ಹೋಟೆಲ್ ನಲ್ಲಿ ಇಡ್ಲಿ ತಿಂದರೆ ಕ್ಯಾನ್ಸರ್ ಗ್ಯಾರಂಟಿ !!!

zahir
Updated:August 27, 2018, 9:54 PM IST
ಹೋಟೆಲ್ ನಲ್ಲಿ ಇಡ್ಲಿ ತಿಂದರೆ ಕ್ಯಾನ್ಸರ್ ಗ್ಯಾರಂಟಿ !!!
zahir
Updated: August 27, 2018, 9:54 PM IST
 

 

- ಶಿವಾಜಿ ರತ್ನ, ನ್ಯೂಸ್ 18 ಕನ್ನಡ

IDLY
I :   I
D : DONT
Loading...

L :  LEAVE
Y :  YOU

ಹೌದು ಇನ್ನು ಹೋಟೆಲ್ ಗಳಲ್ಲಿ ಇಡ್ಲಿ ತಿನ್ನುವ ಮುನ್ನ ಯೋಚಿಸುವ ಕಾಲ ಬಂದಿದೆ. ನಿಮ್ಮ ನೆಚ್ಚಿನ ಬೆಳಗಿನ ಉಪಾಹಾರ ನಿಮಗೆ ಆ ಭಯಾನಕ ಖಾಹಿಲೆ ತಂದಿಡುವುದು ಖಚಿತ.   ಪ್ರತಿದಿನ ಹೋಟೆಲ್ ನಲ್ಲಿ ಇಡ್ಲಿ ತಿಂದವರೆಲ್ಲರೂ ಈ ಸುದ್ದಿ ಓದಿದೆ ಮೇಲೆ ಒಮ್ಮೆ ಆಸ್ಫತ್ರೆ ಕಡೆಗೆ ಓಡುವುದು ಖಚಿತ. ಇಡ್ಲಿಯೆಂದರೆ ಹೆದರುವುದಂತೂ ಪಕ್ಕಾ. ಅರೆ ಏನಿದು ಈ ಆಘಾತಕಾರಿ ಸುದ್ದಿ !!? ಕ್ಯಾನ್ಸರ್ ನಂತಹ ಅತೀ ಭಯಾನಕ ಖಾಹಿಲೆಯನ್ನ ಇಡ್ಲಿ ತಂದಿಡುವುದು ನಿಜವಾ? ಅಂತದ್ದೇನಿದೆ ಇಡ್ಲಿಯಲ್ಲಿ!!? 

ದುಂಡನೆಯ ಆಕರ್ಷಕ ಬಿಳಿ ಬಣ್ಣದ ಇಡ್ಲಿಗೆ ಮನಸೋಲದವರು ಯಾರಿದ್ದಾರೆ ಹೇಳಿ? ಇಡ್ಲಿ ಭಾರತೀಯರ ನೆಚ್ಚಿನ ಬೆಳಗಿನ ಉಪಾಹಾರ. ಶ್ರೀಲಂಕಾದ ದಕ್ಷಿಣ ಭಾಗದಲ್ಲು ಇಡ್ಲಿ ಬಹುತೇಕರ ಬೆಳಗಿನ ಉಪಾಹಾರವಾಗಿದೆ. ತಮಿಳುನಾಡಿನಲ್ಲಂತೂ ಇಡ್ಲಿ ಸಿಗದ ಹೋಟೆಲ್ ಗಳೇ ಇಲ್ಲಾ ಅನ್ನಬಹುದು. ತಮಿಳುನಾಡಿನಿಂದ ಇಡ್ಲಿ ಶ್ರೀಲಂಕಾದ ದಕ್ಷಿಣ ಭಾಗದ ಜನರಿಗೆ ಪರಿಚಯಗೊಂಡಿತೆಂದು ಅಲ್ಲಿನ ಜನ ಇಡ್ಲಿ ರಾವಣ ರಾಜ್ಯಕ್ಕೆ ಕಾಲಿಟ್ಟ ಕಥೆ ಹೇಳುತ್ತಾರೆ.ಇನ್ನು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಪರಿಚಯಿಸಿದ ಒಂದು ರೂಪಾಯಿಯ "ಅಮ್ಮ ಇಡ್ಲಿ" ಇಂದು ದೇಶಾದಂತ್ಯ ಖ್ಯಾತಿ ಪಡೆದಿದೆ. ಬಹುಶಃ ಇಡ್ಲಿಯಷ್ಟು ಖ್ಯಾತಿ ಹೊಂದಿದ ಉಪಾಹಾರ ಭಾರತದಲ್ಲಿ ಮತ್ತೊಂದಿಲ್ಲಾ ಎನ್ನಬಹುದು. ಇಡ್ಲಿಗೆ ಭಾರತದಲ್ಲಿ ಸಾವಿರಾರು ವರ್ಷದ ಇತಿಹಾಸವಿದೆ. ಭಾರತದ ಬಹುತೇಕ ಹೋಟೆಲ್ ಗಳಲ್ಲಿ ಬೆಳೆಗ್ಗೆ ಆರು ಗಂಟೆಗೆಲ್ಲಾ ಮೊದಲು ಸಿದ್ದವಾಗುವ ಉಪಾಹಾರವೆಂದರೆ ಬಿಸಿಬಿಸಿ ಇಡ್ಲಿ. ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ತಿಂಡಿ ಈ ಇಡ್ಲಿ . ಭಾರತದಲ್ಲಿ ಬಹುತೇಕರು ಬೆಳಗಿನ ಉಪಾಹಾರಕ್ಕೆ ಇಡ್ಲಿ ಸೇವಿಸುತ್ತಾರೆ.

ತ್ವರಿತ ಜೀವನ ಶ್ಯೆಲಿಯಿಂದಾಗಿ ಕ್ಯಾನ್ಸರ್ ಕಾರಕ ಹೋಟೆಲ್ ಇಡ್ಲಿಯ ಮೊರೆಹೋದ ಜನ!! 

 

ಇಂದು ಈ ಇಡ್ಲಿಯನ್ನ ಜನ ಹೋಟೆಲ್ ನಲ್ಲಿ ಸೇವಿಸುವ ಕಾರಣ, ಇಡ್ಲಿ ತಯಾರಿಸುವ ಶ್ರಮ. ಇತ್ತೀಚೆಗೆ ಮನೆಗಳಲ್ಲಿ ಇಡ್ಲಿ ತಾಯಾರಿಸುವುದನ್ನು ಬಹುತೇಕರು ನಿಲ್ಲಿಸಿದ್ದಾರೆ. ಕಾರಣ, ಇವತ್ತು ಇಡ್ಲಿ ತಿನ್ನಬೇಕಾದರೆ. ಒಂದು ದಿನದ ಹಿಂದೆಯಿಂದಲೇ ಇಡ್ಲಿ ತಯಾರಿಸುವ ಕಾರ್ಯ ಶುರುವಾಗುತ್ತದೆ. ಮೊದಲು ಅಕ್ಕಿಯನ್ನು  ಹಾಗೂ ಅಕ್ಕಿಯ ಜೊತೆಗೆ ಒಂದಷ್ಟು ಉದ್ದಿನ ಬೇಳೆಯನ್ನು ನೆನಸಬೇಕು. ನೆನೆಸಿದ ಅಕ್ಕಿ ಹಾಗೂ ಉದ್ದಿನ ಬೇಳೆ ರುಬ್ಬಲು ಯೋಗ್ಯವಾದ ಮೇಲೆ ಅದನ್ನು ಮಿಕ್ಸಿ ಅಥವಾ ಗ್ರ್ಯೆಂಡರ್ ನಲ್ಲಿ ರುಬ್ಬಿಕೊಳ್ಳಬೇಕು. ತಯಾರಾದ ಹಿಟ್ಟಿಗೆ ಒಂದೆರಡು ಚಮಚ ಸೋಢ ಸೇರಿಸಿ ಈಡೀ ರಾತ್ರಿ ಇಡಬೇಕು. ಹೀಗೆ ಇಟ್ಟಾಗ ಮುಂಜಾನೆಗೆ ಆ ಹಿಟ್ಟು ಇಡ್ಲಿ ತಯಾರಿಸಲು ಯೋಗ್ಯವಾಗುತ್ತದೆ. ಇಷ್ಟೆಲ್ಲಾ ಶ್ರಮವಹಿಸಿ ಮಾಡಬೇಕಾದ ಇಡ್ಲಿಯನ್ನು ಈ ಆಧುನಿಕ ತ್ವರಿತಗತಿಯ ಬದುಕಿಗೆ ಸಿಲುಕಿದ ಜನ ಕ್ರಮೇಣ ಮನೆಯಲ್ಲಿ ತಯಾರಿಸುದನ್ನು ನಿಲ್ಲಿಸಿದರು. ಇದರಿಂದ ಹೋಟೆಲ್ ಮಾಲಿಕರಿಗೆ ಇಡ್ಲಿ ಹೆಚ್ಚು ಆಧಾಯ ತಂದುಕೊಡುವ ತಿನಿಸಾಯಿತು. ಬಹುತೇಕ ಹೋಟೆಲ್ ಗಳು ಇಡ್ಲಿಯನ್ನು ತಪ್ಪದೇ ಪ್ರತಿದಿನ ತಯಾರಿಸಿದವು.

ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಸೇರುವುದೇಗೆ?ಸಾಮಾನ್ಯವಾಗಿ ಮನೆಗಳಲ್ಲಿ ಇಡ್ಲಿ ತಯಾರಿಸಲು ಶುದ್ಧವಾದ ಬಟ್ಟೆಯನ್ನ ಬಳಸುತ್ತಾರೆ. ಹಿಂದೆ ಹೋಟೆಲ್ ಗಳಲ್ಲೂ ಬಟ್ಟೆಯನ್ನೇ ಬಳಸುತ್ತಿದ್ದರು. ಕ್ರಮೇಣ ಬಟ್ಟೆ ಬಳಸುವುದು ಹಾಗು ಬಳಸಿದ ಬಟ್ಟೆಯನ್ನು ಶುದ್ಧಗೊಳಿಸಿ ಪುನಃ ಬಳಸುವುದು ತುಸು ಕಷ್ಟದ ಕೆಲಸವಾದ ಕಾರಣ, ತಮ್ಮ ಕೆಲಸವನ್ನು ಸುಲಭವಾಗಿಸಲು ಹೋಟೆಲ್ ಗಳು ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಕವರ್ ಗಳನ್ನ ಬಳಸಲು ಶುರುವಿಟ್ಟು ಕೊಂಡವು. ಬಟ್ಟೆಯಲ್ಲಿ ಬೇಯುವ ಇಡ್ಲಿಯನ್ನು ಬೆಂದ ಮೇಲೆ ಬಟ್ಟೆಯಿಂದ ಬಿಡಿಸುವುದು ತುಸು ಘಾಸಿ ಕೆಲಸ, ಅದೇ ಪ್ಲಾಸ್ಟಿಕ್ ನಲ್ಲಿ ಇಡ್ಲಿಯನ್ನು ಅತೀ ಸುಲಭವಾಗಿ ಬಿಡಿಸಬಹುದು. ಇಂದು ಪ್ಲಾಸ್ಟಿಕ್ ನಮ್ಮ ಪರಿಸರನ್ನ ಯಾವ ಮಟ್ಟಕ್ಕೆ ಹದಗೆಡಿಸಿದೆ ಎಂಬ ಸಂಗತಿ ನಮಗೆಲ್ಲಾ ತಿಳಿದೇ ಇದೆ. ಜಗತ್ತಿನ ಎಷ್ಟೋ ರಾಷ್ಟ್ರಗಳು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಿದೆ. ಭಾರತವೂ ಸಹ ಪ್ಲಾಸ್ಟಿಕ್ ನಿಷೇಧಿಸಲು ಮುಂದಾದರೂ ಅಷ್ಟರ ಮಟ್ಟಿಗೆ ಯಶಸ್ವಿಯಾಗಲಿಲ್ಲಾ. ಕಾರಣ ಜನ ಪ್ಲಾಸ್ಟಿಕ್ ಬಳಕೆಗೆ ಅಷ್ಟೋಂದು ಒಗ್ಗಿಕೊಂಡು ಬಿಟ್ಟಿದ್ದರು. ನಮ್ಮ ಪರಿಸರ ಹಾಗೂ ಭೂಮಿಯ ಮೇಲೆ ಏನೆಲ್ಲಾ ದುಷ್ಪರಿಣಾಮ ತಂದೊಡ್ಡುವ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿದರೆ ಉಂಟಾಗುವ ಹಾನಿ ಊಹಿಸಲಸಾದ್ಯ. ಕ್ಯಾನ್ಸರ್ ನಂತಹ ಮಾರಕ ಖಾಹಿಲೆಗೆ ತುತ್ತಾಗುವುದಂತೂ ಖಚಿತ.

ನಮ್ಮ ನಿಮ್ಮ ದೇಹ ಸೇರುತ್ತಿದೆ ಹಾನಿಕಾರಕ ಪ್ಲಾಸ್ಟಿಕ್ ಅಂಶ!!!ಹೌದು ನಮ್ಮ ದೇಶದ ಖ್ಯಾತ ಉಪಾಹಾರವಾದ ಇಡ್ಲಿಯನ್ನು ಹೋಟೆಲ್ ಗಳಲ್ಲಿ ಸೇವಿಸುವುದರ ಮೂಲಕ ಮಾರಕ ಪ್ಲಾಸ್ಟಿಕ್ ಅಂಶವನ್ನು ನಮ್ಮ ದೇಹದೊಳಗೆ ಸೇರಿಸುತ್ತಿದ್ದೇವೆ. ಹೋಟೆಲ್ ನಲ್ಲಿ ತಯಾರಾಗುವ ಇಡ್ಲಿ ಮಾರಕ ಪ್ಲಾಸ್ಟಿಕ್ ಕವರ್ ಗಳಲ್ಲಿ ಬೇಯುತ್ತವೆ. ಇಡ್ಲಿ ತಯಾರಾಗುವ ತಾಪಮಾನದಲ್ಲಿ ಪ್ಲಾಸ್ಟಿಕ್ ಬೆಂದರೆ ಏನಾಗಬಹುದೆಂದು ಊಹಿಸಿ. ಪ್ಲಾಸ್ಟಿಕ್ ಬೆಂದಾಗ ದ್ರವ ರೂಪದಲ್ಲಿ ಇಡ್ಲಿಯನ್ನು ಸೇರುತ್ತದೆ. ಇಡ್ಲಿಯೊಂದಿಗೆ ಪ್ಲಾಸ್ಟಿಕ್ ನ ಅಂಶವೂ ನಮ್ಮ ದೇಹ ಸೇರುತ್ತದೆ. ಆ ಪ್ಲಾಸ್ಟಿಕ್ ನ ಅಂಶ ದೇಹದಲ್ಲಿ ತಂದೊಡ್ಡಬಹುದಾದ ಆಘಾತಕಾರಿ ಪರಿಣಾಮಗಳನ್ನ ಊಹಿಸಿ.

ಇಂದು ಪ್ರತಿದಿನ ಜನ ಹೋಟೆಲ್ ಗಳಲ್ಲೇ ಇಡ್ಲಿ ಸೇವಿಸುತ್ತಿದ್ದಾರೆ. ಆರೋಗ್ಯ ಹದಗೆಟ್ಟಾಗ ವ್ಯದರು ಇಡ್ಲಿ ಸೇವಿಸಲು ಸೂಚಿಸುವುದು ಸಾಮಾನ್ಯ ಅಂತಹ ಇಡ್ಲಿಯೇ ಕ್ಯಾನ್ಸರ್ ನಂತಹ ಮಾರಕ ಖಾಹಿಲೆಗೆ ಕಾರಣವಾಗುತ್ತದೆಯೆಂದರೆ ನಂಬಲು ಕಷ್ಟಸಾದ್ಯ. ಇಂದು ಪ್ರತಿದಿನ ತಾಯಂದಿರು ಬೆಳಗಿನ ತರಾತುರಿಗೆ ಪುಟ್ಟ ಮಕ್ಕಳ ಟಿಫನ್ ಬಾಕ್ಸಿಗೆ ಹೋಟೆಲ್ ನ ಇಡ್ಲಿಯ ಮೇಲೆಯೇ ಅವಲಂಬಿತವಾಗಿದ್ದಾರೆ. ಪುಟ್ಟ ಮಕ್ಕಳ ದೇಹದೊಳಗೆ ಪ್ರತಿದಿನ ಪ್ಲಾಸ್ಟಿಕ್ ಅಂಶವೂ ಸೇರುತ್ತಿದೆ ಎಂದರೆ ಧಿಘ್ಬ್ರಮೆಯಾಗುವುದು ಖಚಿತ.

ಆರೋಗ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕ್ಯೆಗೊಳ್ಳಬೇಕಿದೆ.ಈ ಬಗ್ಗೆ ದೇಶದ ಆರೋಗ್ಯ ಇಲಾಖೆ ಎಚ್ಚುತ್ತುಕೊಳ್ಳಬೇಕಿದೆ. ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ತಯಾರಾಗುವ ಇಡ್ಲಿಗೆ ಬ್ರೇಕ್ ಹಾಕಬೇಕಿದೆ. ಇದರ ಕುರಿತು ಒಂದು ಗಂಭೀರ ಅದ್ಯಯನ ಶೀಘ್ರದಲ್ಲಿ ಆಗಬೇಕಿದೆ. ಎಷ್ಟೋಸಲ ವ್ಯೆಕ್ತಿಗೆ ಕ್ಯಾನ್ಸರ್ ಉಂಟಾದ ಕಾರಣವನ್ನು ಭೇಧಿಸುವಲ್ಲಿ ವ್ಯೆದರೂ ಸೋತ್ತಿದ್ದಾರೆ. ಕ್ಯಾನ್ಸರ್ ದೇಹದಲ್ಲಿ ಹಲವು ವರ್ಷಗಳಲ್ಲಿ ಹಂತಹಂತವಾಗಿ ಬೆಳೆಯುವ ಒಂದು ಕ್ರಿಯೆ. ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾದ ಜೀವಗಳಿಗೆ, ಕ್ಯಾನ್ಸರ್ ಉಂಟಾಗಲು ಕಾರಣ ಈ ಇಡ್ಲಿಯೂ ಆಗಿದ್ದರೆ ಆಶ್ಚರ್ಯವಿಲ್ಲಾ. ತಮ್ಮ ಕೆಲಸವನ್ನು ಸುಲಭಗೊಳಿಸಲು ಇಂದು ಹೋಟೆಲ್ ಗಳು ತಿಳಿದೋ ತಿಳಿಯದಲೆಯೋ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಆರೋಗ್ಯ ಇಲಾಖೆ ಇದರ ಕುರಿತು ಸೂಕ್ತ ಕ್ರಮ ಕ್ಯೆಗೊಳ್ಳುವವರೆಗೂ ಜನ ಹೋಟೇಲ್ ಗಳಲ್ಲಿನ ಇಡ್ಲಿ ಸೇವನೆಗೆ ಬ್ರೇಕ್ ಹಾಕುವುದು ಒಳಿತು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...