Amit Shah Exclusive Interview | ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಸಂದರ್ಶನದ ಪ್ರಮುಖಾಂಶಗಳು

ಗುಂಪು ಹಲ್ಲೆಯ ವಿಚಾರವಾಗಿ ಹೇಳುವುದಾಗಿ ಈ ಹಿಂದೆಯೂ ಕೂಡ ಇಂತಹ ಘಟನೆಗಳು ನಡೆದಿವೆ. ನಾವು ಅದನ್ನು ರಾಜಕೀಯಗೊಳಿಸಬೇಕೇ ಅಥವಾ ನಾಗರಿಕ ಸಮಸ್ಯೆಯನ್ನು  ಪರಿಹರಿಸಬೇಕೇ? ಎಂದು ಶಾ ಪ್ರಶ್ನೆ ಮಾಡಿದ್ದಾರೆ.

HR Ramesh | news18-kannada
Updated:October 17, 2019, 10:22 AM IST
  • Share this:
​ನೆಟ್​ವರ್ಕ್​ 18 ಗ್ರೂಪ್ ಪ್ರಧಾನ ಸಂಪಾದಕ ರಾಹುಲ್ ಜೋಶಿ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಕೇಂದ್ರ ಗೃಹ ಸಚಿವರು ಮಾತನಾಡಿದ್ದಾರೆ. ಸಂದರ್ಶನ ಪ್ರಮುಖಾಂಶಗಳು ಇಲ್ಲಿವೆ. 

ಯಶಸ್ಸಿನ ಲೆಕ್ಕಾಚಾರ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ  ವಿಭಿನ್ನವಾಗಿರುತ್ತದೆ. ಆದರೆ, ಬಿಜೆಪಿ ಎಲ್ಲೆಡೆ ಯಶಸ್ವಿಯಾಗಿದೆ.

ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡು ಭಾಗದಷ್ಟು ಬಹುಮತ ಸಾಧಿಸಲಿದೆ.

ಮಹಾರಾಷ್ಟ್ರದಲ್ಲಿ ನಾವು ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮುಖ್ಯಮಂತ್ರಿ ಸ್ಥಾನವನ್ನು ನಾವೇ ಇಟ್ಟುಕೊಂಡಿದ್ದೇವೆ. ಉಪಮುಖ್ಯಮಂತ್ರಿ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದನ್ನು ದೇವೇಂದ್ರ ಫಡ್ನವೀಸ್ ಮತ್ತು ತಂಡದವರು ನಿರ್ಧಾರ ಮಾಡಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ವಿಷಯವಾಗಿ ನಮ್ಮ ಆಡಳಿತ ವರ್ಗದ ತಂಡದಿಂದ 15 ವರ್ಷದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

ಗುಂಪು ಹಲ್ಲೆಯ ವಿಚಾರವಾಗಿ ಹೇಳುವುದಾದರೆ ಈ ಹಿಂದೆಯೂ ಕೂಡ ಇಂತಹ ಘಟನೆಗಳು ನಡೆದಿವೆ. ನಾವು ಅದನ್ನು ರಾಜಕೀಯಗೊಳಿಸಬೇಕೇ ಅಥವಾ ಇಂತಹ ನಾಗರಿಕ ಸಮಸ್ಯೆಯನ್ನು  ಪರಿಹರಿಸಬೇಕೇ? ಎಂದು ಶಾ ಪ್ರಶ್ನೆ ಮಾಡಿದ್ದಾರೆ.

ಹಿಂದಿ ದಿವಸ್​ ದಿನ ಮಾಡಿದ ಭಾಷಣದ ವಿಚಾರವಾಗಿ ಮಾತನಾಡಿದ ಅಮಿತ್ ಶಾ, ನನ್ನ ಭಾಷಣವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲಿಲ್ಲ. ಇಂಗ್ಲಿಷ್​ ಭಾಷೆ ಬಳಸುವಂತೆ ಹಿಂದೆ ಭಾಷೆಯನ್ನು ಬಳಸಿ ಎಂಬುದಷ್ಟೇ ನನ್ನ ಶಿಫಾರಸ್ಸಾಗಿತ್ತು. ನಾನು ಎಲ್ಲ ಸ್ಥಳೀಯ ಭಾಷೆಗಳಿಗೆ ಉತ್ತೇಜನಕ್ಕೆ ಒತ್ತು ನೀಡುತ್ತೇನೆ ಎಂದು ಸಂದರ್ಶನದಲ್ಲಿ ತಿಳಿಸಿದರು.ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಕೊಡುವ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಶಾ ಹೇಳಿದ್ದಾರೆ.
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading