• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Honeytrap: ನಿವೃತ್ತಿ ವಯಸ್ಸಲ್ಲಿ ಯುವತಿ ಮೋಹಕ್ಕೆ ಬಿದ್ದು ಜೈಲು ಪಾಲಾದ ಡಿಆರ್​ಡಿಒ ವಿಜ್ಞಾನಿ! ಪಾಕ್​ಗೆ ರಹಸ್ಯ ಮಾಹಿತಿ ರವಾನಿಸಿರುವ ಶಂಕೆ!

Honeytrap: ನಿವೃತ್ತಿ ವಯಸ್ಸಲ್ಲಿ ಯುವತಿ ಮೋಹಕ್ಕೆ ಬಿದ್ದು ಜೈಲು ಪಾಲಾದ ಡಿಆರ್​ಡಿಒ ವಿಜ್ಞಾನಿ! ಪಾಕ್​ಗೆ ರಹಸ್ಯ ಮಾಹಿತಿ ರವಾನಿಸಿರುವ ಶಂಕೆ!

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹನಿಟ್ರ್ಯಾಪ್​ಗೆ ಪಳಗಾಗಿ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ (Pakistan Based Intelligence) ನಮ್ಮ ದೇಶದ ಗೌಪ್ಯ ಮಾಹಿತಿಗಳನ್ನು ಒದಗಿಸಿದ ಆರೋಪದ ಮೇಲೆ ಡಿಆರ್​ಡಿಒ ವಿಜ್ಞಾನಿಯೊಬ್ಬರನ್ನು ಪುಣೆಯಲ್ಲಿ ಬಂಧಿಸಲಾಗಿದೆ.

 • News18 Kannada
 • 2-MIN READ
 • Last Updated :
 • Pune, India
 • Share this:

ಪುಣೆ: ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ( Defense Research and Development Organization) ಹಿರಿಯ ಅಧಿಕಾರಿಯೊಬ್ಬರನ್ನು ಭಯೋತ್ಪಾದನಾ ನಿಗ್ರಹ ದಳ (Anti Terrorism Squad) ಬಂಧಿಸಿದೆ. ಅತ್ಯುತ್ತಮ ವಿಜ್ಞಾನಿಯಾಗಿದ್ದ ಅವರು ಏಕಾಏಕಿ ಬಂಧನಕ್ಕೊಳಗಾಗಿರುವುದಕ್ಕೆ ಇತರ ವಿಜ್ಞಾನಿಗಳು ಅಚ್ಚರಿಗೊಂಡಿದ್ದಾರೆ. ಹನಿಟ್ರ್ಯಾಪ್ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ (Pakistan Based Intelligence) ನಮ್ಮ ದೇಶದ ಗೌಪ್ಯ ಮಾಹಿತಿಗಳನ್ನು ಒದಗಿಸಿದ ಆರೋಪದ ಮೇಲೆ ವಿಜ್ಞಾನಿ ಪ್ರದೀಪ್​ ಕುರಲ್ಕರ್​ ಅವರನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಎಟಿಎಸ್​ ಅಧಿಕಾರಿಗಳ ಪ್ರಕಾರ ಪ್ರದೀಪ್​ ವಾಟ್ಸಪ್​ ಮತ್ತು ವಿಡಿಯೋ ಕರೆಗಳ ಮೂಲಕ ದೇಶದ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಏಜೆಂಟ್​ಗೆ ರವಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಡಿಆರ್‌ಡಿಒ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಎಂಜಿನಿಯರ್‌ಗಳು ನಿರ್ದೇಶಕರಾಗಿದ್ದ ಈ ವಿಜ್ಞಾನಿಗೆ ಒಮ್ಮೆ ವಾಟ್ಸಾಪ್​ನಲ್ಲಿ ಹಾಟ್ ಗರ್ಲ್ಸ್ ಎಂಬ ಸಂದೇಶ ಬಂದಿತ್ತು. ಆ ಲಿಂಕ್​ ಕ್ಲಿಕ್ಕಿಸಿದಾಗ ವಿಡಿಯೋದಲ್ಲಿ, ಹಾಸಿಗೆಯ ಮೇಲೆ ಮಲಗಿರುವ ಹುಡುಗಿ ಲೈವ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಹೀಗೆ ಚಾಟಿಂಗ್ ಶುರುವಾಗಿದೆ.


ರಹಸ್ಯ ಮಾಹಿತಿ ಹಂಚಿಕೊಂಡಿರುವ ಶಂಕೆ


ಹೀಗೆ ಹತ್ತಿರವಾದ ಕ್ರಮೇಣ ಆಕೆ ವೈಯುಕ್ತಿಕ ವಿಷಯಗಳನ್ನು ತಿಳಿದುಕೊಂಡಿದ್ದಾಳೆ. ಅವಳು ಕೂಡ ತನ್ನ ಬಗ್ಗೆ ಹೇಳಿಕೊಂಡಿದ್ದಾಳೆ. ನಂತರ ಕ್ರಮೇಣ DRDO ಬಗ್ಗೆ ವಿಚಾರಿಸಿದಾಗ, ವಿಜ್ಞಾನಿ ಅವಳಿಗೆ ಅತ್ಯಂತ ನಿಗೂಢವಾದ ವಿಷಯಗಳನ್ನು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅತ್ಯಂತ ಪ್ರಮುಖ ಲ್ಯಾಬ್ ವಿಜ್ಞಾನಿಯಾಗಿದ್ದು, ದೇಶದ ರಹಸ್ಯಗಳನ್ನು ಶತ್ರುಗಳಿಗೆ ರವಾನಿಸಿದ್ದಾರೆ ಎಂಬ ಅನುಮಾನ ಎಟಿಎಸ್​ಗೆ ಅರಿವಿಗೆ ಬಂದಿದೆ. ನಂತರ ಇದು ಹನಿಟ್ರ್ಯಾಪ್​ಗೆ ಒಳಗಾಗಿ ನಡೆದಿರುವ ಘಟನೆ ಎಂದು ಗುರ್ತಿಸಿದ್ದಾರೆ. ಕೂಡಲೇ ವಿಜ್ಞಾನಿಯನ್ನು ಬಂಧಿಸಿ ಅವರ ಮೊಬೈಲ್ ವಶಪಡಿಸಿಕೊಂಡಿಸಿದ್ದಾರೆ.


ಇದನ್ನೂ ಓದಿ: OMG: ಈ ದೇಶದಲ್ಲಿ ಮಕ್ಕಳು ಮಾಡಿಕೊಳ್ಳುವುದಕ್ಕೂ ಇದೆ ರಜಾ! ಆ ದಿನ ಮಗು ಜನಿಸಿದರೆ ಮನೆ, ಕಾರು, ಲಕ್ಷಗಟ್ಟಲೇ ಹಣ ಸಿಗುತ್ತೆ!


ನಿವೃತ್ತಿಗೆ 6 ತಿಂಗಳಿರುವಾಗ ಹನಿಟ್ರ್ಯಾಪ್​ಗೆ ಬಿದ್ದ ವಿಜ್ಞಾನಿ


ಪ್ರಾಥಮಿಕ ತನಿಖೆಯಲ್ಲಿ ಇದು ಹನಿಟ್ರ್ಯಾಪ್ ಪ್ರಕರಣ ಎಂದು ಎಟಿಎಸ್​ ತಿಳಿಸಿದೆ. ಪ್ರದೀಪ್​ ಅವರು ನಿವೃತ್ತಿಗೆ ಆರು ತಿಂಗಳಿರುವಾಗ ಹನಿಟ್ರ್ಯಾಪ್‌  ಬಲೆಗೆ ಬಿದ್ದಿದ್ದಾರೆ.   ಕಳೆದ ಆರು ತಿಂಗಳಿನಿಂದ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಸಂಬಂಧಿಸಿದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಅವರು, ಕೆಲವು ಧ್ವನಿ ಸಂದೇಶಗಳು ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನ ಮೂಲದ ಏಜೆಂಟ್​ಗಳಿಗೆ ಕೆಲವು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಕಸ್ಟಡಿಗೆ ಪಡೆದುಕೊಂಡ ಎಟಿಎಸ್


ಕುರಲ್ಕರ್ ಅವರು ಕ್ಷಿಪಣಿಗಳನ್ನು ಒಳಗೊಂಡಂತೆ ಡಿಆರ್‌ಡಿಒದ ಹಲವಾರು ಕಾರ್ಯತಂತ್ರದ ಮಹತ್ವದ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ರಹಸ್ಯ ಮಾಹಿತಿ ಹಂಚಿಕೊಂಡಿರುವ ಆರೋಪದ ಮೇಲೆ ಅವರ ವಿರುದ್ಧ ಅಧಿಕೃತ ರಹಸ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.


ಡಿಆರ್‌ಡಿಒದ ವಿಜಿಲೆನ್ಸ್ ಮತ್ತು ಗುಪ್ತಚರ ತಂಡ ಹಲವು ತಿಂಗಳುಗಳಿಂದ ಆರೋಪಿ  ಮೇಲೆ ಕಣ್ಣಿಟ್ಟಿತ್ತು. ಡಿಆರ್‌ಡಿಒ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಅಧಿಕೃತ ರಹಸ್ಯ ಕಾಯಿದೆಯಡಿ ಗುರುವಾರ ಎಟಿಎಸ್ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ಮೇ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

top videos


  ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಇದೇ ರೀತಿಯ ದೌರ್ಬಲ್ಯ ಹೊಂದಿರುವ ವಿಜ್ಞಾನಿಗಳನ್ನು ಗುರಿಯಾಗಿಸುತ್ತಿದೆ. ತನ್ನ ಏಜೆಂಟರಾದ ಹುಡುಗಿಯರನ್ನು ಫೀಲ್ಡ್​ಗೆ ಬಿಟ್ಟು , ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ಹನಿಟ್ರ್ಯಾಪ್ ಮಾಡುತ್ತಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು