ಅವರೆಲ್ಲಾ ನಿಮ್ಮ ಸೋದರ ಸಂಬಂಧಿಗಳೇ?; ಅಕ್ರಮ ವಲಸಿಗರ ವಿಚಾರವಾಗಿ ರಾಹುಲ್ ಗಾಂಧಿ ಟೀಕಿಸಿದ ಅಮಿತ್ ಶಾ

ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದ ವಿಚಾರವಾಗಿ ಮಾತನಾಡಿದ ಅಮಿತ್ ಶಾ, ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಸ್ಥಗಿತಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು ಎಂದು ಗಂಭೀರವಾಗಿ ಆರೋಪಿಸಿದರು.

HR Ramesh | news18-kannada
Updated:December 2, 2019, 8:54 PM IST
ಅವರೆಲ್ಲಾ ನಿಮ್ಮ ಸೋದರ ಸಂಬಂಧಿಗಳೇ?; ಅಕ್ರಮ ವಲಸಿಗರ ವಿಚಾರವಾಗಿ ರಾಹುಲ್ ಗಾಂಧಿ ಟೀಕಿಸಿದ ಅಮಿತ್ ಶಾ
ಅಮಿತ್ ಶಾ
  • Share this:
ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಇರುವ ಪ್ರತಿಯೊಬ್ಬ ಅಕ್ರಮ ವಲಸಿಗರನ್ನು ಗುರುತಿಸಲು 2024 ಗಡುವು ನಿಗದಿಗೊಳಿಸಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯೊಳಗೆ ಅವರೆಲ್ಲರನ್ನೂ ದೇಶದಿಂದ ಕಳುಹಿಸಲಾಗುವುದು ಎಂದು ಜಾರ್ಖಂಡ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭರವಸೆ ನೀಡಿದರು.

ಜಾರ್ಖಂಡ್​ನ ಚಕ್ರಧಾರಪುರ್ ಮತ್ತು ಬಹರಾಗೋರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಅವರು, ರಾಹುಲ್ ಗಾಂಧಿ ಅವರು ವಲಸಿಗರನ್ನು ಹೊರದಬ್ಬಬೇಡಿ. ಹೊರದೂಡಿದರೆ ಅವರೆಲ್ಲ ಎಲ್ಲಿ ಹೋಗುತ್ತಾರೆ? ಎನನ್ನು ತಿನ್ನುತ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಅವರೆಲ್ಲಾ ಏನಾದರೂ ರಾಹುಲ್ ಗಾಂಧಿ ಸೋದರ ಸಂಬಂಧಿಗಳೆ ಎಂದು ಶಾ ಪ್ರಶ್ನೆ ಮಾಡಿದರು. ಈ ವೇಳೆ ನಾನು ನಿಮಗೆಲ್ಲಾ ಆಶ್ವಾಸನೆ ನೀಡುತ್ತಿದ್ದೇನೆ, 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಕ್ರಮ ವಲಸಿಗರನ್ನು ದೇಶ ಬಿಟ್ಟು ಓಡಿಸಲಾಗುವುದು ಎಂದು ಹೇಳಿದರು.

ಇಂದು ನಾನು ನಿಮಗೆಲ್ಲಾ ಹೇಳುತ್ತಿದ್ದೇನೆ. 2024ರ ಚುನಾವಣೆಗೂ ಮುಂಚೆಗೂ ಎನ್​ಆರ್​ಸಿಯನ್ನು ದೇಶದೆಲ್ಲೆಡೆ ಜಾರಿಗೆ ತರಲಾಗುತ್ತದೆ. ಮತ್ತು ಪ್ರತಿಯೊಬ್ಬ ವಲಸಿಗರನ್ನು ಗುರುತಿಸಿ ಅವರನ್ನು ದೇಶದಿಂದ ಉಚ್ಚಾಟಿಸಲಾಗುವುದು ಎಂದು ಹೇಳಿದರು.

ಭಯೋತ್ಪಾದನೆ, ಮಾವೋವಾದಿಗಳು, ಮತ್ತು ರಾಮ ಮಂದಿರ ನಿರ್ಮಾಣದಂತಹ ರಾಷ್ಟ್ರೀಯ ವಿಚಾರಗಳು ಮತ್ತು ಸ್ಥಳೀಯ ಅಭಿವೃದ್ಧಿ ವಿಷಯಗಳು ಜಾರ್ಖಂಡ್ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆಯಲಿವೆ ಎಂದು ಅಮತ್ ಶಾ ಹೇಳಿದರು.

ಇದನ್ನು ಓದಿ: ಕೆಟ್ಟ ಹಣಕಾಸು ಸಚಿವೆ ಎಂಬ ಪ್ರತಿಪಕ್ಷಗಳ ಟೀಕೆಗೆ ನಿರ್ಮಲಾ ಸೀತಾರಾಮನ್​ ತಿರುಗೇಟು

ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದ ವಿಚಾರವಾಗಿ ಮಾತನಾಡಿದ ಅಮಿತ್ ಶಾ, ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಸ್ಥಗಿತಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು ಎಂದು ಗಂಭೀರವಾಗಿ ಆರೋಪಿಸಿದರು.

 
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading