Honeytrap: ಖತರ್ನಾಕ್ ಗ್ಯಾಂಗ್‌ನ ಹನಿಟ್ರ್ಯಾಪ್‌ನಲ್ಲಿ ಬಿದ್ದ ಉದ್ಯಮಿ; ಹನಿಟ್ರ್ಯಾಪ್‌‌ನಿಂದ ತಪ್ಪಿಸಿಕೊಳ್ಳೋದು ಹೇಗೆ?

ಮುಂಬೈನ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಗ್ಯಾಂಗ್‍ವೊಂದರ ಬಲೆಗೆ ಬೀಳಿಸಿಕೊಂಡು 7.5 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ. ಉದ್ಯಮಿ ವಿಕ್ರಮ್ ರಾಥೋಡ್ ತಮ್ಮ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಭಯದಿಂದ ಅವರು ಕೇಳಿದಷ್ಟು ಹಣ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಕಾರಣಿಗಳು, ಉದ್ಯಮಿಗಳು, ಹಣವಂತರನ್ನು ಟಾರ್ಗೆಟ್ (Target) ಮಾಡಿ, ಹನಿಟ್ರ್ಯಾಪ್ (Honeytrap) ಮಾಡಿ ಹಣ ವಸೂಲಿ ಮಾಡುವ ಅದೆಷ್ಟೋ ಗ್ಯಾಂಗ್​ಗಳು ಹುಟ್ಟಿಕೊಂಡಿವೆ. ಚೆಂದ ಚೆಂದದ ಹುಡುಗಿಯರನ್ನು ಮುಂದೆ ಬಿಟ್ಟು, ಮೋಡಿ ಮಾಡಿ ಪುರುಷರನ್ನು ತಮ್ಮತ್ತ ಸೆಳೆಯುತ್ತಾರೆ. ಅವರ ಜೊತೆ ಆತ್ಮೀಯತೆ ಬೆಳಸಿಕೊಂಡು, ಅವರ ಖಾಸಗಿ ವಿಡಿಯೋ, ಫೋಟೋ  (Photo) ಅಥವಾ ಅವರ ಜೊತೆಗಿನ ವಿಡಿಯೋ ಮಾಡಿ ಬ್ಲಾಕ್‍ಮೇಲ್ ಮಾಡ್ತಾರೆ. ಹಣ ಕೊಡುವಂತೆ ಕಾಟ ಕೊಡ್ತಾರೆ. ಕೊಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವುದಾಗಿ ಭಯ ಪಡಿಸುತ್ತಾರೆ. ಮುಂಬೈನ (Mumbai) ಉದ್ಯಮಿಯೊಬ್ಬರನ್ನು (Businessman) ಹನಿಟ್ರ್ಯಾಪ್ ಗ್ಯಾಂಗ್‍ವೊಂದ ಬಲೆಗೆ ಬೀಳಿಸಿಕೊಂಡು 7.5 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ. ಇನ್ನೂ ಕೊಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ.

ಮುಖ ನೋಡಿ ಮೋಸ ಹೋದ ಉದ್ಯಮಿ!
ಈ ಕಥೆಯಲ್ಲಿ ಮೋಸ ಹೋದ ಉದ್ಯಮಿ ಹೆಸರು ವಿಕ್ರಮ್ ರಾಥೋಡ್. 67 ವರ್ಷ. ಮುಂಬೈನ ಘಾಟ್‍ಕೋಪರ್​ ಜವಳಿ ವ್ಯಾಪಾರಿ. ಇವರಾಯ್ತು, ಇವರ ಕೆಲಸ ಆಯ್ತು ಎಂದು ಇದ್ದವರು. ಆದ್ರೆ ಇವರಿಗೆ ಬಂದ ಒಂದು ಮೆಸೇಜ್, ಇವರ ನೆಮ್ಮದಿಯನ್ನೇ ಹಾಳು ಮಾಡಿದೆ. ಸುಂದರವಾದ ಮುಖ ನೋಡಿ ಮೋಸ ಹೋಗಿದ್ದಾರೆ. ಒಂದು ವಿಡಿಯೋ ಕಾಲ್‍ನಿಂದ ಲಕ್ಷಗಟ್ಟಲೇ ಹಣ ಕಳೆದುಕೊಂಡು, ಈಗ ಪರಿತಪಿಸುತ್ತಿದ್ದಾರೆ.

ಗ್ಯಾಂಗ್ ಬಲೆಗೆ ಬಿದ್ದಿದ್ದು ಹೇಗೆ ಉದ್ಯಮಿ?
ಉದ್ಯಮಿ ವಿಕ್ರಮ್ ರಾಥೋಡ್‍ಗೆ ಜೂನ್ 11ರಂದು ಮಹಿಳೆಯೊಬ್ಬಳಿಂದ ಹಾಯ್ ಎಂಬ ಮೆಸೇಜ್ ಬರುತ್ತೆ. ಆ ಮೆಸೇಜ್ ಬಂದ ತಕ್ಷಣ ವಿಕ್ರಮ್ ರಾಥೋಡ್ ಸಹ ರಿಪ್ಲೈ ಮಾಡುತ್ತಾರೆ. ವಿಕ್ರಮ್ ಸಂದೇಶ ಕಳಿಸುತ್ತಿದ್ದಂತೆ ಆ ಮಹಿಳೆ ವಿಡಿಯೋ ಕಾಲ್ ಮಾಡ್ತಾಳೆ. ಕರೆ ಸ್ವೀಕರರಿಸಿದಾಗ ವಿಕ್ರಮ್ ರಾಥೋಡ್‍ಗೆ ಬಾತ್‍ರೂಮ್‍ಗೆ ಹೋಗುವಂತೆ ಹೇಳುತ್ತಾಳೆ. ನಂತರ ಬಟ್ಟೆ ಬಿಚ್ಚುವಂತೆ ಹೇಳುತ್ತಾಳೆ. ಆಕೆ ಹೇಳಿದಂತೆ ಇವರು ಮಾಡುತ್ತಾ ಹೋಗುತ್ತಾರೆ. ನಂತರ ಸರಿಯಾಗಿ ಪೋನ್ ಹಿಡಿದುಕೊಳ್ಳುವಂತೆ ಹೇಳಿದಾಗ ಎಚ್ಚೆತ್ತ ವಿಕ್ರಮ್ ಕಾಲ್ ಕಟ್ ಮಾಡ್ತಾರೆ.

ಮಹಿಳೆಯೂ ನಗ್ನವಾಗಿದ್ದಳಂತೆ!
ಉದ್ಯಮಿ ವಿಕ್ರಮ್‍ಗೆ ವಿಡಿಯೋ ಕಾಲ್ ಮಾಡಿದ್ದ ಮಹಿಳೆ ವಿಕ್ರಮ್ ಅವರಿಗೆ ಬೆತ್ತಲೆ ಆಗುವಂತೆ ಹೇಳುದ್ದಾಳೆ. ಆಕೆಯೂ ಸಹ ನಗ್ನವಾಗಿದ್ದಳಂತೆ. ಆಕೆ ಆಗ ಆತನಿಗೆ ಮೊಬೈಲ್‍ನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ಹೇಳಿದ್ದಾಳೆ. ಆಗ ಉದ್ಯಮಿಗೆ ಅನುಮಾನ ಬರುತ್ತೆ. ತನಗೆ ಏನೋ ಮೋಸ ಮಾಡುತ್ತಿರಬೇಕು ಎನ್ನಿಸಿ ತಕ್ಷಣ ವಿಡಿಯೋ ಕಾಲ್ ಕಟ್ ಮಾಡಿದ್ದಾರೆ. ನಂತರ ಆಕೆಯ ನಂಬರ್ ಡಿಲಿಟ್ ಮಾಡಿ, ಬ್ಲ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: Honey Trap: ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ; ವಿಐಪಿಗಳೇ ಈಕೆಯ ಗುರಿ

ಮೊದಲ ಸಲ 25,500 ಹಣ ವರ್ಗಾವಣೆ!
ಆ ಮಹಿಳೆ ಉದ್ಯಮಿಗೆ ಜೂನ್ 11ರಂದು ಕರೆ ಮಾಡಿದ್ರೆ, ಜೂನ್ 13ರಂದು ವಿಕ್ರಮ್‍ಗೆ ಒಂದು ಕರೆ ಬರುತ್ತೆ. ಅದನ್ನು ಸ್ವೀಕರಿಸಿದ ಉದ್ಯಮಿಗೆ ನಿಜವಾಗ್ಲೂ ಶಾಕ್ ಕಾದಿರುತ್ತೆ. ನಾವು ದೆಹಲಿ ಪೊಲೀಸ್ ವಿಶೇಷ ಸೆಲ್‍ನಿಂದ ಕರೆ ಮಾಡುತ್ತಿದ್ದೇವೆ. ಲೈಂಗಿಕ ಸಂಬಂಧಿತ ಪ್ರಕರಣವನ್ನು ತನಿಖೆ ಮಾಡುವಾಗ ಮಹಿಳೆಯೊಂದಿಗಿನ ತನ್ನ ನಗ್ನ ವಿಡಿಯೋ ತಮಗೆ ಬಂದಿರುವುದಾಗಿ ನಗರದ ನಿವಾಸಿ ತಿಳಿಸಿದರು ಎಂದು ರಾಥೋಡ್‍ಗೆ ಆತನ ನಂಬರ್ ನೀಡಿದ್ದಾರೆ. ದೂರುದಾರರು ನೀಡಿದ ಸಂಖ್ಯೆಗೆ ಕರೆ ಮಾಡಿದಾಗ, ಆ ವ್ಯಕ್ತಿಯು ವೀಡಿಯೊ ಅಪ್‍ಲೋಡ್ ಮಾಡುವುದನ್ನು ತಡೆಯಲು 25,500 ರೂಪಾಯಿ ಕೇಳಿದ್ದಾರೆ. ತಕ್ಷಣ ಉದ್ಯಮಿ ಆನ್‍ಲೈನ್‍ನಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ.

ಕೆಲವೇ ಗಂಟೆಗಳಲ್ಲಿ 32,000 ರೂಪಾಯಿಗೆ ಬೇಡಿಕೆ
ಉದ್ಯಮಿ ವಿಕ್ರಮ್ 25,500 ರೂಪಾಯಿಯನ್ನು ಆನ್‍ಲೈನ್‍ನಲ್ಲಿ ವರ್ಗಾವಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಕರೆ ಬರುತ್ತೆ ಹೆಚ್ಚುವರಿ 32,000 ರೂಪಾಯಿಗಳನ್ನು ನೀಡುವಂತೆ ಬೇಡಿಕೆ ಇಡುತ್ತಾರೆ. ಉದ್ಯಮಿಗೆ ಬೇರೆ ದಾರಿ ಕಾಣದೇ ಅವರು ಕೇಳಿದಷ್ಟು ಹಣವನ್ನು ವರ್ಗಾಯಿಸುತ್ತಾರೆ.

ಮರುದಿನ 50 ಸಾವಿರಕ್ಕೆ ಬೇಡಿಕೆ
ದುಡ್ಡಿನ ರುಚಿ ಕಂಡ ಟ್ರ್ಯಾಪ್ ಗ್ಯಾಂಗ್, ಮರುದಿನವೇ ಉದ್ಯಮಿ ರಾಥೋಡ್‍ಗೆ ಕರೆ ಮಾಡಿ ನಿಮಗೆ ವಿಡಿಯೋ ಕಾಲ್ ಮಾಡಿದ್ದ ಮಹಿಳೆಯನ್ನು ಪೊಲೀಸರು ಸೆಕ್ಸ್ ಕೇಸ್‍ನಲ್ಲಿ ಬಂಧಿಸುತ್ತಿದ್ದಾರೆ. ನಿನ್ನ ನಗ್ನ ವಿಡಿಯೋ ಅವಳ ಬಳಿ ಇದೆ. ನೀನು ತೊಂದರೆಯಾಗಬಾರದೆಂದು 50 ಸಾವಿರ ಕೊಡು ಎಂದರು. ಆಗಲೂ ಉದ್ಯಮಿ ಅವರ ಬೇಡಿಕೆಯನ್ನು ಈಡೇರಿಸಿದ್ದಾನೆ.

ಜುಲೈ 16ರಂದು 2.5 ಲಕ್ಷಕ್ಕೆ ಬೇಡಿಕೆ!
ಉದ್ಯಮಿ ವಿಕ್ರಮ್ ರಾಥೋಡ್ ಯಾವಾಗ ಹಣ ಕೊಡುತ್ತಾನೆ ಎಂದು ಗೊತ್ತಾಯ್ತೋ, ಆಗ ಕದೀಮರು ಹೆಚ್ಚು ಹೆಚ್ಚು ಹಣ ಕೇಳಲು ಶುರು ಮಾಡಿದ್ರು. ಜುಲೈ 16ರಂದು ಉದ್ಯಮಿಗೆ ಕರೆ ಮಾಡಿದ ಗ್ಯಾಂಗ್‍ನವನು, ನಿಮಗೆ ವಿಡಿಯೋ ಕಾಲ್ ಮಾಡಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಮೊಬೈಲ್‍ನಲ್ಲಿರೋ ತಮ್ಮ ವಿಡಿಯೋ ಕ್ಲಿಪ್ ಡಿಲಿಟ್ ಮಾಡಲು 2.5 ಲಕ್ಷ ಕೊಡಬೇಕೆಂದು ಬೇಡಿಕೆ ಇಡುತ್ತಾರೆ. ಅದಕ್ಕೆ ಉದ್ಯಮಿ ಅವತ್ತೂ ಸಹ ಹಣ ನೀಡುತ್ತಾನೆ.

ಇದನ್ನೂ ಓದಿ: AnantRaju Suicide: ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ; ಡೆತ್​ ನೋಟ್​ನಲ್ಲಿ ಯಾರ ಹೆಸರಿದೆ ಗೊತ್ತಾ?

ಜುಲೈ 18ರಂದು 4 ಲಕ್ಷಕ್ಕೆ ಬೇಡಿಕೆ
2.5 ಲಕ್ಷ ಪಡೆದ ನಂತರವೂ ಸುಮ್ಮನಾಗದ ಖತರ್ನಾಕ್‍ಗಳು ಕೊನೆಗೆ ಜುಲೈ 18ರಂದು ಮತ್ತೆ ಉದ್ಯಮಿ ವಿಕ್ರಮ್ ರಾಥೋಡ್‍ಗೆ ಕರೆ ಮಾಡುತ್ತಾರೆ. ಸಮಸ್ಯೆಯಲ್ಲ ಬಗೆಹರಿದಿದೆ. ಆದ್ರೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು 4 ಲಕ್ಷ ಕೊಡಿ ಎಂದು ಕೇಳಿದ್ದಾರೆ. ಆಗಲೂ ಉದ್ಯಮಿ 4 ಲಕ್ಷ ನೀಡಿದ್ದಾರೆ.

ಹಣ ಕಳೆದುಕೊಂಡು ಮೇಲೆ ಪೊಲೀಸರ ಮೊರೆ
ಉದ್ಯಮಿ ಕೇಳಿ ಕೇಳಿದಾಗ ಹಣ ಕೊಟ್ರೂ, ಪದೇ ಪದೇ ಕರೆ ಮಾಡಿ ಹಣ ಕೊಡುವಂತೆ ಕರೆಗಳು ಬರ್ತಾನೆ ಇರುತ್ತವೆ. ಅದಕ್ಕೆ ಬೇಸತ್ತ ಉದ್ಯಮಿ ಪೊಲೀಸರ ಮೊರೆ ಹೋಗಲು ನಿರ್ಧರಿಸುತ್ತಾರೆ. ತಿಲಕ್ ನಗರ ಪೊಲೀಸರನ್ನು ಸಂಪರ್ಕಿಸಿ, ಹನಿ ಟ್ರ್ಯಾಪ್‍ನಲ್ಲಿ 7.5 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ದೂರು ನೀಡುತ್ತಾರೆ.

ಪೊಲೀಸರಿಂದ ತನಿಖೆ
ವಂಚನೆ, ಫೋರ್ಜರಿ, ನಂಬಿಕೆ ದ್ರೋಹ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಗರ ಪೊಲೀಸ್ ಸೈಬರ್ ಸೆಲ್ ಸಮಾನಾಂತರ ತನಿಖೆ ನಡೆಸುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳು ಮತ್ತು ಕರೆ ಮಾಡಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಜನ ಸಾಮಾನ್ಯರೇ ಎಚ್ಚರ!
ನೋಡಿ ಜನ ಸಾಮಾನ್ಯರೇ ಆ ಉದ್ಯಮಿ ಪಾಡನ್ನು. ಅವನ ಬಳಿ ಏನೋ ಹಣ ಇತ್ತು. ಅದಕ್ಕೆ ಕದೀಮರು ಕೇಳಿ ಕೇಳಿದಾಗಲೆಲ್ಲ ಹಣ ಕೊಟ್ಟಿದ್ದಾನೆ. ಆದರೆ ಬೇರೆ ದುಡ್ಡು ಇಲ್ಲದವರು ಆಗಿದ್ರೆ ಏನು ಮಾಡಬೇಕಿತ್ತು. ನಿಮ್ಮ ಮಾನ ಮರ್ಯಾದೆ ಸಾಮಾಜಿಕ ಜಾಲ ತಾಣದಲ್ಲಿ ಹರಾಜು ಆಗಿ ಬಿಡುತ್ತಿತ್ತು.

ಅನ್ಯ ಕರೆಗಳ ಬಗ್ಗೆ ಇರಲಿ ಗಮನ
ಜನ ಸಾಮಾನ್ಯರೇ ನಿಮ್ಮ ಮೊಬೈಲ್‍ಗೆ ಅನ್ಯ ನಂಬರ್‍ನಿಂದ ಕರೆ ಅಥವಾ ಸಂದೇಶ ಬಂದಾಗ ಎಚ್ಚರ. ಸುಮ್ಮನೇ ಗೊತ್ತಿಲ್ಲದವರ ಕರೆಗಳಿಗೆ ಉತ್ತರಿಸಬೇಡಿ. ಏನಾದ್ರೂ ತೊಂದರೆಯಾದ್ರೆ ತಕ್ಷಣ ಪೊಲೀಸರಿಗೆ ದೂರು ಕೊಡಿ. ಆಗ ನೀವು ಕಷ್ಟ ಅನುಭವಿಸುವುದು ತಪ್ಪುತ್ತೆ.

ಉದ್ಯಮಿ ವಿಕ್ರಮ್ ರಾಥೋಡ್ ತಮ್ಮ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಭಯದಿಂದ ಅವರು ಕೇಳಿದಷ್ಟು ಹಣ ನೀಡಿದ್ದಾರೆ. ಅವರು ಹಣವಂತರಾಗಿದ್ದರಿಂದ ಹಣ ನೀಡಲು ಸಾಧ್ಯವಾಯ್ತು. ಅದಕ್ಕೆ ಯಾವಾಗಲು ಎಚ್ಚರದಿಂದ ಇರಬೇಕು.
Published by:Savitha Savitha
First published: