ಆಂಧ್ರಪ್ರದೇಶ (ಜ. 11): ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದ ಮಹಾಕಾಳಿ ದೇವಸ್ಥಾನದ (Mahakali Idol) ವಿಗ್ರಹದ ಕೆಳಗೆ ವ್ಯಕ್ತಿಯ ರುಂಡ (Head) ಪತ್ತೆಯಾಗಿರುವ ಭೀಕರ ಘಟನೆ (Horrifying Incident) ಬೆಳಕಿಗೆ ಬಂದಿದೆ. ವ್ಯಕ್ತಿಯ ಹತ್ಯೆ ಮಾಡಿದ ಆರೋಪಿಗಳು ಆತನ ರುಂಡ ತಂದು ಮಹಾಕಾಳಿ ಪಾದದ ಕೆಳಗೆ ಇರಿಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಈ ರೀತಿ ರಸ್ತೆಬದಿ ರುಂಡವನ್ನು ಇಟ್ಟಿರುವ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಇನ್ನು ಪತ್ತೆಯಾಗಿರುವ ರುಂಡದ ವ್ಯಕ್ತಿಯ ಗುರತು (Identity) ಪತ್ತೆ ಆಗಿಲ್ಲ. ವ್ಯಕ್ತಿಯ ದೇಹದ ಭಾಗ ಕೂಡ ಸುತ್ತಮುತ್ತ ಕಂಡು ಬಂದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣ ಬೇಧಿಸಲು ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ಎಂಟು ತಂಡಗಳ ರಚನೆ ಮಾಡಿದ್ದಾರೆ.
ಪತ್ತೆಯಾಗದ ಮುಂಡ
ಇನ್ನು ದೇವರ ಪಾದದ ಬಳಿ ಈ ರೀತಿ ರುಂಡ ಇಟ್ಟಿರುವುದು ಉದ್ದೇಶ ಪೂರ್ವಕ ಕೊಲೆಯಾ ಅಥವಾ ನರ ಬಲಿಯ ಉದ್ದೇಶಕ್ಕೆ ಮಾಡಿರುವ ಹತ್ಯೆಯಾ ಎನ್ನುವ ದೃಷ್ಠಿಕೋನದಲ್ಲಿ ಕೂಡ ತನಿಖೆ ಸಾಗಿದೆ. ವ್ಯಕ್ತಿಯ ಮುಂಡ ಇದುವರೆಗೂ ಪತ್ತೆಯಾಗದ ಹಿನ್ನಲೆ ಅದಕ್ಕೆ ಕೂಡ ಹುಡುಕಾಟ ನಡೆಸಲಾಗಿದೆ. ಇನ್ನು ರುಂಡದ ಮೂಲಕ ವ್ಯಕ್ತಿಯ ಗುರುತನ್ನು ಕೂಡ ಸ್ಥಳೀಯರು ಪತ್ತೆ ಮಾಡದಿರುವುದು ಇದೀಗ ಸವಾಲ್ ಆಗಿದೆ. ಈ ಹಿನ್ನೆಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಈ ರುಂಡವನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಪರೀಕ್ಷೆ ರವಾನಿಸಿದ್ದಾರೆ. ಇನ್ನು ಸಾವನ್ನಪ್ಪಿದ ವ್ಯಕ್ತಿ 30 ರಿಂದ 35 ವರ್ಷ ಆಸುಪಾಸಿನವರಾ ಗಿರಬಹುದು ಎಂದು ಅಂದಾಜಿಸಲಾಗಿದೆ.
ಎಲ್ಲಾ ಆಯಾಮಗಳಲ್ಲೂ ತನಿಖೆಗೆ ಮುಂದಾದ ಪೊಲೀಸರು
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೇವರಕೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ರೆಡ್ಡಿ, 30 ರ ಹರೆಯದ ವ್ಯಕ್ತಿಯನ್ನು ಬೇರೆಡೆ ಕೊಲ್ಲಲಾಗಿದೆ. ಬಳಿ ಅವನ ತಲೆಯನ್ನು ತಂದು ಮಹಾಕಾಳಿ ದೇವರ ವಿಗ್ರಹದ ಪಾದದ ಬಳಿ ಇರಿಸಲಾಯಿತು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ನೈರುತ್ಯ ದಿಕ್ಕಿನಲ್ಲಿನ ಈ ವಾಸ್ತು ದೋಷದಿಂದ ಕಾಡಲಿದೆ ಸಮಸ್ಯೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ
ಘಟನೆ ಸಂಬಂಧ ಪೊಲೀಸರು ಸ್ಥಳೀಯ ಸಿಸಿಟಿವಿ ಪರೀಶಿಲನೆಗೆ ಮುಂದಾಗಿದ್ದಾರೆ. ಇನ್ನು ಮಹಾಕಾಳಿ ದೇವರ ವಿಗ್ರಹದ ಪಾದದಲ್ಲಿ ತಲೆ ಕತ್ತರಿಸಿರುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರು ಕೂಡ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ತಿಳಿದು ಬಂದವರು ತಕ್ಷಣಕ್ಕೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಇದನ್ನು ಓದಿ: ಸ್ನಾನ ಮಾಡುವಾಗ ಈ ಮಂತ್ರ ಹೇಳಿದ್ರೆ ಸಾಕಂತೆ ಎಲ್ಲಾ ದೋಷ ಪರಿಹಾರ; ಯಾವುದು ಆ ಮಂತ್ರ?
ರುಂಡದ ಸುಳಿವು ನೀಡಿದ ಕುಟುಂಬ
ಈ ಮಧ್ಯೆ, ಇಲ್ಲಿಗೆ ಸಮೀಪದ ಸೂರ್ಯಪೇಟೆಯ ಕುಟುಂಬವೊಂದು ಈ ಪ್ರಕರಣ ಸಂಬಂಧ ಪೊಲೀಸರನ್ನು ಸಂಪರ್ಕಿಸಿದೆ. ತಮ್ಮ ಕುಟುಂಬದಲ್ಲಿ ಎರಡು ವರ್ಷಗಳ ಹಿಂದೆ ಮನೆ ತೊರೆದ 30 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಂದಿಗೆ ಸಾವನ್ನಪ್ಪಿದ ವ್ಯಕ್ತಿಯ ಮುಖದ ಲಕ್ಷಣಗಳು ಹೊಂದಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.
ಇಲ್ಲಿನ ರಸ್ತೆಬದಿಯ ಮಹಾಕಾಳಿ ವಿಗ್ರಹಕ್ಕೆ ಎಂದಿನಂತೆ ಪೂಜೆ ಮಾಡಲು ಅರ್ಚಕರು ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ವಿಗ್ರಹದ ಪಾದದಲ್ಲಿ ಕತ್ತರಿಸಿದ ತಲೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ವಿಷಯ ಊರಿಗೆಲ್ಲಾ ಹಬ್ಬಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ