House For Sale: ಮನೆ ಮಾರಾಟಕ್ಕಿದೆ, ಒಂದು ಮನೆಗೆ ಬರೀ 87 ರೂಪಾಯಿ! ಎಲ್ಲಿ ಈ ಮನೆ? ಕೊಳ್ಳೋದು ಹೇಗೆ? ಏನೆಲ್ಲಾ ದಾಖಲೆಗಳು ಕೊಡ್ಬೇಕು..ಫುಲ್ ಡೀಟೆಲ್ಸ್

ಸುಂದರವಾದ ಗಲ್ಲಿಗಳು, ಬಣ್ಣಬಣ್ಣದ ಹೂಗಳಿಂದ ತುಂಬಿರೋ ರಸ್ತೆ ಬದಿಯ ಪಾದಾಚಾರಿ ಮಾರ್ಗ.. ಅಲ್ಲೇ ಹತ್ತಿರದಲ್ಲಿ ನೀಲಿ ಸಮುದ್ರ ತೀರ.. ಸ್ವರ್ಗಕ್ಕೆ ಪರ್ಯಾಯ ಪದವೇನೋ ಎನ್ನಿಸುವಂಥಾ ಸ್ವಚ್ಛವಾದ ಸುಂದರ ನೆಮ್ಮದಿಯ ತಾಣ ಈ ಊರು.

ಮಯೆನ್ಜಾ

ಮಯೆನ್ಜಾ

  • Share this:

ಮೇಲ್ನೋಟಕ್ಕೆ ಇದ್ಯಾವುದೋ ಮೋಸದ ಸ್ಕೀಂ ಅಂತ ನಿಮಗೆ ಅನಿಸಿದ್ದರೆ ಆಶ್ಚರ್ಯವಿಲ್ಲ. ಯಾಕೆಂದರೆ ಈ ಆಫರ್ ಇರೋದೇ ಹಾಗೆ. ಆದ್ರೆ ಇದು ನೂರಕ್ಕೆ ನೂರು ಸತ್ಯವಾದ ಆಫರ್. ಈ ಊರಲ್ಲಿ ಅನೇಕ ಮನೆಗಳನ್ನು ಮಾರಾಟಕ್ಕೆ ಇಡಲಾಗಿದೆ(House For Sale). ಒಂದು ಮನೆಯ ಬೆಲೆ ಕೇವಲ 87 ರೂಪಾಯಿ..ಈ ಮಾತನ್ನು ಆ ಊರಿನ ಮುಖ್ಯಸ್ಥ ಅಂದ್ರೆ ಮೇಯರ್ ತಾನೇ ಖುದ್ದಾಗಿ ಘೋಷಿಸಿದ್ದಾನೆ. ಸುಂದರವಾದ ಗಲ್ಲಿಗಳು, ಬಣ್ಣಬಣ್ಣದ ಹೂಗಳಿಂದ ತುಂಬಿರೋ ರಸ್ತೆ ಬದಿಯ ಪಾದಾಚಾರಿ ಮಾರ್ಗ.. ಅಲ್ಲೇ ಹತ್ತಿರದಲ್ಲಿ ನೀಲಿ ಸಮುದ್ರ ತೀರ.. ಸ್ವರ್ಗಕ್ಕೆ ಪರ್ಯಾಯ ಪದವೇನೋ ಎನ್ನಿಸುವಂಥಾ ಸ್ವಚ್ಛವಾದ ಸುಂದರ ನೆಮ್ಮದಿಯ ತಾಣ ಈ ಊರು(Small Town). ಈ ಊರಲ್ಲಿ ಸಾಕಷ್ಟು ಮನೆಗಳಿವೆ, ಅವುಗಳಲ್ಲಿ ಅನೇಕವುಗಳನ್ನು ಅಲ್ಲಿನ ಆಡಳಿತ ಮಾರಲು ಹೊರಟಿದೆ. ಅದರ ಬೆಲೆಯೇ ಒಂದು ಮನೆಗೆ 87 ರೂಪಾಯಿ ಅಥವಾ ಒಂದು ಯೂರೋ.


ಅಂದ್ಹಾಗೆ ಈ ಊರಿನ ಹೆಸರು ಮಯೆನ್ಜಾ.. ಇರೋದು ಇಟಲಿ ದೇಶದಲ್ಲಿ. ಅತ್ಯುತ್ತಮ ಸೌಕರ್ಯ ಇದ್ರೂ ಈ ಊರಿನಲ್ಲಿ ಹೆಚ್ಚು ಜನ ವಾಸವಾಗಿಲ್ಲ. ಆದ್ದರಿಂದ ಜನವಸತಿಯ ಜೊತೆಗೆ ಪ್ರವಾಸೋದ್ಯಮವನ್ನೂ ಉತ್ತೇಜಿಸೋಕೆ ಈ ಪ್ಲಾನ್ ಮಾಡಲಾಗಿದ್ಯಂತೆ. ಈಗಾಗಲೇ ಇಲ್ಲಿ ಮನೆಗಳನ್ನು ಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಸಾಕಷ್ಟು ಜನ ಆಸಕ್ತಿಯಿಂದ ಅಪ್ಲೈ ಮಾಡಿದ್ದಾರಂತೆ. ಆಗಸ್ಟ್ 28ಕ್ಕೆ ಈ ಸೇಲ್ ಮುಗಿಯಲಿದೆ.


ಹಾಗಂತ ನಮಗೆ ಹೆಚ್ಚು ಸಮಯ ಸಿಗುತ್ತಿಲ್ಲ, ನಮಗೂ ಮನೆ ಬೇಕು ಎಂದು ಟೆನ್ಶನ್ ಆಗ್ಬೇಡಿ. ಇನ್ನು ಕೆಲ ದಿನಗಳ ನಂತರ ಒಂದಷ್ಟು ಸಣ್ಣ ಮನೆಗಳನ್ನು ಮಾರಾಟಕ್ಕೆ ಇಡುವುದಾಗಿ ಈ ಪಟ್ಟಣದ ಮೇಯರ್ ಕ್ಲಾಡಿಯೊ ಸ್ಪೆರ್​ಡುಟಿ ಹೇಳಿದ್ದಾರೆ.


ಇದನ್ನೂ ಓದಿ: LIC Policy Revival: ನಿಮ್ಮ ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ಮತ್ತೆ ಬಳಸುವಂತೆ ಮಾಡಬಹುದು, ಹೀಗೆ ಮಾಡಿ

ಪುರಾತನ ಇತಿಹಾಸ ಇರುವ ಈ ಊರು ಪಾಳು ಬಿದ್ದಂತಾಗುವುದನ್ನು ತಡೆಯುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಲೀ ತಿಳಿಸಿದೆ. ಅಂದ್ಹಾಗೆ ಈ ಊರಲ್ಲಿ ಮನೆ ಕೊಳ್ಳಲು ಇಚ್ಛಿಸುವವರು ಮೊದಲಿಗೆ 5 ಸಾವಿರ ಯೂರೋಗಳನ್ನು ಡೆಪಾಸಿಟ್ ಆಗಿ ಇಡಬೇಕು. ಈ ಹಣವನ್ನು 3 ವರ್ಷಗಳವರಗೆ ವಾಪಸ್ ನೀಡುವುದಿಲ್ಲ, ಅಂದ್ರೆ ಕನಿಷ್ಟ 3 ವರ್ಷ ಆ ಮನೆಯನ್ನು ನೀವು ಕೂಡಾ ಯಾರಿಗೂ ಮಾರಲು ಸಾಧ್ಯವಿಲ್ಲ. ನೀವು ಕೊಟ್ಟ ಹಣದಿಂದಲೇ ನಿಮ್ಮ ಮನೆಯ ಸುತ್ತಲಿನ ಪ್ರದೇಶದ ರೆನೊವೇಶನ್ ಮಾಡುತ್ತಾರೆ. ನಂತರವಷ್ಟೇ ಹಣ ಮರಳಿಸುತ್ತಾರೆ.


ಇನ್ನು ನೀವು ಕೊಳ್ಳುವ ಮನೆಯನ್ನು ಏಣು ಮಾಡುತ್ತೀರಿ ಎನ್ನುವುದನ್ನು ಬಹಳ ವಿವರವಾಗಿ ಅರ್ಜಿಯೊಂದಿಗೇ ತಿಳಿಸಬೇಖು. ವಾಸಿಸಲು ಮನೆಯಾಗಿ ಇರಿಸಿಕೊಳ್ತೀರೋ, ಅದನ್ನೊಂದು ರೆಸ್ಟೊರೆಂಟ್ ಆಗಿ ಬದಲಿಸ್ತೀರೋ, ಅಂಗಡಿ ಅಥವಾ ಬಾಡಿಗೆಗೆ ಬಿಡುತ್ತೀರೋ.. ಅದೇನೇ ಮಾಡ್ತೀನಿ ಅಂದರೂ ಅದರ ವಿವರವನ್ನು ಮೊದಲೇ ನೀಡಬೇಕು. ಇಷ್ಟೆಲ್ಲಾ ನಿಯಮಗಳಿಗೆ ನೀವು ಓಕೆ ಅಂದ್ರೆ ಅಲ್ಲಿಗೆ ಆ ಮನೆ ನಿಮ್ದೇ.


ಇದನ್ನೂ ಓದಿ: Sri lanka; ಕೋವಾಕ್ಸಿನ್ ಲಸಿಕೆ ಪಡೆದವರೂ ಈಗ ಶ್ರೀಲಂಕಾಗೆ ಹೋಗಬಹುದು; ಕ್ವಾರಂಟೈನ್ ಸಹ ಇಲ್ಲ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: