ಮಿಲಿಂದ್ ಡಿಯೋರಾ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿಂಧ್ಯಾ ರಾಜೀನಾಮೆ

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಮಿಲಿಂದ್​​ ಡಿಯೋರ್​​ ಶಿವಸೇನೆ-ಬಿಜೆಪಿ ಮೈತ್ರಿ ಅಭ್ಯರ್ಥಿ ಎದುರು ಮುಂಬೈ ದಕ್ಷಿಣದಿಂದ ಕಣಕ್ಕಿಳಿದಿದ್ದರು. ಶಿವಸೇನೆ ಸಂಸದ ಅರವಿಂದ್​ ಸಾವಂತ್​​ ವಿರುದ್ಧ ಹೀನಾಯ ಸೋಲು ಕಂಡಿದ್ದರು.

Ganesh Nachikethu
Updated:July 7, 2019, 5:56 PM IST
ಮಿಲಿಂದ್ ಡಿಯೋರಾ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿಂಧ್ಯಾ ರಾಜೀನಾಮೆ
ಡಿಯೋರಾ ಮತ್ತಿ ಸಿಂಧ್ಯಾ
  • Share this:
ನವದೆಹಲಿ(ಜುಲೈ.07): ಮುಂಬೈ ಕಾಂಗ್ರೆಸ್​​ ಮುಖ್ಯಸ್ಥ ಸ್ಥಾನಕ್ಕೆ ಮಿಲಿಂದ್​​ ಡಿಯೋರಾ ರಾಜೀನಾಮೆ ನೀಡಿದ್ದಾರೆ. ಬಳಿಕ ನ್ಯೂಸ್​​-18 ಜೊತೆಗೆ ಮಾತಾಡಿದ ಇವರು, ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಮುಂಬೈ​​​ ಘಟಕದ ಮೇಲ್ವಿಚಾರಣೆಗಾಗಿ ಕಾಂಗ್ರೆಸ್ಸಿನ ಮೂವರು ಹಿರಿಯ ನಾಯಕರ ನೇತೃತ್ವದಲ್ಲಿ ತಾತ್ಕಲಿಕ ಸಮಿತಿಗೆ ಶಿಫಾರಸು ಮಾಡಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಯವರ ನೇತೃತ್ವದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರೆ ತೆಗೆದುಕೊಳ್ಳಲಾಗಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷ ಬಲಪಡಿಸುವ ಸಲುವಾಗಿಯೇ ರಾಜೀನಾಮೆ ನೀಡಿದ್ದೇನೆ ಎಂದು ಮಿಲಿಂದ್​​ ಡಿಯೋರಾ ತಿಳಿಸಿದ್ದಾರೆ.

ಹಾಗೆಯೇ ಬಿಜೆಪಿ-ಶಿವಸೇನೆ ಮೈತ್ರಿಯನ್ನು ಹಿಂದಿಕ್ಕಿ ಕಾಂಗ್ರೆಸ್​​​ ಪಕ್ಷ ಸಂಘಟಿಸುವುದು ದೊಡ್ಡ ಸವಾಲ್​​ ಆಗಿದೆ. ಹೀಗಾಗಿಯೇ ಪಕ್ಷ ಬಲವರ್ಧನೆಗಾಗಿ ಹಿರಿಯ ಕಾಂಗ್ರೆಸ್ಸಿಗರನ್ನು ನೇಮಕ ಮಾಡುವಂತೆ ಕೇಳಿಕೊಂಡಿರುವೆ. ಕಳೆದ ಜೂನ್​​ 26ಕ್ಕೆ ನಡೆದಿದ್ದ ರಾಹುಲ್​​ ಗಾಂಧಿ ನೇತೃತ್ವದ ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅವರ ಸೂಚನೆ ಮೇರೆಗೆ ನಾನು ಸ್ಥಾನ ತ್ಯಜಿಸುತ್ತಿದ್ದೇನೆ ಎನ್ನುತ್ತಾರೆ ಡಿಯೋರಾ.

ಇದನ್ನೂ ಓದಿ: ರಾಜೀನಾಮೆ ವಾಪಸ್ಸು​​ ತೆಗೆದುಕೊಳ್ಳಿ: ಶಿಷ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಾಕೀತು

ಇನ್ನು ಅಖಿಲ ಭಾರತ ಕಾಂಗ್ರೆಸ್​​ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕರ್ಜುನ್ ಖರ್ಗೆ ಮತ್ತು ಕೆ.ಸಿ ವೇಣುಗೋಪಾಲ್ ಅವರಿಗೂ ನನ್ನ ರಾಜೀನಾಮೆ ವಿಚಾರ ತಿಳಿಸಿದ್ದೇನೆ. ಇದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್​​ ಸಂಘಟಿಸುವ ಸಮಯವಾಗಿದೆ. ಇದು ನನ್ನ ಪಾಲಿಗೆ ಅದೃಷ್ಟದ ಸಂಗತಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಮಿಲಿಂದ್​​ ಡಿಯೋರ್​​ ಶಿವಸೇನೆ-ಬಿಜೆಪಿ ಮೈತ್ರಿ ಅಭ್ಯರ್ಥಿ ಎದುರು ಮುಂಬೈ ದಕ್ಷಿಣದಿಂದ ಕಣಕ್ಕಿಳಿದಿದ್ದರು. ಶಿವಸೇನೆ ಸಂಸದ ಅರವಿಂದ್​ ಸಾವಂತ್​​ ವಿರುದ್ಧ ಹೀನಾಯ ಸೋಲು ಕಂಡಿದ್ದರು.

ಸಿಂಧ್ಯಾ ರಾಜೀನಾಮೆ: ಮಿಲಿಂದ್​ ಡಿಯೋರಾ ಬೆನ್ನಲ್ಲೇ ಕಾಂಗ್ರೆಸ್​​ ಮತ್ತೋರ್ವ ಯುವ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ಸಿಂಧ್ಯಾ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.ನಾನು ಸೋಲಿನ ಹೊಣೆ ಹೊತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿ ಅವರಿಗೆ ಕಳಿಸಲಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ್ದ ಹೈಕಮಾಂಡ್​​ಗೆ ಧನ್ಯವಾದ ಎಂದಿದ್ದಾರೆ.------------
First published:July 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ