ದೇಶಾದ್ಯಂತ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಹುನ್ನಾರ, ಸದ್ಯ ಪ್ರಸ್ತಾವನೆ ಇಲ್ಲ- ಜಾವಡೇಕರ್ ಸ್ಪಷ್ಟನೆ

ಹೊಸ ಶಿಕ್ಷಣ ನೀತಿ ಸಮಿತಿಯ ಕರಡು ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳು ದಾರಿ ತಪ್ಪಿಸುತ್ತಿವೆ ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

HR Ramesh | news18
Updated:January 10, 2019, 11:55 AM IST
ದೇಶಾದ್ಯಂತ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಹುನ್ನಾರ, ಸದ್ಯ ಪ್ರಸ್ತಾವನೆ ಇಲ್ಲ- ಜಾವಡೇಕರ್ ಸ್ಪಷ್ಟನೆ
ಪ್ರಕಾಶ್ ಜಾವಡೇಕರ್
HR Ramesh | news18
Updated: January 10, 2019, 11:55 AM IST
ನವದೆಹಲಿ: ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ನೇಮಿಸಲಾಗಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ವರದಿಯಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆಯನ್ನು 8ನೇ ತರಗತಿವರೆಗೂ ಕಡ್ಡಾಯಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ. ಆದರೆ, ಈ ವಾದವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ  ಪ್ರಕಾಶ್ ಜಾವಡೇಕರ್ ತಳ್ಳಿಹಾಕಿದ್ದಾರೆ.

ಹಿಂದಿ ಭಾಷೆಯನ್ನು 8ನೇ ತರಗತಿವರೆಗೆ ಕಡ್ಡಾಯಗೊಳಿಸುವಂತೆ ಹೊಸ ಶಿಕ್ಷಣ ನೀತಿ ಸಮಿತಿ ಶಿಫಾರಸು ಮಾಡಿದೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು. ಶಿಕ್ಷಣದಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು  ಜಾವಡೇಕರ್ ತಿಳಿಸಿದ್ದಾರೆ.

ಹೊಸ ಶಿಕ್ಷಣ ನೀತಿ ಸಮಿತಿಯ ಕರಡು ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳು ದಾರಿ ತಪ್ಪಿಸುತ್ತಿವೆ ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.


Loading...

ಪ್ರಸ್ತುತ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಹಿಂದಿ ಭಾಷೆ ಮಾತನಾಡದ ರಾಜ್ಯಗಳ ಶಾಲೆಗಳಲ್ಲಿ ಹಿಂದಿ ಭಾಷೆ ಕಡ್ಡಾಯವಿಲ್ಲ.

ಇಂಡಿಯನ್ ಎಕ್ಸ್​ಪ್ರೆಸ್​ ಪತ್ರಿಕೆಯ ವರದಿ ಪ್ರಕಾರ, ಪ್ರಾಥಮಿಕ ಶಿಕ್ಷಣವನ್ನು (5ನೇ ತರಗತಿ) ಸ್ಥಳೀಯ ಭಾಷೆಯಲ್ಲಿ ನೀಡುವುದು ಹಾಗೂ ದೇಶಾದ್ಯಂತ ಗಣಿತ ಮತ್ತು ವಿಜ್ಞಾನ ಪಠ್ಯದಲ್ಲಿ ಏಕರೂಪತೆ ತರಬೇಕು ಎಂಬ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿ ಇವೆ ಎಂದು ಹೇಳಲಾಗಿದೆ.

ಇದನ್ನು ಓದಿ: ಇಂಗ್ಲಿಷ್ ಮಾಧ್ಯಮ ಶಾಲೆಗೆ ನನ್ನ ಸಂಪೂರ್ಣ ಬೆಂಬಲ;​ ಸಿದ್ದರಾಮಯ್ಯಗೆ ಟಾಂಗ್​ ಕೊಟ್ಟ ಎಚ್​.ಡಿ ರೇವಣ್ಣ
 ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಂದೀಪ್ ದೇಶಪಾಂಡೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಯಾವಾಗಲೂ ಹಿಂದಿ, ಹಿಂದೂ, ಹಿಂದೂಸ್ತಾನದ ಬಗ್ಗೆಯೇ ವಾದಿಸುತ್ತಾ ಬಂದಿದೆ. ಹಿಂದಿ ಕಡ್ಡಾಯವಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಹಿಂದಿಗೆ ಯಾವುದೇ ವಿಶೇಷ ಪ್ರಾತಿನಿದ್ಯ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಶಿವಸೇನೆ ಕೂಡ, ಪ್ರಾದೇಶಿಕ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದೆ.


1968ರಲ್ಲಿ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಮೊದಲ ಶಿಕ್ಷಣ ನೀತಿಯನ್ನು ಘೋಷಿಸಲಾಗಿತ್ತು. 1986ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಎರಡನೇ ಶಿಕ್ಷಣ ನೀತಿ ಜಾರಿಗೊಂಡಿತ್ತು.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ