Nagpur: ಹೋಮಿಯೋಪತಿ ವೈದ್ಯರಿಗೆ 4.5 ಕೋಟಿ ರೂಪಾಯಿ ವಂಚನೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಗ್ಪುರದ ಹೋಮಿಯೋಪತಿ ವೈದ್ಯರೊಬ್ಬರ ಹೆಸರಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ನೆಪದಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ವಂಚಿಸಿರುವ ಮೋಸದ ಘಟನೆ ನಾಗ್ಪುರದಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾ ಇನ್‌ಪ್ಲುಯನ್ಸರ್‌ ಒಬ್ಬ ಕಾಲೇಜು ಮಂಜೂರು ಮಾಡಿಸುತ್ತೇನೆ ಎಂದು ಹೋಮಿಯೋಪತಿ ವೈದ್ಯರಿಗೆ 4.5 ಕೋಟಿ ರೂಪಾಯಿ ವಂಚಿಸಿದ್ದಾರೆ

ಮುಂದೆ ಓದಿ ...
  • Share this:

ನಾಗ್ಪುರದ (Nagpur) ಹೋಮಿಯೋಪತಿ (Homeopathy) ವೈದ್ಯರೊಬ್ಬರ (Doctor) ಹೆಸರಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ನೆಪದಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ (Social Media infulencer) ವಂಚಿಸಿರುವ ಮೋಸದ ಘಟನೆ ನಾಗ್ಪುರದಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾ ಇನ್‌ಪ್ಲುಯನ್ಸರ್‌ ಒಬ್ಬ ವೈದ್ಯಕೀಯ (Nursing Collage)  ಕಾಲೇಜು ಮಂಜೂರು ಮಾಡಿಸುತ್ತೇನೆ ಎಂದು ಹೋಮಿಯೋಪತಿ ವೈದ್ಯರಿಗೆ 4.5 ಕೋಟಿ ರೂಪಾಯಿ (4.5 Crore) ವಂಚಿಸಿದ್ದಾರೆ ಎಂದು ನಾಗ್ಪುರ ಪೊಲೀಸರು ( Police) ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಹಾಯ ಮಾಡುತ್ತೇನೆ ಎನ್ನುವ ನೆಪದಲ್ಲಿ ಕಾಣೆಯಾಯಿತು 4.5 ಕೋಟಿ


ವೈದ್ಯಕೀಯ ಕಾಲೇಜು ತೆರೆಯಲು ಸಹಾಯ ಮಾಡುವ ನೆಪದಲ್ಲಿ ಹೋಮಿಯೋಪತಿ ವೈದ್ಯರೊಬ್ಬರಿಗೆ ಸ್ವಯಂಘೋಷಿತ ಸೋಷಿಯಲ್‌ ಮೀಡಿಯಾ ವಿಶ್ಲೇಷಕ ಮತ್ತು ಸೈಬರ್ ತಜ್ಞ ಅಜಿತ್ ಪಾರ್ಸೆ ಅವರು ರೂ. 4.5 ಕೋಟಿ ವಂಚಿಸಿದ್ದಾರೆ.


ಭೇಂಡೆ ಲೇಔಟ್‌ನ ಮಹರ್ಷಿ ಮಾನಲ್ ಅಪಾರ್ಟ್‌ಮೆಂಟ್ ನಿವಾಸಿ ಅಜಿತ್‌ ಪಾರ್ಸೆ (42) ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಮತ್ತು ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. "ಆರೋಗ್ಯ ಸರಿಯಿಲ್ಲದ ಕಾರಣ ಪಾರ್ಸೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ" ಎಂದು ಪೊಲೀಸರು ಹೇಳಿದರು.

ಹೋಮಿಯೋಪತಿ ವೈದ್ಯರೊಬ್ಬರ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವುದಾಗಿ ಹಾಗೂ ಕೇಂದ್ರೀಯ ತನಿಖಾ ದಳದ ಅಸ್ತಿತ್ವದಲ್ಲಿಲ್ಲದ ಪ್ರಕರಣವೊಂದರಲ್ಲಿ ವೈದ್ಯನನ್ನು ಬಂಧನದಿಂದ ರಕ್ಷಿಸುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿ ರೂ 4.5 ಕೋಟಿ ಹಣ ವಂಚಿಸಿದ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Sushil Mantri: ಖ್ಯಾತ ಉದ್ಯಮಿ ಸುಶೀಲ್ ಮಂತ್ರಿ ಅರೆಸ್ಟ್, ವಂಚನೆ ಕೇಸ್‌ನಲ್ಲಿ ಸಿಐಡಿಯಿಂದ ಬಂಧನ


ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಈ ಬಗ್ಗೆ ತನಿಕೆ ಮಾಡಿದ್ದಾರೆ


ಸೋಷಿಯಲ್‌ ಮೀಡಿಯಾ ಇನ್‌ಪ್ಲುಯನ್ಸರ್‌ ಸಂತ್ರಸ್ತ ವೈದ್ಯ ಸಂಬಂಧಿ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಿದ್ದು, ಹೋಮಿಯೋಪತಿ ಕಾಲೇಜು ಆರಂಭಿಸುವ ಇಚ್ಛೆಯ ಬಗ್ಗೆ ಮಾತನಾಡಿದ್ದಾನೆ" ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.


“ಆರೋಪಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿ ಸಂತ್ರಸ್ತ ವೈದ್ಯನಿಂದ ₹ 4.5 ಕೋಟಿ ಸುಲಿಗೆ ಮಾಡಿದ್ದಾನೆ. ಆ ವೈದ್ಯನು ಬ್ಯಾಂಕ್‌ನಿಂದ ಸಾಲ ಪಡೆದು ಆರೋಪಿಗೆ ನೀಡಿದ್ದಾನೆ.


ಬ್ಯಾಂಕ್ ಸಾಲಕ್ಕೆ ನಾನು ಜಾಮೀನುದಾರ ಎಂದು ಸಂತ್ರಸ್ತ ವೈದ್ಯರಿಂದ ಹಣವನ್ನೂ ಪಡೆದಿದ್ದಾನೆ” ಎಂದು ಅಧಿಕಾರಿ ತಿಳಿಸಿದ್ದಾರೆ.


''ಈ ಸಾಲದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಲಾಗಿದ್ದು, ಆತನ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ ಎಂದು ಸಂತ್ರಸ್ತ ವೈದ್ಯರಿಗೆ ತಿಳಿಸಲಾಗಿದೆ. ಆರೋಪಿಗಳು ಅಸ್ತಿತ್ವದಲ್ಲಿಲ್ಲದ ಪ್ರಕರಣದಲ್ಲಿ ಹೋಮಿಯೋಪತಿ ವೈದ್ಯರನ್ನು ಬಂಧನದಿಂದ ರಕ್ಷಿಸಲು ₹ 1.5 ಕೋಟಿ ಸುಲಿಗೆ ಮಾಡಿ, ಭಾರೀ ಮೋಸದಾಟ ನಡೆಸಿದ್ದಾರೆ” ಎಂದು ಅವರು ಹೇಳಿದರು.


ಇದನ್ನೂ ಓದಿ: Online Fraud: ಪೈಲಟ್ ಎಂದು 30 ಯುವತಿಯರ ವಂಚಿಸಿದ! ಇನ್​ಸ್ಟಾಗ್ರಾಮ್​ನಲ್ಲಿ ಫುಲ್ ಡ್ರಾಮಾ


ಆರೋಪಿಯನ್ನು ಬಂಧಿಸಿಲ್ಲ


ಮಂಗಳವಾರ ಸಂಜೆ ದಾಳಿ ನಡೆಸಿದ ಪೊಲೀಸರು ಆರೋಪಿಯ ನಿವಾಸದಿಂದ ವಿವಿಧ ದಾಖಲೆಗಳು, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಅವರನ್ನು ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸುಮಾರು ಐದು ವರ್ಷಗಳ ಹಿಂದೆ, ಪಾರ್ಸೆ ಎಂಬ ಈ ವ್ಯಕ್ತಿಯು ನಗರದ ಪ್ರಭಾವಿ ವ್ಯಕ್ತಿಗಳ ಮೇಲೆ ಸೋಷಿಯಲ್‌ ಮೀಡಿಯಾ ಮೂಲಕ ಪ್ರಭಾವ ಬೀರಲು ಪ್ರಾರಂಭಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪಾರ್ಸೆಯು, ವೈದ್ಯರು, ಅಧಿಕಾರಿಗಳು ಸೇರಿದಂತೆ ಕನಿಷ್ಠ 8 ರಿಂದ 10 ಗಣ್ಯರನ್ನು ಹನಿ ಟ್ರ್ಯಾಪ್ ಮಾಡಿ ಅವರಿಂದ ಸುಮಾರು ರೂ. 20 ಕೋಟಿ ವಸೂಲಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Published by:Harshith AS
First published: