ಉತ್ತರಪ್ರದೇಶದಲ್ಲಿ ಮರ್ಯಾದಾ ಹತ್ಯೆ; ಮಗಳ ನಡತೆ ಶಂಕಿಸಿ ವಿಷ ಉಣಿಸಿ ಕೊಂದ ತಂದೆ

news18
Updated:August 14, 2018, 12:17 PM IST
ಉತ್ತರಪ್ರದೇಶದಲ್ಲಿ ಮರ್ಯಾದಾ ಹತ್ಯೆ; ಮಗಳ ನಡತೆ ಶಂಕಿಸಿ ವಿಷ ಉಣಿಸಿ ಕೊಂದ ತಂದೆ
news18
Updated: August 14, 2018, 12:17 PM IST
ನ್ಯೂಸ್ 18 ಕನ್ನಡ

ಮುಜಾಫರ್​ನಗರ (ಆ.14): ಮರ್ಯಾದೆಗೆ ಅಂಜಿ ತಂದೆಯೇ ಮಗಳಿಗೆ ವಿಷವುಣಿಸಿ ಕೊಲೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಹದಿನೈದು ವರ್ಷದ ಮಗಳ  ನಡತೆ ಶಂಕಿಸಿದ ತಂದೆಯೊಬ್ಬ ಆಕೆಗೆ ವಿಷ ಉಣಿಸಿ, ಆಕೆಯ ಸಾವಿಗೆ  ಕಾರಣವಾಗಿದ್ದಾನೆ. ಬೋಪಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶುಕ್ರತಾಲ್ ಬಳಿಯ ಸ್ಮಶಾನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಬೋಪಾ ಪೊಲೀಸ್ ಠಾಣೆಯ ಅಧಿಕಾರಿ ವಿ.ಪಿ.ಸಿಂಗ್ ತಿಳಿಸಿದ್ದಾರೆ. 

ಯುವತಿ ಸಾಯುವ ಮುಂಚೆ ತನ್ನ ತಂದೆಯೇ ವಿಷ ಕುಡಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಹೇಳಿಕೆ ಆಧರಿಸಿ ಆಕೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್  ಅಧಿಕಾರಿ ತಿಳಿಸಿದ್ದಾರೆ.

ಯುವತಿಯ ಕುಟುಂಬ ಗಾಜೀಬಾದ್​ ಜಿಲ್ಲೆಗೆ ಸೇರಿದ್ದು, ಆಕೆಯ ತಾಯಿ ಐದಾರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅಲ್ಲಿಂದ ಮಗಳ ನಡತೆ ಮೇಲೆ ತಂದೆ ಅನುಮಾನಿಸುತ್ತಿದ್ದ. ಮಗಳನ್ನು ಕೊಲೆ ಮಾಡಿದ್ದಾಗಿ ತಂದೆ ಒಪ್ಪಿಕೊಂಡಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...