ಗ್ರಾಹಕರು ಮಾಡುವ ಖರ್ಚು ಕುರಿತಾದ ಸರ್ವೇ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಈ ಸಮೀಕ್ಷಾ ವರದಿಯೂ ಜೂನ್ 19, 2019ರಂದು ಬಿಡುಗಡೆಗೊಳ್ಳಲು ಅನುಮೋದನೆ ಪಡೆದಿದ್ದರೂ ವರದಿಯಲ್ಲಿನ ವಿವರಗಳು ಪ್ರತಿಕೂಲವಾಗಿದ್ದರಿಂದ ತಡೆಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.

news18-kannada
Updated:November 15, 2019, 9:13 PM IST
ಗ್ರಾಹಕರು ಮಾಡುವ ಖರ್ಚು ಕುರಿತಾದ ಸರ್ವೇ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ
ಈ ಸಮೀಕ್ಷಾ ವರದಿಯೂ ಜೂನ್ 19, 2019ರಂದು ಬಿಡುಗಡೆಗೊಳ್ಳಲು ಅನುಮೋದನೆ ಪಡೆದಿದ್ದರೂ ವರದಿಯಲ್ಲಿನ ವಿವರಗಳು ಪ್ರತಿಕೂಲವಾಗಿದ್ದರಿಂದ ತಡೆಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.
  • Share this:
ನವದೆಹಲಿ(ನ.15): ಗ್ರಾಹಕರ ಖರ್ಚು ಕುರಿತಾದ 2017-18ನೇ ಸಾಲಿನ ಸಮೀಕ್ಷೆಯೊಂದು ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾವುದೇ ಕಾರಣಕ್ಕೂ ಈ ಸಮೀಕ್ಷೆ ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಮೀಕ್ಷೆಯ ಅಂಕಿ-ಅಂಶಗಳ ಹರಿಬಿಡುವ ಮೂಲಕ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾರು ಈ ಸಮೀಕ್ಷೆ ಫಾರ್ವಾರ್ಡ್​ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲೀಗ ಕಳೆದ ನಾಲ್ಕು ದಶಕದಲ್ಲಿಯೇ ಮೊದಲ ಬಾರಿಗೆ 2017-18ರಲ್ಲಿ ಶೇ 8.8ರಷ್ಟು ಇಳಿಕೆ ಕಂಡಿದೆ ಎನ್ನಲಾದ ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಸಮೀಕ್ಷೆಯೊಂದು ವೈರಲ್​​ ಆಗಿದೆ.

ಈ ಸಮೀಕ್ಷಾ ವರದಿಯೂ ಜೂನ್ 19, 2019ರಂದು ಬಿಡುಗಡೆಗೊಳ್ಳಲು ಅನುಮೋದನೆ ಪಡೆದಿದ್ದರೂ ವರದಿಯಲ್ಲಿನ ವಿವರಗಳು ಪ್ರತಿಕೂಲವಾಗಿದ್ದರಿಂದ ತಡೆಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: CBI Raids: ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ: ತನಿಖೆ ಮುಂದುವರಿಸಿದ ಅಧಿಕಾರಿಗಳು

ನೋಟು ಅಮಾನ್ಯೀಕರಣ ಬಳಿಕ ಜಿಎಸ್​​ಟಿ ಜಾರಿ ಸಂದರ್ಭದಲ್ಲಿ ಈ ಸಮೀಕ್ಷೆ ಮಾಡಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಗ್ರಹಾಕರು ಆಹಾರಕ್ಕಾಗಿ ಮಾಡುವ ಖರ್ಚು ಭಾರೀ ಕಡಿಮೆ ಎಂದು ವರದಿ ತಿಳಿಸಿತ್ತು. ಇದೀಗ ಕೇಂದ್ರ ಸರ್ಕಾರವೂ ಈ ಸಮೀಕ್ಷೆ ಅಂಕಿ ಅಂಶಗಳ ಪರಾಮರ್ಶಿಸಲು ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯೂ ವರದಿಯಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿತ್ತು ಎಂಬ ಸುದ್ದಿ ಹರಿದಾಡುತ್ತಿದೆ.
---------------
First published: November 15, 2019, 9:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading