ಹರಿಕೃಷ್ಣ ಮೃತದೇಹದೊಂದಿಗೆ ಆಸ್ಪತ್ರೆಯ ಕೆಲ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

Anitha E | news18
Updated:September 1, 2018, 1:16 PM IST
ಹರಿಕೃಷ್ಣ ಮೃತದೇಹದೊಂದಿಗೆ ಆಸ್ಪತ್ರೆಯ ಕೆಲ ಸಿಬ್ಬಂದಿ ಮಾಡಿದ್ದೇನು ಗೊತ್ತಾ?
Anitha E | news18
Updated: September 1, 2018, 1:16 PM IST
ನ್ಯೂಸ್​ 18 ಕನ್ನಡ 

ತೆಲುಗಿನ ನಟ ಹಾಗೂ ರಾಜಕಾರಣಿ ಹರಿಕೃಷ್ಣ ಕಳೆದ ಬುಧವಾರವಷ್ಟೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆದರೆ ಅವರ ಸಾವಿನ ಕುರಿತಾದ ಮಾಹಿತಿಯೊಂದು ಈಗ ಹೊರ ಬಿದ್ದಿದೆ. ಅದೇನಪ್ಪಾ ಮಾಹಿತಿ ಅಂತೀರಾ? ಅದನ್ನ ತಿಳಿಯೋಕೆ ಈ ವರದಿ ಓದಿ...

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಹಾವಳಿ ತಡೆಯಲಾಗಷ್ಟು ಹೆಚ್ಚಾಗಿದೆ. ಈ ಸೆಲ್ಫಿ ಕ್ರೇಜ್​ನಿಂದಾಗಿ ಕೆಲವರು ಪ್ರಾಣ ಕಳೆದುಕೊಂಡರೆ, ಮತ್ತೆ ಕೆಲವರು ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೌದು ಸಾವನ್ನಪ್ಪಿದ ಶವಗಳೊಂದಿಗೂ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವವರನ್ನು ಸಹ ನೋಡಿದ್ದೇವೆ.

ಹೌದು ಹರಿಕೃಷ್ಣ ಅವರ ಪಾರ್ಥೀವ ಶರೀರದ ವಿಷಯದಲ್ಲೂ ಆಗದ್ದೂ ಅದೆ. ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ತರಲಾಗಿದ್ದ ಹರಿಕೃಷ್ಣ ಅವರ ಶವದೊಂದಿಗೆ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ಸೆಲ್ಫಿ ತೆಗೆದುಕೊಂಡಿದ್ದರು. ಈ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಹರಿಕೃಷ್ಣ ಅವರ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿ ನಾಲ್ವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ.

ಆಸ್ಪತ್ರೆಯ ವಕ್ತಾರ ರವಿ ಮಾತನಾಡಿ, 'ಸಿಬ್ಬಂದಿಯ ಸಂವೇದನಾ ಹೀನ ಕೃತ್ಯಕ್ಕೆ ಕ್ಷಮೆಯಾಚಿಸುತ್ತಿದ್ದೇವೆ. ಈ ಕೃತ್ಯವೆಸಗಿದವರನ್ನು ಕೆಲಸದಿಂದ ವಜಾಗೊಳಿಸಿದ್ದೇವೆ' ಎಂದಿದ್ದಾರೆ.

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ