Selfie ಮುನ್ನ ಇರಲಿ ಎಚ್ಚರ.. ಸುಂದರಿಯನ್ನು ಭಯಾನಕತೆಗೆ ದೂಡಿದ ಅತಿಯಾದ ಸೆಲ್ಫಿ ಕ್ರೇಜ್!

ವಾಟರ್ ಫಾಲ್ಸ್ ತುತ್ತ ತುದಿಗೆ ಹೋಗಿ ತನ್ನ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಸೋಫಿಯಾ ಚೆಯಂಗ್ ಕಾಲು ಜಾರಿ 16 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಬಲಿಯಾದ ಸುಂದರಿ

ಬಲಿಯಾದ ಸುಂದರಿ

  • Share this:
    ಜನರು ತಮ್ಮ ಮೊಬೈಲ್ ನ ಸ್ಟೇಟಸ್‌ನಲ್ಲಿ ತಾವು ಕ್ಲಿಕ್ಕಿಸಿಕೊಂಡ ಸೆಲ್ಫಿ ಯನ್ನು ಹಾಕಲು, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಕೌಂಟ್ ನಲ್ಲಿ ತಮ್ಮ ಸೆಲ್ಫಿ ಯನ್ನು ಅಪ್‌ಲೋಡ್ ಮಾಡಲು ಅನೇಕ ರೀತಿಯ ಬ್ಯಾಕ್‌ಗ್ರೌಂಡ್ ಇರುವಂತಹ ಜಾಗಕ್ಕೆ ಹೋಗಿ ವಿವಿಧ ತರಹದಲ್ಲಿ ಸೆಲ್ಫಿ ಕ್ಲಿಕ್ಕಿಸುವುದನ್ನು ನೋಡಿಯೇ ಇರುತ್ತೇವೆ. ವಿಭಿನ್ನವಾಗಿ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಎತ್ತರದ ಕಟ್ಟಡದ ಮೇಲೆ ಏರುವುದು, ಕೋಟೆಯ ಮೇಲೆ ಏರುವುದು, ಸಮುದ್ರ ದಡದಲ್ಲಿ ಇರುವಂತಹ ಕಲ್ಲಿನ ಮೇಲೆ ನಿಂತು ಮತ್ತು ಜಲಪಾತಗಳಲ್ಲಿ ತುತ್ತ ತುದಿಯಲ್ಲಿ ಹೋಗಿ ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಕೆಲವೊಮ್ಮೆ ಜನರ ಪ್ರಾಣವನ್ನೇ ಬಲಿ ಪಡೆಯುತ್ತೆ. 


    ಇದು ತುಂಬಾ ವಿಷಾದದ ಸಂಗತಿಯಾಗಿದ್ದು, ಜನಕ್ಕೆ ಈ ಸೆಲ್ಫಿ ಹುಚ್ಚು ಕಡಿಮೆಯಾಗಿಲ್ಲ. ಆದ್ದರಿಂದಲೇ ಕೆಲವು ಎತ್ತರದ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಸಹ ಈಗ ಭಾರತದಲ್ಲಿ ಅನೇಕ ರಾಜ್ಯದ ಸರ್ಕಾರಗಳು ನಿಷೇಧಿಸಿರುವುದನ್ನು ಕಾಣುತ್ತೇವೆ. ದೇಶ ವಿದೇಶಗಳಲ್ಲಿರುವಂತಹ ಎತ್ತರದ ಜಾಗಗಳಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಬಹುತೇಕವಾಗಿ ನಿಷೇಧಿಸಿದ್ದಾರೆ.


    ಎಷ್ಟೋ ಜನರು ವಿಭಿನ್ನವಾಗಿ ಸೆಲ್ಫಿ ಕ್ಲಿಕ್ಕಿಸುವುದಕ್ಕೆ ಹೋಗಿ ಸಾವನ್ನಪ್ಪಿರುವುದನ್ನು ನಾವು ಕಂಡಿರುತ್ತೇವೆ. ಈಗ 32 ವರ್ಷದ ಹಾಂಗ್ ಕಾಂಗ್ ಮೂಲದ ಇನ್ಸ್ಟಾಗ್ರಾಮ್ ಜನಪ್ರಿಯತೆ ಹೊಂದಿರುವ ಸೋಫಿಯಾ ಚೆಯಂಗ್ ತನ್ನ ಮೂವರು ಸ್ನೇಹಿತರೊಡನೆ ಹಾ ಪಾಕ್ ಲೈ ಎನ್ನುವ ಪಾರ್ಕ್ ಗೆ ಜುಲೈ 10 ರಂದು ಹೋಗಿರುತ್ತಾರೆ. ಪಾರ್ಕ್‌ನಲ್ಲಿರುವ ಫೈನ್ಯಾಪಲ್ ಮೌಂಟನ್ ಸೈಟ್ ನ ಹತ್ತಿರವಿರುವಂತಹ ವಾಟರ್ ಫಾಲ್ಸ್ ತುತ್ತ ತುದಿಗೆ ಹೋಗಿ ತನ್ನ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಆಕೆ ಕಾಲು ಜಾರಿ 16 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.




    ಘಟನೆ ನಡೆದ ತಕ್ಷಣವೇ ಅಲ್ಲೇ ಇದ್ದಂತಹ ಸೋಫಿಯಾ ಸ್ನೇಹಿತರು ಕೂಡಲೇ ಎಮರ್ಜೆನ್ಸಿ ಸೇವೆಗೆ ಕರೆ ಮಾಡಿದರೂ ಸಹ ಸೋಫಿಯಾ ಅವರನ್ನ ಆಸ್ಪತ್ರೆಯಲ್ಲಿ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಸೋಫಿಯಾ ಅವರ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಅವರ ಪ್ರವಾಸಕ್ಕೆ ಹೋದ ಮತ್ತು ಅವರು ಕಳೆದ ರಜೆಯಲ್ಲಿ ಹೋದಂತಹ ಸ್ಥಳಗಳ ಫೋಟೋಗಳೇ ಇರುವುದು ವಿಶೇಷವಾಗಿದೆ. ಇವರು ಜುಲೈ 9 ರಂದು ಸಮುದ್ರ ತೀರದಲ್ಲಿ ಬಾಡಿಬೋರ್ಡ್ ನೊಂದಿಗೆ ಪೋಸ್ ನೀಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಕೊನೆಯದಾಗಿ ಹಾಕಿರುವ ಪೋಸ್ಟ್ ಆಗಿದ್ದು ಅದರ ಕೆಳಗೆ "ಬೆಟರ್ ಡೇಸ್ ಆರ್ ಕಮಿಂಗ್, ದೇ ಆರ್ ಕಾಲ್ಡ್ ಸ್ಯಾಟರ್ಡೇಸ್ ಏಂಡ್ ಸಂಡೇಸ್" ಎಂದು ಬರೆದುಕೊಂಡಿದ್ದರು.


    ಸೋಫಿಯಾ ಅವರ ಸಾವಿನ ಸುದ್ದಿಯನ್ನು ಕೇಳಿ ಅನೇಕ ಜನರು ಅವರ ಇನ್ಸ್ಟಾಗ್ರಾಮ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಕೆಲವರು ಸಾವಿನ ಸುದ್ದಿ ಕೇಳಿ ದಿಗ್ಬ್ರಾಂತರಾಗಿದ್ದಾರೆ. ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಸಾವನ್ನಪ್ಪಿರುವ ಘಟನೆ ಇದು ಮೊದಲನೆಯದು ಅಲ್ಲ. ವರದಿಗಳ ಪ್ರಕಾರ ಸುಮಾರು 330 ಜನರು ತಮ್ಮ ಪ್ರಾಣವನ್ನು ಹೀಗೆಯೇ ವಿಹಾರಕ್ಕೆ ಹೋದಾಗಲೇ ಬಿಟ್ಟಿದ್ದು ತುಂಬಾ ವಿಷಾದದ ಸಂಗತಿಯಾಗಿದೆ.
    Published by:Kavya V
    First published: