Horse Viral News: ಈ ಕುದುರೆ ಮರಿಗೆ ಬಸ್ ಮೇಲಿನ ಚಿತ್ರವೇ ಅಮ್ಮ!

ತನ್ನ ಅಮ್ಮ ಎಂದೇ ಭಾವಿಸಿ ಬಸ್​ ಮೇಲಿದ್ದ ಕುದುರೆಯ ಚಿತ್ರದ ಬಳಿ ಬಂದು ಬಸ್ ಮುಂದೆ ಹೋಗುವುದನ್ನೇ ತಡೆಗಟ್ಟಿದೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ಚೆನ್ನೈ:  ಪ್ರಾಣಿಗಳಿಗೂ ಭಾವನೆಗಳಿಗೆ ಅಂತೊಂದು ಮಾತಿದೆ. ಈ ಮಾತಿಗೆ ಆಗಾಗ ಉದಾಹರಣೆಗಳೂ ಸಿಗುತ್ತಲೇ ಇರುತ್ತವೆ. ಅಂತಹ ಒಂದೊಳ್ಳೆ ಉದಾಹರಣೆಯೊಂದು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ ನಡೆದಿದೆ. ಬಸ್​ ಮೇಲಿನ ಕುದುರೆಯ ಚಿತ್ರವನ್ನು ತನ್ನತಾಯಿ ಎಂದೇ ಅಂದುಕೊಂಡಿತುವ ಕುದುರೆ (Horse) ಮರಿಯೊಂದು ಬಸ್​ನ ಹತ್ತಿರವೇ ಸುಳಿದಾಡುತ್ತಿರುವ ಅಪರೂಪದ ಘಟನೆ ನಡೆದಿದೆ. ತಮಿಳುನಾಡಿನ  (Tamil Nadu) ಕೊಯಮತ್ತೂರು ಜಿಲ್ಲೆಯ ಪಟ್ಟೀಶ್ವರರ್ ದೇವಸ್ಥಾನದ ಬಳಿ ದಾರಿಹೋಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ (Viral Video) ಆಗುತ್ತಿದೆ.  

ಕೊಯಮತ್ತೂರಿನ ಪಟ್ಟೀಶ್ವರರ್ ದೇವಾಲಯದ ಬಳಿ, ದರ್ಪಣಂ ಮಂಟಪಂ ಮತ್ತು ಪಟ್ಟಿತುರೈ ಪ್ರದೇಶಗಳು 10 ಕ್ಕೂ ಹೆಚ್ಚು ಕುದುರೆಗಳಿಗೆ ನೆಲೆ ಒದಗಿಸಿವೆ. ಈ ಪೈಕಿ ಕುದುರೆಯೊಂದನ್ನು ಬೇರೆಡೆ ಸಾಗಿಸಲಾಗಿದೆ. ಆದರೆ ಆ ಕುದುರೆಯ ಮರಿಯೊಂದು ಅಲ್ಲೇ ಉಳಿದಿದೆ.

Horse stops bus for thinks real house in Tamil Nadu
ವೈರಲ್ ವಿಡಿಯೋ ದೃಶ್ಯ


ಚಿತ್ರವೇ ಅಮ್ಮ ಎಂದುಕೊಂಡ ಮರಿ ಕುದುರೆ
ಇತ್ತ ಮರಿ ಕುದುರೆ ತನ್ನ ತಾಯಿಯನ್ನು ಹುಡುಕುತ್ತಿರುವಾಗಲೇ ಬಸ್​ ಮೇಲೆ ಬಿಡಿಸಿದ್ದ ಕುದುರೆಯ ಚಿತ್ರವನ್ನೇ ತನ್ನ ಅಮ್ಮ ಎಂದು ಭಾವಿಸಿದೆ. ಹೀಗಾಗಿ ತನ್ನ ಅಮ್ಮ ಎಂದೇ ಭಾವಿಸಿ ಬಸ್​ ಮೇಲಿದ್ದ ಕುದುರೆಯ ಚಿತ್ರದ ಬಳಿ ಬಂದು ಬಸ್ ಮುಂದೆ ಹೋಗುವುದನ್ನೇ ತಡೆಗಟ್ಟಿದೆ. ಸ್ಥಳೀಯರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಸದ್ಯ ತಮಿಳುನಾಡಿನ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: Tamil Nadu: ದೇವಸ್ಥಾನ, ಹಿಂದೂ ಕುಟುಂಬಗಳ ಆಸ್ತಿ ಸೇರಿ ಇಡೀ ಗ್ರಾಮವನ್ನೇ ಸದ್ದಿಲ್ಲದೇ ನುಂಗಿದ ವಕ್ಫ್ ಬೋರ್ಡ್!

12 ವರ್ಷದ ಪುಟ್ಟ ಬಾಲಕನ ಮೇಲೆ ಎರಗಿದ ಬೀದಿನಾಯಿ, ಕಿತ್ತು ತಿನ್ನುವ ಭಯಾನಕ ವಿಡಿಯೋ ವೈರಲ್​!
ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ದಿನೇ ದಿನೇ ಬೀದಿನಾಯಿ ಕಡಿತದಿಂದ ಬಾದಿತರಾದವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ವರ್ಷ ಕೇರಳದಲ್ಲಿ ಒಟ್ಟು ಇಪ್ಪತ್ತೊಂದು ಜನರು ರೇಬಿಸ್ ಖಾಯಿಲೆಯಿಂದ ಮರಣ ಹೊಂದಿದ್ದಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ಏಳನೇ ತರಗತಿ ಬಾಲಕನಿಗೆ ಬೀದಿನಾಯಿ ಕಚ್ಚಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದೇ ವಾರದಲ್ಲಿ ಅನೇಕ ಪ್ರಕರಣಗಳಾಗಿದ್ದು ಜನರು ಓಡಾಡಲು ಸಹ ಭಯದ ವಾತಾವರಣ ಸೃಷ್ಟಿಯಾಗಿದೆ. ಕೇರಳದಲ್ಲಿ ದೃಶ್ಯದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Supreme Court: ಚುನಾವಣೆಯಲ್ಲಿ ಸ್ಪರ್ಧೆ; ಸುಪ್ರೀಂ ಮಹತ್ವದ ಆದೇಶ

ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕ
ಬಾಲಕನೊಬ್ಬ ತನ್ನ ಸೈಕಲ್ ಹಿಡಿದು ಮನೆಯ ಮುಂದಿನ ರಸ್ತೆಯಲ್ಲಿ ತಿರುಗಾಡುತ್ತಿದ್ದ ಸಮಯದಲ್ಲಿ ಅದೇ ಬೀದಿಯಲ್ಲಿ ನಾಯಿಯೊಂದು ಓಡಿ ಬಂದು ಸೈಕಲ್ ಮೇಲೆ ಕೂತಿದ್ದ ಬಾಲಕನ ಮೇಲೆ ಆಕ್ರಮಣ ಮಾಡಿದೆ. ಇದೇ ಸಮಯದಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳು ಮತ್ತು ಪುಟ್ಟ ಮಗುವನ್ನು ನಾವು ಈ ದೃಶ್ಯದಲ್ಲಿ ಕಾಣಬಹುದು.
Published by:ಗುರುಗಣೇಶ ಡಬ್ಗುಳಿ
First published: