Home Loan Offer: ಇತಿಹಾಸದಲ್ಲೇ ಮೊದಲು; ಅತೀ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡಲು ಮುಂದಾದ ಬ್ಯಾಂಕ್​​ಗಳು

ಹಬ್ಬದ ಸಮಯದಲ್ಲಿ ಮನೆ ಕಟ್ಟಲು ಆರಂಭಿಸಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಅಂಥವರು ಈ ಬ್ಯಾಂಕ್​ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇದು ಹಬ್ಬದ ಸಮಯ. ಹೀಗಾಗಿ, ಆನ್​ಲೈನ್​ ಮಾರಾಟ ಸೇರಿ ಬಹುತೇಕ ಕಡೆಗಳಲ್ಲಿ ಭರ್ಜರಿ ಡಿಸ್ಕೌಂಟ್​ ನೀಡಲಾಗುತ್ತಿದೆ. ಈಗ ಈ ವಿಚಾರದಲ್ಲಿ ಬ್ಯಾಂಕ್​ಗಳು ಕೂಡ ಹಿಂದೆ ಬಿದ್ದಿಲ್ಲ. ಸಾಕಷ್ಟು ಬ್ಯಾಂಕ್​ಗಳು ಸಿಬಿಲ್​ ಸ್ಕೋರ್​ ಆಧಾರದ ಮೇಲೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲು ಮುಂದಾಗಿವೆ. ಈ ಮೂಲಕ ಹಬ್ಬದ ಸಮಯದಲ್ಲಿ ಮನೆ ಕಟ್ಟಬೇಕು ಎಂದು ಆಲೋಚನೆ ಮಾಡಿದವರಿಗೆ ಈ ಭರ್ಜರಿ ಕೊಡುಗೆ ಸಹಕಾರಿಯಾಗಲಿದೆ.

  ಎಸ್​​ಬಿಐ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತಿದೆ. 30 ಲಕ್ಷ ರೂಪಾಯಿವರೆಗೆ ಶೇ.6.90 ದರದಲ್ಲಿ ಗೃಹಸಾಲ ನೀಡುತ್ತಿದೆ. 0 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಸಾಲಕ್ಕೆ ಶೇ.7 ಬಡ್ಡಿದರ ವಿಧಿಸಲಾಗುತ್ತಿದೆ. “ಮನೆ ಕಟ್ಟಬೇಕು ಎಂದು ಕನಸು ಕಾಣುತ್ತಿರುವವರ ಕನಸನ್ನು ನನಸು ಮಾಡುವುದು ನಮ್ಮ ಉದ್ದೇಶ. ಇಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತಿದ್ದು, ಮನೆಕಟ್ಟಬೇಕು ಎಂದು ಕನಸು ಕಂಡಿದ್ದರೆ ಅದು ನನಸಾಗಲಿದೆ ಎಂದು ಎಸ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  ಕೋಟಕ್​ ಮಹೀಂದ್ರಾ ಬ್ಯಾಂಕ್​ ಕೂಡ ಗೃಹಸಾಲದ ಬಡ್ಡಿಯನ್ನು ಕಡಿಮೆ ಮಾಡಿದ್ದು, ಶೇ.6.9ಕ್ಕೆ ಇಳಿಕೆ ಮಾಡಿದೆ. ಅಲ್ಲದೆ, ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ವಿಶೇಷ ಕೊಡಗೆ ನೀಡುತ್ತಿರುವುದಾಗಿ ಬ್ಯಾಂಕ್​ನವರು ಹೇಳಿದ್ದಾರೆ. ಆ್ಯಕ್ಸಿಸ್​ ಬ್ಯಾಂಕ್​ ಕೂಡ ಶೇ. 6.9 ದರದಲ್ಲಿ ಸಾಲ ನೀಡುತ್ತಿದೆ.

  ಹಬ್ಬದ ಸಮಯದಲ್ಲಿ ಮನೆ ಕಟ್ಟಲು ಆರಂಭಿಸಬೇಕು ಎಂಬುದು ಅನೇಕರ ಕನಸಾಗಿರುತ್ತದೆ. ಅಂಥವರು ಈ ಬ್ಯಾಂಕ್​ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ.
  Published by:Rajesh Duggumane
  First published: