• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Crime: ಮಾಡೆಲ್​ ಭೀಕರ ಹತ್ಯೆ, ದೇಹದ ಭಾಗಗಳನ್ನು ಪೀಸ್​ ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ ಮಾಜಿ ಪತಿ!

Crime: ಮಾಡೆಲ್​ ಭೀಕರ ಹತ್ಯೆ, ದೇಹದ ಭಾಗಗಳನ್ನು ಪೀಸ್​ ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ ಮಾಜಿ ಪತಿ!

ಮಾಡೆಲ್​ ಅಬ್ಬಿ ಚೋಯ್

ಮಾಡೆಲ್​ ಅಬ್ಬಿ ಚೋಯ್

ಚೋಯ್ ಅವರ ಕೊಲೆಗೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ, ಅತ್ತೆ, ಪತಿ ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ ಚೋಯ್ ಅವರ ಹತ್ಯೆಗೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

 • Trending Desk
 • 5-MIN READ
 • Last Updated :
 • Share this:

  ಹಾಂಗ್ ಕಾಂಗ್‌ನ (Hong Kong) 28 ರ ಹರೆಯದ ಸಮಾಜವಾದಿ (Socialite) ಹಾಗೂ ರೂಪದರ್ಶಿ (Model) ಅಬ್ಬಿ ಚೋಯ್ ದಿಢೀರ್ ಕಾಣೆಯಾಗಿದ್ದರು. ಇದೀಗ ನಾಪತ್ತೆಯಾದ ಮೂರು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾರೆ. ಇದೊಂದು ಭೀಕರ ಕೊಲೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಚೋಯ್ ಅವರನ್ನು ಬರ್ಬರವಾಗಿ ಹತ್ಯೆ ಮಾಲಾಗಿದ್ದು, ಆಕೆಯ ಶಿರಚ್ಛೇದಿತ ದೇಹವು ಹಾಂಗ್ ಕಾಂಗ್ ನೆರೆಹೊರೆಯ ತೈ ಪೊ ಹಳ್ಳಿಯಲ್ಲಿ ಪತ್ತೆಯಾಗಿದೆ.  ಮರಣೋತ್ತರ ವರದಿಯ ಪ್ರಕಾರ ಆಕೆಯ ದೇಹದ ಕೆಲವು ಭಾಗಗಳನ್ನು ಸುಡಲಾಗಿದೆ ಹಾಗೂ ಇನ್ನಿತರ ಭಾಗಗಳು ರೆಫ್ರಿಜರೇಟರ್‌ನಲ್ಲಿಡಲಾಗಿತ್ತು ಎಂದು ತಿಳಿಸಿದೆ.  ಮಾಡೆಲ್​ ದೇಹದ ಇನ್ನೂ ಕೆಲವು ಭಾಗಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


  ಹೆಸರಾಂತ ರೂಪದರ್ಶಿ


  ಚೋಯ್ ಅವರ ಕೊಲೆಗೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ, ಅತ್ತೆ,  ಪತಿ ಸಹೋದರ  ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ ಚೋಯ್ ಅವರ  ಹತ್ಯೆಗೆ  ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಇನ್ನೂ ಈ ಕುರಿತು ತನಿಖೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.


  ವಿಕೃತ ಮೆರೆದಿರುವ ಕೊಲೆಗಡುಕರು


  ಭಾನುವಾರದಂದು, ಒಂದು ದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ಸೂಪ್ ಪಾಟ್ ಪತ್ತೆಯಾಗಿದ್ದು ಅದರಲ್ಲಿ ಚೋಯ್​  ತಲೆಬುರುಡೆ, ಹಲವಾರು ಪಕ್ಕೆಲುಬುಗಳು ಮತ್ತು ಕೂದಲು ಸೇರಿದಂತೆ ಚೋಯ್ ಅವರ ಶಂಕಿತ ಅವಶೇಷಗಳು ದೊರೆತಿವೆ. ಚೋಯ್ ಅವರ ಕೈ ಹಾಗೂ ಮುಂಡ ಸೇರಿದಂತೆ ದೇಹದ ಇನ್ನಿತರ ಭಾಗಗಳು ಕಾಣೆಯಾಗಿವೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.


  ಇದನ್ನೂ ಓದಿ: Italy Boat Tragedy: ಇಟಲಿಯಲ್ಲಿ ಭೀಕರ ದೋಣಿ ದುರಂತ, ಪಾಕಿಸ್ತಾನದ 24 ವಲಸಿಗರೂ ಸೇರಿ 59 ಮಂದಿ ಜಲಸಮಾಧಿ!

  ಕಾಣೆಯಾದ ಎರಡು ದಿನಗಳಲ್ಲಿ ಶವವಾಗಿ ಚೋಯ್ ಪತ್ತೆ


  28ರ ಹರೆಯದ ಚೋಯ್ ಕಾಣೆಯಾದ ಕೂಡಲೇ ಪೊಲೀಸ್ ತನಿಖೆಯನ್ನು ನಡೆಸಿದ್ದು ಎರಡು ದಿನಗಳಲ್ಲಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.  ಎರಡು ದಿನಗಳ ನಂತರ ನಗರದ ತೈ ಪೊ ನೆರೆಹೊರೆಯಲ್ಲಿರುವ ಮನೆಯಲ್ಲಿ ಆಕೆಯ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಎಲೆಕ್ಟ್ರಿಕ್ ಗರಗಸ,  ಮೀಟ್ ಸ್ಲೈಸರ್ ಮತ್ತು ಕೆಲವು ಬಟ್ಟೆಗಳು ಸಹ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  ಚೋಯ್ ಮಾಜಿ ಪತಿ ಹಾಗೂ ಸಂಬಂಧಿಕರ ಬಂಧನ


  ಚೋಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶನಿವಾರ ಆಕೆಯ  ಮಾಜಿ ಪತಿಯನ್ನು ನಗರದ ಹೊರವಲಯದಲ್ಲಿರುವ ಹಡುಗುಕಟ್ಟೆಯೊಂದರಲ್ಲಿ ಬಂಧಿಸಲಾಗಿದೆ.  ಜೊತೆಗೆ ಈತನ ಸಹೋದರ ಹಾಗೂ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಭಾನುವಾರ ಸಹಾ 47 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಐದನೇ ಶಂಕಿತ ಆರೋಪಿ ಎಂದು ತಿಳಿದುಬಂದಿದೆ.


  ಭೀಕರವಾಗಿ ಕೊಲೆನಡೆಸಲು ಕಾರಣವಾದರೂ ಏನು?


  L'Officiel Monaco ನಿಯತಕಾಲಿಕದಲ್ಲಿ ಕಾಣಿಸಿಕೊಂಡಿರುವ ಅಬ್ಬಿ, 1,00,000 ಕ್ಕೂ ಹೆಚ್ಚು Instagram ಫಾಲೋವರ್‌ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಶಾಲಿಯಾಗಿದ್ದರು. ಚೋಯ್ ಈ ವರ್ಷದ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಭಾಗವಹಿಸಿದ್ದರು. ಪ್ರಸಿದ್ಧ ರೂಪದರ್ಶಿಯನ್ನು ಭೀಕರವಾಗಿ ಕೊಲೆಗೈದಿರುವ ಮಾಹಿತಿಯು ನಗರದೆಲ್ಲೆಡೆ ಕಾಳ್ಗಿಚ್ಚಿನಂತೆ ವ್ಯಾಪಿಸಿದೆ. ಈ ರೀತಿ ಬರ್ಬರವಾಗಿ  ಆಕೆಯನ್ನು ಕೊಲೆಮಾಡಲು ಕಾರಣವೇನು ಎಂಬುದು ಕಗ್ಗಂಟಾಗಿದೆ.  ಚೋಯ್ ಆಸ್ತಿ ಕಬಳಿಸುವ ಹುನ್ನಾರದಿಂದ  ಅವರನ್ನು ಬರ್ಬರವಾಹಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.


  ಕಂಬನಿ ಮಿಡಿದ ಚೋಯ್ ಅಭಿಮಾನಿಗಳು


  ಕೊಲೆಯ ಕುರಿತು ತೀವ್ರವಾದ ತನಿಖೆಗಳು ನಡೆಯುತ್ತಿದ್ದು ಸುದ್ದಿಪತ್ರಿಕೆಗಳಲ್ಲಿ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಿದೆ.   ಅಬ್ಬಿಯವರ ಸಾವಿಗೆ  ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದು,  ಸಾಮಾಜಿಕ ಜಾಲತಾಣದಲ್ಲಿ  ಸಂತಾಪ ಸೂಚಿಸಿದ್ದಾರೆ.

  Published by:Rajesha M B
  First published: