Viral News : ಸ್ನಾನ ಮಾಡಿಸುವಾಗ ಕೃಷ್ಣನ ವಿಗ್ರಹಕ್ಕೆ ಹಾನಿ, ಚಿಕಿತ್ಸೆ ನೀಡಿ ಎಂದು ಆಸ್ಪತ್ರೆಗೆ ಹೋದ ಅರ್ಚಕ !

Viral News : ಅರ್ಚಕರೊಬ್ಬರು ಶ್ರೀ ಕೃಷ್ಣನ(Lord Sri Krishna) ವಿಗ್ರಹ(Idol)ದ ಕೈ ಮುರಿದಿದೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಕೈಗೆ ಬ್ಯಾಂಡೇಜ್(Bandage)​ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಅರ್ಚಕರ ಮಾತು ಕೇಳಿ ಮೊದಲು ಆಸ್ಪತ್ರೆ ಸಿಬ್ಬಂದಿಗೆ ದಿಗ್ಭ್ರಮೆಗೊಂಡಿದ್ದಾರೆ.

ದೇವರ ವಿಗ್ರಹಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು

ದೇವರ ವಿಗ್ರಹಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು

  • Share this:


ಭಾರತ(India)ದಲ್ಲಿ ಭಗವಂತ(God)ನ ಸ್ಮರಣೆಯಾಗಲಿ, ಅಥವಾ ದೇವರನ್ನು ನಂಬುವ ವಿಚಾರದಲ್ಲಿ ಎತ್ತಿದ ಕೈ. ಇದು ನಮ್ಮ ಸಂಸ್ಕೃತಿ(Culture). ಭಾರತ ಭಾವನಾತ್ಮಕ ಜನರಿಂದ ಕೂಡಿರುವ ರಾಷ್ಟ್ರ. ಹಲವು ವಿಧದ ಅಚಾರ -ವಿಚಾರ ಹಾಗೂ ನಂಬಿಕೆ(Beliefs)ಗಳು ಇಲ್ಲಿದೆ. ಒಂದು ಕಡ್ಡಿ ಅಲ್ಲಾಡಬೇಕಿದ್ದರು ಅದು ಭಗವಂತ ನಿಶ್ಚಯ ಮಾಡಬೇಕು. ನಮ್ಮಲ್ಲಿ ಪ್ರತಿದಿನ ದೇವರ ಪೂಜೆ(Pooja) ಮಾಡಲಾಗುತ್ತೆ. ನಮಗೆ ಕಷ್ಟ ಬಂದರೆ ಆತ ನಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ದೇವರನ್ನು ಕಂಡರೆ ನಮಗೆ ಭಕ್ತಿ, ಗೌರವ. ಇದಕ್ಕೆ ತಕ್ಕ ಉದಾಹರಣೆಯಂತೆ ಇಲ್ಲೊಬ್ಬರು ಅರ್ಚಕರು(Priests) ತಾನು ಪೂಜಿಸುವ ದೇವರ ವಿಗ್ರಹದ ಕೈ ಮುರಿದಿದೆ ಚಿಕಿತ್ಸೆ(Treatment) ನೀಡಿ ಎಂದು ಆಸ್ಪತ್ರೆಗೆ ಹೋಗಿ ಕೇಳಿದ್ದಾರೆ. ಅರ್ಚಕರ ಮಾತುಗಳನ್ನು ಕೇಳಿ ವೈದ್ಯ(Doctor)ರು ಕೆಲ ಕಾಲ ಶಾಕ್​ಗೆ ಒಳಗಾಗಿದ್ದಾರೆ. ಹೌದು, ಇಂಥದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶ(Uttar Pradesh)ದ ಆಗ್ರಾದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.  ಅರ್ಚಕರೊಬ್ಬರು ಶ್ರೀ ಕೃಷ್ಣನ(Lord Sri Krishna) ವಿಗ್ರಹ(Idol)ದ ಕೈ ಮುರಿದಿದೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಕೈಗೆ ಬ್ಯಾಂಡೇಜ್(Bandage)​ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಅರ್ಚಕರ ಮಾತು ಕೇಳಿ ಮೊದಲು ಆಸ್ಪತ್ರೆ ಸಿಬ್ಬಂದಿಗೆ ದಿಗ್ಭ್ರಮೆಗೊಂಡಿದ್ದಾರೆ, ಬಳಿಕ ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೇಜ್​ ಹಾಕಿ ಕಳಿಸಿದ್ದಾರೆ. 

ವಿಗ್ರಹಕ್ಕೆ ಸ್ನಾನ ಮಾಡಿವಾಗ ಮುರಿದಿದ್ದ ದೇವರ ಕೈ!

ವಾರಕೊಮ್ಮೆ ಅಥವಾ ಪ್ರತಿದಿನ ದೇವರ ವಿಗ್ರಹಗಳನ್ನು ಶುದ್ಧಿ ಮಾಡುವುದು ವಾಡಿಕೆ. ಅದರಂತೆ ಈ ಪೂಜಾರಿ ಕೂಡ ಬೆಳಗ್ಗೆ ಎದ್ದು ಪೂಜೆ ವೇಳೆ ವಿಗ್ರಹಕ್ಕೆ ಸ್ನಾನ ಮಾಡಿಸುವಾ ಶ್ರೀ ಕೃಷ್ಣನ ಕೈ ಆಕಸ್ಮಿಕವಾಗಿ ಮುರಿದಿದೆ. ಇದನ್ನು ಕಂಡು ಅರ್ಚಕರಿಗೆ ಭಾರಿ ನೋವಾಗಿತ್ತು. ಕೂಡಲೇ ಆ ವಿಗ್ರಹವನ್ನು ಹಿಡಿದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ದಯವಿಟ್ಟು ನನ್ನ ಕೃಷ್ಣನ ಕೈಗೆ ಪೆಟ್ಟಾಗಿದೆ, ಚಿಕಿತ್ಸೆ ನೀಡಿ ಎಂದು ಅಳಲು ತೋಡಿಕೊಂಡಿದ್ದಾರೆ. ವಿಷಯ ಕೇಳಿ ಆಶ್ಚರ್ಯರಾದ ವೈದ್ಯಕೀಯ ಸಿಬ್ಬಂದಿ (Doctors) ಕೆಲ ಹೊತ್ತಿನ ನಂತರ  'ಶ್ರೀ ಕೃಷ್ಣ' ಹೆಸರಿನಲ್ಲಿ ನೋಂದಣಿಯನ್ನು (Registration) ಮಾಡಿಸಿಕೊಂಡು ವಿಗ್ರಹದ ತೋಳಿಗೆ (Hand) ಬ್ಯಾಂಡೇಜ್ ಹಾಕಿದ್ದಾರೆ.

ಇದನ್ನು ಓದಿ : ‘ಇದು ನಿಮ್ಮ ನಷ್ಟ‘ ಎಂದು‌ ಮಹಿಳೆ ಬರೆದ ರಾಜೀನಾಮೆ ಪತ್ರ ವೈರಲ್

30 ವರ್ಷದಿಂದ ಅರ್ಚಕರಾಗಿರುವ ಲೇಖ್​ ಸಿಂಗ್​!

‘ನಾನು ದೇವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ ಹಾಗಾಗಿ ಗೋಪಾಲನ ಕೈ ಮುರಿದಿದ್ದು ನನಗೆ ನೋವು ಉಂಟು ಮಾಡಿದೆ. ಹಾಗಾಗಿ ನಾನು ಚಿಕಿತ್ಸೆ ಪಡೆಯಲು ಜಿಲ್ಲಾ ಆಸ್ಪತ್ರೆಗೆ ಹೋದೆ’ ಎಂದು ಅವರು ಹೇಳಿದ್ದಾರೆ. ಲೇಖ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ‘ಆಸ್ಪತ್ರೆಗೆ ಹೋದಾಗ ಯಾರೂ ನನ್ನ ಮಾತನ್ನು ನಂಬಲಿಲ್ಲ. ತಮಾಷೆ ಮಾಡುತ್ತಿದ್ದೇನೆ ಅಂತ ಸುಮ್ಮನಿದ್ದರು. ಆದರೆ ನನಗೆ ನೋವು ತಡೆಯಲು ಆಗಲಿಲ್ಲ. ನನ್ನ ಗೋಪಾಲನಿಗಾಗಿ ಜೋರಾಗಿ ಅಳಲು ಶುರುಮಾಡಿದೆ’ ಎಂದು ಅವರು ಹೇಳಿದ್ದಾರೆ. ಪೂಜಾರಿ ಜೊತೆಗೆ ಹಲವು ಸ್ಥಳೀಯರು ಕೂಡ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನು ಓದಿ : ನೀವು ಹಂಪಿಗೆ ಟ್ರಿಪ್ ಪ್ಲಾನ್ ಮಾಡಿದ್ರೆ, ಮಿಸ್ ಮಾಡ್ದೆ ಈ ಸ್ಥಳಗಳಿಗೆ ಹೋಗಲೇಬೇಕು

ಭಾವನೆಗಳಿಗೆ ಸ್ಪಂದಿಸಿದ ವೈದ್ಯರುಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಅಶೋಕ್ ಕುಮಾರ್ ಅಗರವಾಲ್ ಮಾತನಾಡಿ, ಕೈ ಮುರಿದುಕೊಂಡಿರುವ ವಿಗ್ರಹದೊಂದಿಗೆ  ಅರ್ಚಕರೊಬ್ಬರು ಬಂದು  ಚಿಕಿತ್ಸೆಗಾಗಿ ಅಳುಲು ಪ್ರಾರಂಭಿಸಿದ್ದರು ಹಾಗಾಗಿ ನಾವು ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ‘ಶ್ರೀ ಕೃಷ್ಣ’ ಹೆಸರಿನಲ್ಲಿ ನೋಂದಣಿ  ಮಾಡಿಸಿ ಅರ್ಚಕರ ತೃಪ್ತಿಗಾಗಿ ವಿಗ್ರಹವನ್ನು ಬ್ಯಾಂಡೇಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

Published by:Vasudeva M
First published: