Service Charge: ಹೋಟೆಲ್​ಗಳಲ್ಲಿ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ಪಡೆದರೆ ಈ ಸಹಾಯವಾಣಿಗೆ ದೂರು ನೀಡಿ

ಹೋಟೆಲ್/ರೆಸ್ಟೋರೆಂಟ್ ಬಿಲ್‌ನಲ್ಲಿನ ಸೇವಾ ಶುಲ್ಕವನ್ನು ಗ್ರಾಹಕರಿಂದ ಬೇರೆ ಯಾವುದೇ ಹೆಸರಿನಿಂದ ಸಂಗ್ರಹಿಸಬಾರದು. ಅಲ್ಲದೇ ಆದೇಶದ ಪ್ರಕಾರ ಅದನ್ನು ಆಹಾರದ ಬಿಲ್‌ಗೆ ಸೇರಿಸುವಂತಿಲ್ಲ ಎಂದು ಮಾರ್ಗಸೂಚಿಯು ಸ್ಪಷ್ಟವಾಗಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವಲ್ಲಿ ವಿಶೇಷ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಬಳಿ ಅನ್ಯಾಯದಿಂದ ಅಥವಾ ಒತ್ತಾಯದಿಂದ ಹಣ (Forced Service Charge) ಪಡೆಯುವುದಕ್ಕೆ ತಡೆ ಹಾಕಿದ. ಈಮೂಲಕ  ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಸೇವಾ ಶುಲ್ಕ ಪಾವತಿಸುವಂತೆ ಒತ್ತಾಯಿಸುವಂತಿಲ್ಲ.  ಸೇವಾ ಶುಲ್ಕ ನೀಡುವುದು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಅಥವಾ ಸ್ವಯಂಪ್ರೇರಿತ ಆಯ್ಕೆಯಾಗಿದೆ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (Central Consumer Protection Authority) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವಲ್ಲಿ ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

  ಹೋಟೆಲ್ ಮತ್ತು ರೆಸ್ಟೊರೆಂಟ್​ಗಳಲ್ಲಿ ಸೇವಾ ಶುಲ್ಕ ನೀಡುವುದು ಗ್ರಾಹಕರ ಐಚ್ಛಿಕ, ಸ್ವಯಂಪ್ರೇರಿತ ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಮಾರ್ಗಸೂಚಿ ತಿಳಿಸುತ್ತದೆ.

  ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ಪಡೆದರೆ ಯಾರಿಗೆ ಕರೆ ಮಾಡಬೇಕು?
  CCPA ಆದೇಶದ ಪ್ರಕಾರ, ಸೇವಾ ಶುಲ್ಕ ವಿಧಿಸುವ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳ ವಿರುದ್ಧ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ರಲ್ಲಿ ದೂರುಗಳನ್ನು ಸಲ್ಲಿಸಬಹುದು ಎಂದು ಸಹ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.   

  ಆಹಾರದ ಬಿಲ್​ನಲ್ಲಿ ಸೇರಿಸುವಂತಿಲ್ಲ
  ಹೋಟೆಲ್/ರೆಸ್ಟೋರೆಂಟ್ ಬಿಲ್‌ನಲ್ಲಿನ ಸೇವಾ ಶುಲ್ಕವನ್ನು ಗ್ರಾಹಕರಿಂದ ಬೇರೆ ಯಾವುದೇ ಹೆಸರಿನಿಂದ ಸಂಗ್ರಹಿಸಬಾರದು. ಅಲ್ಲದೇ ಆದೇಶದ ಪ್ರಕಾರ ಅದನ್ನು ಆಹಾರದ ಬಿಲ್‌ಗೆ ಸೇರಿಸುವಂತಿಲ್ಲ ಎಂದು ಮಾರ್ಗಸೂಚಿಯು ಸ್ಪಷ್ಟವಾಗಿ ತಿಳಿಸಿದೆ. ಈ ಮಾರ್ಗಸೂಚಿಯನ್ನು ಉಲ್ಲಂಘಿಸಿ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ಪಡೆದಲ್ಲಿ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ರಲ್ಲಿ ದೂರುಗಳನ್ನು ಸಲ್ಲಿಸಬಹುದಾಗಿದೆ.

  ಹೀಗೂ ಮಾಡುವಂತಿಲ್ಲ ಹೋಟೆಲ್​ಗಳು
  ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಸೇವೆಗಳ ಪ್ರವೇಶ ಅಥವಾ ನಿಬಂಧನೆಗಳ ಮೇಲೆ ಯಾವುದೇ ನಿರ್ಬಂಧವನ್ನು ಗ್ರಾಹಕರ ಮೇಲೆ ವಿಧಿಸಲಾಗುವುದಿಲ್ಲ ಎಂದು ಮಾರ್ಗಸೂಚಿ ಹೇಳಿದೆ. ಇದಲ್ಲದೆ ಆಹಾರದ ಬಿಲ್‌ನೊಂದಿಗೆ ಸೇರಿಸಿ ಮತ್ತು ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸೇವಾ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸಹ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದೆ.

  ಇದನ್ನೂ ಓದಿ: PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

  ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೋಟೆಲ್ ಅಥವಾ ರೆಸ್ಟೊರೆಂಟ್ ಸೇವಾ ಶುಲ್ಕವನ್ನು ವಿಧಿಸುತ್ತಿದೆ ಎಂದು ಯಾವುದೇ ಗ್ರಾಹಕರು ಕಂಡುಕೊಂಡರೆ, ಬಿಲ್ ಮೊತ್ತದಿಂದ ಆ ಸೇವಾ ಶುಲ್ಕವನ್ನು ತೆಗೆದುಹಾಕಲು ಗ್ರಾಹಕರು ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.

  ಇದನ್ನೂ ಓದಿ: Bengaluru Property Prices: ಬೆಂಗಳೂರಿನ ಯಾವ ಏರಿಯಾದಲ್ಲಿ ಫ್ಲಾಟ್​ಗಳ ಬೆಲೆ ಎಷ್ಟಿದೆ? ಇಲ್ಲಿದೆ ವಿವರ

  ಆ್ಯಪ್ ಮೂಲಕವೂ ದೂರು ಸಲ್ಲಿಸಿ
  ಗ್ರಾಹಕರು 1915 ಗೆ ಕರೆ ಮಾಡುವ ಮೂಲಕ ಅಥವಾ NCH ಮೊಬೈಲ್ ಅಪ್ಲಿಕೇಶನ್ ಮೂಲಕ ವ್ಯಾಜ್ಯ ಪೂರ್ವ ಹಂತದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ನಲ್ಲಿ ದೂರು ಸಲ್ಲಿಸಬಹುದು ಎಂದು ಮಾರ್ಗಸೂಚಿಯಲ್ಲಿ ಮಾಹಿತಿ ನೀಡಲಾಗಿದೆ. 

  ಯಾವುದೇ ಹೋಟೆಲ್ ಅಥವಾ ರೆಸ್ಟಾರೆಂಟ್ ಗ್ರಾಹಕರನ್ನು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸುವುದಿಲ್ಲ. ಸೇವಾ ಶುಲ್ಕವು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಯಿಂದ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಮಾರ್ಗಸೂಚಿ ತಿಳಿಸುತ್ತದೆ.
  Published by:guruganesh bhat
  First published: