Honor Killing: ಪ್ರೇಮಿಗಳಿಗೆ ಬೆಂಕಿ ಹಚ್ಚಿ ಕೊಂದ ಯುವತಿಯ ಕುಟುಂಬಸ್ಥರು; ಮರ್ಯಾದಾ ಹತ್ಯೆ ಶಂಕೆ

ಗುಡಿಸಲಿನಲ್ಲಿ ಪ್ರೇಮಿಗಳನ್ನು ಕೂಡಿ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್​ ಸಿಂಗ್ ಹೇಳಿದ್ದಾರೆ.

news18-kannada
Updated:August 6, 2020, 4:24 PM IST
Honor Killing: ಪ್ರೇಮಿಗಳಿಗೆ ಬೆಂಕಿ ಹಚ್ಚಿ ಕೊಂದ ಯುವತಿಯ ಕುಟುಂಬಸ್ಥರು; ಮರ್ಯಾದಾ ಹತ್ಯೆ ಶಂಕೆ
ಸಾಂದರ್ಭಿಕ ಚಿತ್ರ
  • Share this:
ಉತ್ತರ ಪ್ರದೇಶ(ಆ.06): ಪ್ರೇಮಿಗಳಿಬ್ಬರಿಗೆ ಯುವತಿಯ ಕುಟುಂಬಸ್ಥರು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ. ಈ ದುರಂತವನ್ನು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಬುಧವಾರ ಸಂಜೆ ಮಾತೌಂಡ್​ ಪ್ರದೇಶದ ಕರ್ಚಾ ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಯುವತಿಯ ಕುಟುಂಬಸ್ಥರು ರಾಜಿ ಮಾಡಿಕೊಳ್ಳುವ ನೆಪವೊಡ್ಡಿ ಇಬ್ಬರನ್ನೂ ಮನೆಗೆ ಕರೆಯಿಸಿ ಬಳಿಕ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಗುಡಿಸಲಿನಲ್ಲಿ ಪ್ರೇಮಿಗಳನ್ನು ಕೂಡಿ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್​ ಸಿಂಗ್ ಹೇಳಿದ್ದಾರೆ.

ಸೆಪ್ಟೆಂಬರ್ 23ರ ಒಳಗೆ ವಿಧಾನ‌ಮಂಡಲ ಅಧಿವೇಶನ ನಡೆಸಲು ಸಿದ್ಧತೆ

ಯುವಕ ಮತ್ತು ಯುವತಿ ಸುಟ್ಟ ಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ದುರಾದೃಷ್ಟವಶಾತ್ ಯುವಕ ಭೋಲಾ(23) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಯುವತಿ ಪ್ರಿಯಾಂಕ ಶೇ.80ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ಶಿಫ್ಟ್​ ಮಾಡುವಾಗ ಯುವತಿಯೂ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು, ಹತ್ಯೆ ಮಾಡಿರುವ ಆರೋಪದ ಮೇಲೆ ಯುವತಿಯ ಕುಟುಂಬದ 9 ಮಂದಿ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮರಣೋತ್ತರ ಪರೀಕ್ಷೆ ನಡೆದಿದೆ ಎನ್ನಲಾಗಿದೆ.
Published by: Latha CG
First published: August 6, 2020, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading