• Home
  • »
  • News
  • »
  • national-international
  • »
  • Honour Killing: ತನ್ನಿಷ್ಟದಂತೆ ಮದುವೆಯಾಗಿದ್ದಕ್ಕೆ ಶಿಕ್ಷೆ, ಪೊಲೀಸರೆದುರೇ ಮಗಳನ್ನು ಗುಂಡಿಕ್ಕಿ ಕೊಂದ ಅಪ್ಪ!

Honour Killing: ತನ್ನಿಷ್ಟದಂತೆ ಮದುವೆಯಾಗಿದ್ದಕ್ಕೆ ಶಿಕ್ಷೆ, ಪೊಲೀಸರೆದುರೇ ಮಗಳನ್ನು ಗುಂಡಿಕ್ಕಿ ಕೊಂದ ಅಪ್ಪ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಕಿಸ್ತಾನದ ಕರಾಚಿಯಿಂದ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ತಂದೆಯೊಬ್ಬರು ನ್ಯಾಯಾಲಯದ ಆವರಣದಲ್ಲಿ ಮಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳಿಗೂ ಗಾಯಗಳಾಗಿವೆ. ಬಾಲಕಿಯ ಪ್ರೇಮ ವಿವಾಹದಿಂದ ಕೋಪಗೊಂಡ ಕೋಪಗೊಂಡ ತಂದೆ ಆಕೆಯನ್ನು ಕೊಂದಿದ್ದಾನೆ ಎಂದು ಹೇಳಲಾಗಿದೆ.

ಮುಂದೆ ಓದಿ ...
  • Share this:

ಇಸ್ಲಮಾಬಾದ್(ಜ.24): ಪಾಕಿಸ್ತಾನದ (Pakistan) ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೀಗ ಪಾಕಿಸ್ತಾನದ ಕರಾಚಿಯಿಂದ ಹೇಯ ಕೃತ್ಯವೊಂದು ವರದಿಯಾಗಿದೆ. ಇಲ್ಲಿ ತಂದೆಯೊಬ್ಬ ತನ್ನ ಹುಸಿ ಅಹಂಕಾರಕ್ಕೆ ಕೋರ್ಟ್ (Court) ಆವರಣದಲ್ಲಿಯೇ ಮಗಳ ಮೇಲೆ ಗುಂಡು ಹಾರಿಸಿದ್ದಾನೆ. ನಗರದ ನ್ಯಾಯಾಲಯದ ಆವರಣದಲ್ಲಿ ಮಹಿಳೆಯನ್ನು ಮರ್ಯಾದಾ ಹತ್ಯೆ (Honour killing) ಹೆಸರಿನಲ್ಲಿ ಗುಂಡಿಕ್ಕಿ ಹತ್ಯೆ (Murder) ಮಾಡಲಾಗಿದೆ. ಘಟನೆ ಸೋಮವಾರ ನಡೆದಿದ್ದು, ತಡವಾಗಿ ವರದಿಯಾಗಿದೆ. ಸಂತ್ರಸ್ತೆ ಹಜ್ರಾ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾದ ಕಾರಣ ಅವಳ ತಂದೆ ಹತ್ಯೆಗೈದಿದ್ದಾರೆನ್ನಲಾಗಿದೆ.


ಪೊಲೀಸ್ ಸೂಪರಿಂಟೆಂಡೆಂಟ್ ಪ್ರಕಾರ, ಹೆಡ್ ಕಾನ್‌ಸ್ಟೇಬಲ್ ಇಮ್ರಾನ್ ಜಮಾನ್ ಮತ್ತು ಮಹಿಳಾ ಕಾನ್‌ಸ್ಟೇಬಲ್ ಸಂತ್ರಸ್ತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಆವರಣದೊಳಗೆ ಕರೆದೊಯ್ಯುತ್ತಿದ್ದರು. ಇದೇ ವೇಳೆ ಆಕೆಯ ತಂದೆ ಅಮೀರ್ ಜಮಾನ್ ಮೆಹ್ಸೂದ್ (65) ಆಕೆಯನ್ನು ಹಿಂಬಾಲಿಸುತ್ತಿದ್ದರು. ಮಹಿಳೆ ನ್ಯಾಯಾಲಯದ ಆವರಣಕ್ಕೆ ಬಂದ ಕೂಡಲೇ ನಾಲ್ಕನೇ ಸಂಖ್ಯೆಯ ಗೇಟ್ ಬಳಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅವರ ಮಗಳು ಸಾವನ್ನಪ್ಪಿದ್ದರೆ, ಇಮ್ರಾನ್ ಮತ್ತು ವಾಜಿದ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಎಸ್‌ಪಿ ಪ್ರಕಾರ, ಮೃತಳ ವಯಸ್ಸು 18 ರಿಂದ 20 ವರ್ಷಗಳು.


ಇದನ್ನೂ ಓದಿ: Pakistan: ನಿಜಕ್ಕೂ ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆಯಾ ಪಾಕ್​? ಶೆಹಬಾಜ್ ಷರೀಫ್ ನಾಟಕದ ಅಸಲಿಯತ್ತೇನು?


ಹುಡುಗಿಯ ಮದುವೆಯ ಆಯ್ಕೆಗೆ ತಂದೆ ಕೋಪಗೊಂಡಿದ್ದರು


ಪಾಕಿಸ್ತಾನಿ ಸುದ್ದಿ ವರದಿಗಳ ಪ್ರಕಾರ, ಆರೋಪಿಯ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನಿಚ್ಛೆಯಂತೆ ಯುವತಿ ಮದುವೆಯಾಗಿದ್ದಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಬಾಲಕಿಯ ಹತ್ಯೆ ನಡೆದ ಬಳಿಕ ಪಾಕಿಸ್ತಾನದ ಕಾನೂನು ಸುವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಪಾಕಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಯಾವಾಗಲೂ ಸನುಮಾನ ವ್ಯಕ್ತವಾಗುತ್ತಿತ್ತು. ಹೀಗಿರುವಾಗ ಕೋರ್ಟ್ ಆವರಣದಲ್ಲೇ ನಡೆದ ಕೊಲೆ ಕರಾಚಿಯ ಕಾನೂನು ಸುವ್ಯವಸ್ಥೆಯನ್ನು ಬಯಲು ಮಾಡಿದೆ.

man killed his living in partner for forcing marriage at bengaluru pvn
ಸಾಂದರ್ಭಿಕ ಚಿತ್ರ


ಸ್ತ್ರೀಹತ್ಯೆಯಿಂದ ತೊಂಡರೆಗೀಡಾದ ಪಾಖಿಸ್ತಾನಿ ಮಹಿಳೆಯರು


ಪಾಕಿಸ್ತಾನದಲ್ಲಿ ಮಹಿಳೆಯರ ಅಭದ್ರತೆಯ ಪ್ರಕರಣ ಇದೇ ಮೊದಲಲ್ಲ, ಈ ಹಿಂದೆಯೂ ಇಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ವರದಿಗಳು ಬಂದಿವೆ. ಪಾಕಿಸ್ತಾನದಲ್ಲಿ ಸ್ತ್ರೀಹತ್ಯೆ ಪ್ರಾಬಲ್ಯ ಹೊಂದಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇವೆ.


ಈ ವರ್ಷದ ಆರಂಭದಲ್ಲಿ, ಇಟಾಲಿಯನ್ ಅಧಿಕಾರಿಗಳು 18 ವರ್ಷದ ಪಾಕಿಸ್ತಾನಿ ಮೂಲದ ಸಮನ್ ಅಬ್ಬಾಸ್ ಎಂಬ ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದರು, ಅವರು ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಯುವತಿ ನಿಶ್ಚಯಿತ ಮದುವೆಗೆ ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ನವೆಂಬರ್ 2022 ರಲ್ಲಿ ಇಟಲಿಯ ರೆಗ್ಗಿಯೊ ಎಮಿಲಿಯಾ ಪ್ರಾಂತ್ಯದ ನೊವೆಲ್ಲಾರಾ ಪಟ್ಟಣದಲ್ಲಿ ಅವರ ಕುಟುಂಬದ ಮನೆಯ ಬಳಿ ಮಾನವ ಅವಶೇಷಗಳು ಕಂಡುಬಂದ ನಂತರ ಅಬ್ಬಾಸ್ ಅವರನ್ನು ದಂತ ದಾಖಲೆಗಳಿಂದ ಗುರುತಿಸಲಾಯಿತು.


ಇದನ್ನೂ ಓದಿ: Pakistan: ನಿಜಕ್ಕೂ ಭಾರತದೊಂದಿಗೆ ಶಾಂತಿ ಮಾತುಕತೆ ಬಯಸುತ್ತಿದೆಯಾ ಪಾಕ್​? ಶೆಹಬಾಜ್ ಷರೀಫ್ ನಾಟಕದ ಅಸಲಿಯತ್ತೇನು?
ಹೆಚ್ಚಳವಾಗುತ್ತಿವೆ ಸ್ತ್ರೀಹತ್ಯೆ ಪ್ರಕರಣಗಳು


ಕಳೆದ ವರ್ಷ ನವೆಂಬರ್‌ನಲ್ಲಿ ಕರಾಚಿಯ ಶಮ್ಸಿ ಸೊಸೈಟಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ (38) ಮತ್ತು 3 ಹೆಣ್ಣು ಮಕ್ಕಳನ್ನು ಹರಿತವಾದ ಆಯುಧದಿಂದ ಕೊಂದಿದ್ದ. ಎಲ್ಲಾ ಮೂರು ಹುಡುಗಿಯರು ಅಪ್ರಾಪ್ತ ವಯಸ್ಕರಾಗಿದ್ದು, ಅವರ ವಯಸ್ಸು 16 ವರ್ಷ, 12 ವರ್ಷ ಮತ್ತು 10 ವರ್ಷ. ಆರೋಪಿಯನ್ನು ಫವಾದ್ ಎಂದು ಗುರುತಿಸಲಾಗಿದ್ದು, ಹಣಕಾಸಿನ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿದ್ದ ಮತ್ತು ತನ್ನ ಹೆಂಡತಿಗೆ ವಿಷಯಗಳನ್ನು ವಿವರಿಸಲು ಅಸಮರ್ಥನಾಗಿದ್ದ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್‌ನ ಚಕ್ ಶಹಜಾದ್ ಪ್ರದೇಶದಲ್ಲಿ ಹಿರಿಯ ಪತ್ರಕರ್ತ ಅಯಾಜ್ ಅಮೀರ್ ಅವರ ಸೊಸೆ ಸಾರಾ ಇನಾಮ್ ಅವರ ಹೈ ಪ್ರೊಫೈಲ್ ಹತ್ಯೆ ಸೇರಿದಂತೆ ಪಾಕಿಸ್ತಾನದಲ್ಲಿ ಇನ್ನೂ ಹಲವಾರು ಸ್ತ್ರೀ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ.

Published by:Precilla Olivia Dias
First published: