡವು ಹಲವಾರು ವರ್ಷಗಳಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದೆ ಎಂಬುದಾಗಿ ಗುಜ್ಜರ್ ಮುಹಮ್ಮದ್‌ಗೆ ತಿಳಿಸಿದನು.


  ಇದನ್ನೂ ಓದಿ: Tirupati: ಬರೋಬ್ಬರಿ 9.2 ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಅಜ್ಜಿ! ಸತ್ತ ಮೇಲೂ ತೀರಿತು ತಿಮ್ಮಪ್ಪನ ಹರಕೆ!


  ಸ್ವಲ್ಪ ಸಮಯದ ನಂತರ ದೇವಸ್ಥಾನ ಜೀರ್ಣೋದ್ಧಾರಗೊಂಡಂತೆ, ಕಾನೂನಿನ ಕೈಗೆ ಗುಜ್ಜರ್ ಹಾಗೂ ಆತನ ತಂಡ ಸೆರೆಯಾಯಿತು. ಗುಜ್ಜರ್‌ನ ಮರಣದೊಂದಿಗೆ ASI ತನ್ನ ಅತ್ಯಂತ ಶಕ್ತಿಶಾಲಿ ಮಿತ್ರನನ್ನು ಕಳೆದುಕೊಂಡಿತು. ಇದಾದ ನಂತರ ಗಣಿಗಾರಿಕೆ ಮಾಫಿಯ ಡಕಾಯಿತರ ಸ್ಥಾನವನ್ನು ತುಂಬಿತು. ಅದಾಗ್ಯೂ ಈ ದೇವಾಲಯವು ಅಸ್ತಿತ್ವಕ್ಕೆ ಬರಲು ಕಾರಣ ಡಕಾಯಿತರ ನೆರವು ಹಾಗೂ ಪುರಾತತ್ತ್ವ ಶಾಸ್ತ್ರಜ್ಞರ ಹಠಮಾರಿತನವಾಗಿದೆ. ಏಕೆಂದರೆ ಇವರಿಬ್ಬರೂ ಮನಸ್ಸು ಮಾಡಿರದಿದ್ದರೆ ದೇವಾಲಯ ಎಂದೋ ನಾಶವಾಗಿ ಹೋಗುತ್ತಿತ್ತು.

  Published by:Precilla Olivia Dias
  First published: