ಒಂದೇ ದಿನದಲ್ಲಿ ಅಸ್ಸಾಮ್​ನಲ್ಲಿ ಕಳ್ಳಬಟ್ಟಿ ಕುಡಿದು 66 ಜನರ ಸಾವು

ಟೀ ಎಸ್ಟೇಟ್​ವೊಂದರ ಸಮೀಪ ಮಾರಾಟವಾಗುತ್ತಿದ್ದ ಕಳ್ಳಬಟ್ಟಿ ಕುಡಿದು 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಅವರ ಪೈಕಿ 66 ಜನರು ಮೃತಪಟ್ಟಿರುವುದು ತಿಳಿದುಬಂದಿದೆ.

Vijayasarthy SN | news18
Updated:February 23, 2019, 10:53 AM IST
ಒಂದೇ ದಿನದಲ್ಲಿ ಅಸ್ಸಾಮ್​ನಲ್ಲಿ ಕಳ್ಳಬಟ್ಟಿ ಕುಡಿದು 66 ಜನರ ಸಾವು
ಪ್ರಾತಿನಿಧಿಕ ಚಿತ್ರ
Vijayasarthy SN | news18
Updated: February 23, 2019, 10:53 AM IST
ಗುವಾಹತಿ(ಫೆ. 23): ಅಸ್ಸಾಮ್​ನಲ್ಲಿ ಭೀಕರ ಕಳ್ಳಬಟ್ಟಿ ದುರಂತ ಸಂಭವಿಸಿದ್ದು, 66 ಜನರು ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ಸಾಮ್​ನ ಗೋಲಾಘಟ್​ನಲ್ಲಿ 39 ಜನರು, ಜೋರತ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಇತರೆಡೆ 19 ಜನರು ಕಳ್ಳಬಟ್ಟಿಯಿಂದ ಸಾವನ್ನಪ್ಪಿರುವ ಮಾಹಿತಿ ತಿಳಿದುಬಂದಿದೆ. ಸಾಕಷ್ಟು ಜನರು ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಅಪಾಯವಿದೆ.

ಗೋಲಾಘಟ್ ಜಿಲ್ಲೆಯಲ್ಲಿರುವ ಹಲ್ಮೀರಾ ಟೀ ಗಾರ್ಡನ್ ಪ್ರದೇಶದಲ್ಲಿ ಮಾರಾಟವಾದ ಕಳ್ಳಬಟ್ಟಿಯಿಂದ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ. ಸಾವನ್ನಪ್ಪಿದವರು ಹಾಗೂ ಅಸ್ವಸ್ಥಗೊಂಡವರೆಲ್ಲರೂ ಇದೇ ಟೀ ಗಾರ್ಡನ್ ಕಾರ್ಮಿಕರೇ ಆಗಿದ್ಧಾರೆ. ಅನೇಕ ಜನರನ್ನು ಪಕ್ಕದ ಜೋರತ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಫೆ. 24ರಂದು ಮಂಗಳೂರು, ಕೇರಳ ಮೊದಲಾದ ಕಡೆ ಭಾರೀ ಜಲಪ್ರವಾಹ?

ಕಳ್ಳಬಟ್ಟಿ ದುರಂತಕ್ಕೆ ಸರಕಾರವೇ ಕಾರಣ ಎಂದು ಸ್ಥಳೀಯರು ದೂಷಿಸಿದ್ದಾರೆ. ಅಕ್ರಮ ಮದ್ಯವನ್ನು ನಿಷೇಧಿಸುವುದಾಗಿ ಹೇಳುವ ಸರಕಾರವೇ ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಡುತ್ತಿದೆ. ಅಬಕಾರಿ ಅಧಿಕಾರಿಗಳು ಕಳ್ಳಬಟ್ಟಿ ಪೂರೈಕೆಯ ಹಿಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಸ್ಸಾಮ್ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಈ ದುರಂತದ ತನಿಖೆಗೆ ಆದೇಶಿಸಿದ್ದಾರೆ. ಅಬಕಾರಿ ಇಲಾಖೆಯು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಲು ಸೂಚಿಸಿದೆ.

First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...