ಮುಂಬೈ (ಡಿ. 26): ಚಿಕಿತ್ಸೆಗಾಗಿ ದಾಖಲಾದ 24 ವರ್ಷದ ಯುವತಿಗೆ ಔಷಧ ಹಚ್ಚುವ ನೆಪದಲ್ಲಿ ವಾರ್ಡ್ಬಾಯ್ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮುಂಬೈನ ಮಲ್ನಾಡ್ ಇಸ್ಟ್ ಏರಿಯಾದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಹಿನ್ನಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖೇಶ್ ಪ್ರಜಾಪತಿ ಬಂಧಿತ ಆರೋಪಿ. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ 30 ವರ್ಷದ ಈ ವ್ಯಕ್ತಿ ವಾರ್ಡ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸದ್ಯ ಈತನನ್ನು ನ್ಯಾಯಾಂಗ ವಶಕ್ಕೆ ಇಪ್ಪಿಸಲಾಗಿದೆ. 24 ವರ್ಷದ ಯುವತಿಯೊಬ್ಬಳು ಫೈಲ್ಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಸಂಬಂಧ ಆಪರೇಷನ್ಗೆ ಒಳಗಾಗಿದ್ದಳು. ಆಪರೇಷನ್ಗೆ ಒಳಗಾಗುವ ಮುನ್ನ ರೂಂಗೆ ಬಂದ ವಾರ್ಡ್ ಬಾಯ್ ಔಷಧ ಹಚ್ಚುವ ನೆಪದಲ್ಲಿ ಕಿರುಕುಳ ನೀಡಿದ್ದಾನೆ ಎಂದು ರೋಗಿ ಆಪಾದಿಸಿದ್ದಾರೆ.
ಆಪರೇಷನ್ಗೆ ಹೋಗುವ ಮುನ್ನ ಔಷಧವನ್ನು ಹಚ್ಚಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಆರೋಪಿ ಯುವತಿಯ ಖಾಸಗಿ ಅಂಗಾಂಗ ಮುಟ್ಟಿದ್ದಾನೆ.
ಆಪರೇಷನ್ ಬಳಿಕ ಈತನ ವಿರುದ್ಧ ಯುವತಿ ಮತ್ತು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಪ್ರವೀಣ್ ಕಂಬ್ಲೆ ತಿಳಿಸಿದ್ದಾರೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ