3 ವರ್ಷದಲ್ಲಿ 48 ಯುವಕರ ಮೇಲೆ ಅತ್ಯಾಚಾರ!; ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ವಿಕೃತ ಕಾಮಿಗೆ ಜೀವಾವಧಿ ಶಿಕ್ಷೆ

ನೈಟ್​ಕ್ಲಬ್, ಬಾರ್​ಗಳಿಗೆ ಬರುತ್ತಿದ್ದ ಗಂಡಸರನ್ನೇ ಗುರಿಯಾಗಿಸಿಕೊಂಡು, ಅವರೊಂದಿಗೆ ಸ್ನೇಹ ಸಂಪಾದಿಸಿ ತನ್ನ ಲೈಂಗಿಕ ತೃಷೆ ಈಡೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಇಂಗ್ಲೆಂಡ್​ನ ಸಿನಾಗನಿಗೆ ಕೊನೆಗೂ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

Sushma Chakre | news18-kannada
Updated:January 9, 2020, 3:41 PM IST
3 ವರ್ಷದಲ್ಲಿ 48 ಯುವಕರ ಮೇಲೆ ಅತ್ಯಾಚಾರ!; ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ವಿಕೃತ ಕಾಮಿಗೆ ಜೀವಾವಧಿ ಶಿಕ್ಷೆ
ರೇನ್​ಹಾರ್ಡ್​ ಸಿನಾಗ
  • Share this:
ನವದೆಹಲಿ (ಜ. 9): ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಗು, ತಂಗಿ, ಅಕ್ಕ, ಅಮ್ಮ, ಮಗಳು, ವಿದ್ಯಾರ್ಥಿನಿ, ಶಿಕ್ಷಕಿ, ಅಜ್ಜಿ, ನಾದಿನಿ ಹೀಗೆ ಯಾರ್ಯಾರದೋ ಮೇಲೆ ಅತ್ಯಾಚಾರವೆಸಗಿರುವ ವಿಚಿತ್ರ ಕೇಸುಗಳ ಕುರಿತು ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಇಂಗ್ಲೆಂಡ್​ನಲ್ಲಿ ವಾಸವಾಗಿರುವ ಇಂಡೋನೇಷ್ಯಾ ಮೂಲದ ರೇನ್​ಹಾರ್ಡ್​ ಸಿನಾಗ ಎಂಬ 36 ವರ್ಷದ ವ್ಯಕ್ತಿ 48 ಯುವಕರ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಲಿಂಗಿಯಾಗಿದ್ದ ಸಿನಾಗನ ಮೇಲೆ ಇದುವರೆಗೂ 159 ಕೇಸುಗಳು ದಾಖಲಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

48 ಪುರುಷರ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವ ಸಿನಾಗನನ್ನು ಇಂಗ್ಲೆಂಡ್​ನ ಅತ್ಯಂತ ಅಪಾಯಕಾರಿ ರೇಪಿಸ್ಟ್​ ಎನ್ನಲಾಗಿದೆ. ಅಧಿಕೃತವಾಗಿ ಆತನ ವಿರುದ್ಧ 159 ಕೇಸುಗಳು ದಾಖಲಾಗಿದ್ದು, ತಮ್ಮ ಹೆಸರು ಬಹಿರಂಗವಾಗುತ್ತದೆ ಎಂಬ ಭಯದಿಂದ ಲಿಖಿತವಾಗಿ ದೂರು ದಾಖಲಿಸದ ಬಾಕಿ ಪ್ರಕರಣಗಳನ್ನು ಸೇರಿಸಿದರೆ 190ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ಸಿನಾಗ ಮೇಲೆ ದಾಖಲಾಗಿದೆ.  ಈ ಕೇಸುಗಳಲ್ಲಿ 136 ಬಾರಿ ಯುವಕರ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಗಳು ಸೇರಿವೆ ಎಂಬುದು ಬೆಚ್ಚಿಬೀಳಿಸುವ ಸಂಗತಿ.

ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಿನಾಗ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರೇ ಅಲ್ಲಿನ ಸ್ಥಿತಿ ನೋಡಿ ಬೆಚ್ಚಿ ಬಿದ್ದಿದ್ದರು. ಆತನ ಮನೆಯಲ್ಲಿ ತಾನು ಮಾಡಿರುವ ಅತ್ಯಾಚಾರದ ವಿಡಿಯೋ ಸಿಡಿಗಳು, ಹಾರ್ಡ್​ ಡಿಸ್ಕ್​ಗಳು, ಪುರುಷರ ಒಳಉಡುಪುಗಳ ರಾಶಿ ಪತ್ತೆಯಾಗಿದ್ದವು. ದಾಳಿ ನಡೆಸಿದ್ದ ಪೊಲೀಸರು ಸಿನಾಗನ ಮನೆಯಿಂದ 250 ಡಿವಿಡಿಗಳು, ಆತನ ಮೊಬೈಲ್​ನಲ್ಲಿದ್ದ ಗ್ರಾಫಿಕ್ ಮೆಟಿರಿಯಲ್​ಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಮಲೆನಾಡನ್ನು ಬೆಚ್ಚಿಬೀಳಿಸಿದ್ದ ಶೃಂಗೇರಿ ಅತ್ಯಾಚಾರ ಪ್ರಕರಣ; ಅಪರಾಧಿಗಳ ಶಿಕ್ಷೆಯ ಪ್ರಮಾಣ ಇಂದು ಪ್ರಕಟ

ನೈಟ್​ಕ್ಲಬ್, ಬಾರ್​ಗಳಿಗೆ ಬರುತ್ತಿದ್ದ ಗಂಡಸರನ್ನೇ ಗುರಿಯಾಗಿಸಿಕೊಂಡು, ಅವರೊಂದಿಗೆ ಸ್ನೇಹ ಸಂಪಾದಿಸಿ ತನ್ನ ಲೈಂಗಿಕ ತೃಷೆ ಈಡೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಸಿನಾಗನಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. ತಾನು ಕೊಡುವ ಡ್ರಗ್ ಸೇವಿಸಿ ಅರೆಪ್ರಜ್ಞಾವಸ್ಥ ಸ್ಥಿತಿಗೆ ತಲುಪುತ್ತಿದ್ದ ಪುರುಷರ ಮೇಲೆ ಸಿನಾಗ ಅತ್ಯಾಚಾರವೆಸಗುತ್ತಿದ್ದ ಎಂದು ಬಿಬಿಸಿ ವರದಿ ಮಾಡಿದೆ.

ಹಲವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುವ ಭರವಸೆ ನೀಡಿ ಕರೆದುಕೊಂಡು ಬರುತ್ತಿದ್ದ ಸಿನಾಗ ಅತ್ಯಾಚಾರ ಎಸಗುತ್ತಿದ್ದ. ಬಾರ್​ನಿಂದ ಕುಡಿದು ಬರುವ ಯುವಕರು ನಶೆಯಲ್ಲಿದ್ದಾಗ ತನ್ನ ಮನೆಗೆ ಕರೆತಂದು ರೇಪ್ ಮಾಡುತ್ತಿದ್ದ. 2017 ಜುಲೈನಲ್ಲಿ ನಶೆಯಲ್ಲಿದ್ದ 18 ವರ್ಷದ ಯುವಕನನ್ನು ಮನೆಗೆ ಕರೆ ತಂದಿದ್ದ ಸಿನಾಗ ಆತನ ಜೊತೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾಗಲೇ ಆತನ ಡ್ರಗ್​ನ ನಶೆ ಇಳಿದಿತ್ತು. ತನ್ನ ಜೊತೆಗಿದ್ದ ಸಿನಾಗ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಬಗ್ಗೆ ಆ ಯುವಕ ಪೊಲೀಸರಿಗೆ ದೂರು ನೀಡಿದ್ದ. ಇದಾದ ನಂತರ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿತ್ತು.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿತು ಪ್ರೀತಿ; ಇಳಿವಯಸ್ಸಿನಲ್ಲಿ ಮದುವೆಯಾದ ಅಜ್ಜ-ಅಜ್ಜಿಯ ಲವ್​ ಸ್ಟೋರಿ ಇಲ್ಲಿದೆ...ಕಾಲೇಜಿನಲ್ಲಿ ಓದುವಾಗಿನಿಂದಲೂ ಬಹಳ ಬುದ್ಧಿವಂತನಾಗಿದ್ದ ಸಿನಾಗ ಮ್ಯಾಚೆಸ್ಟರ್​ನಲ್ಲಿ ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡುತ್ತಿದ್ದ. ಆತನ ಜೊತೆಗಿದ್ದ ಗೆಳೆಯರಿಗೆ ಆತ ಈ ರೀತಿ ವಿಕೃತ ಸಲಿಂಗ ಕಾಮಿ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂಡೋನೇಷ್ಯಾದ ಉದ್ಯಮಿಯ ಮಗನಾಗಿದ್ದ ಸಿನಾಗ 2006ರಲ್ಲಿ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ಗೆ ವಿದ್ಯಾಭ್ಯಾಸದ ಸಲುವಾಗಿ ಶಿಫ್ಟ್​ ಆಗಿದ್ದ. ಶ್ರೀಮಂತ ಮನೆತನದಿಂದ ಬಂದಿದ್ದರಿಂದ ಆತನ ಎಲ್ಲ ಖರ್ಚುವೆಚ್ಚಗಳಿಗೆ ಆತನ ಅಪ್ಪನೇ ಹಣ ಕಳುಹಿಸುತ್ತಿದ್ದರು.

ಅಪ್ಪ ಕಳಿಸುತ್ತಿದ್ದ ಹಣದಲ್ಲಿ ಮ್ಯಾಂಚೆಸ್ಟರ್​ನಲ್ಲಿ ಫ್ಲ್ಯಾಟ್​ ಖರೀದಿಸಿದ್ದ ಸಿನಾಗ ಅಲ್ಲೇ ಯುವಕರನ್ನು ಕರೆದುಕೊಂಡು ಬಂದು ಅತ್ಯಾಚಾರ ನಡೆಸುತ್ತಿದ್ದ. ಆತನ ಕುಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಆತನ ಮನೆಯವರಿಗೆ ಆಘಾತವಾಗಿದ್ದು, ಆತನಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ ಎಂದು ಹೇಳಿಕೆ ನೀಡಿದ್ದರು. ಸಿನಾಗನಂತಹ ವಿಕೃತ ಕಾಮಿಯನ್ನು ಹೊರಗೆ ಬಿಡುವುದು ಯಾರಿಗೂ ಸುರಕ್ಷಿತವಲ್ಲ ಎಂದು ತೀರ್ಪು ನೀಡಿದ್ದ ನ್ಯಾಯಮೂರ್ತಿಗಳು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading