Home Loan: ಇನ್ನೂ ಕೆಲವು ತಿಂಗಳು ಹೋಂ ಲೋನ್ಗೆ ಇಎಂಐ ಕಟ್ಟಬೇಕಾಗಿಲ್ಲ!
ಗೃಹ ಸಾಲ ಪಡೆದ ವ್ಯಕ್ತಿಯ ಆದಾಯದಲ್ಲಿ ಸಂಪೂರ್ಣ ಕುಸಿತ ಕಂಡಿದ್ದರೆ ಅಂಥವರಿಗೆ ಇಎಂಐನಿಂದ ಕೆಲ ತಿಂಗಳ ಕಾಲ ವಿನಾಯಿತಿ ನೀಡಲು ಬ್ಯಾಂಕ್ಗಳು ಚಿಂತನೆ ನಡೆಸಿವೆ. ಈ ಮೂಲಕ ಸಾಮಾನ್ಯರಿಗೆ ದೊಡ್ಡ ರಿಲೀಫ್ ನೀಡುತ್ತಿವೆ.
ಮುಂಬೈ (ಆಗಸ್ಟ್ 17): ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈ ಮಧ್ಯೆ ಆರ್ಥಿಕತೆ ನೆಲಕಚ್ಚಿದೆ. ಹೀಗಾಗಿ ಸರ್ಕಾರ ಇಎಂಐ ಕಟ್ಟುವವರಿಗೆ ವಿನಾಯಿತಿ ನೀಡಿತ್ತು. ವಿಶೇಷ ಎಂದರೆ, ಈಗ ಹೋಂ ಲೋನ್ ಇಎಂಐ ತುಂಬುವವರಿಗೆ ಬ್ಯಾಂಕ್ಗಳು ಸಿಹಿ ಸುದ್ದಿ ನೀಡುತ್ತಿವೆ ಎನ್ನಲಾಗಿದೆ.
ಹೌದು, ಈಗಾಗಲೇ ಹೋಂ ಲೋನ್ ಇಎಂಐಗಳನ್ನು ಕಟ್ಟಲು ಸಮಯಾವಕಾಶ ನೀಡಲಾಗಿದೆ. ಈಗ ಈ ಅವಧಿಯನ್ನು ವಿಸ್ತರಣೆ ಮಾಡಲು ಎಸ್ಬಿಐ ಸೇರಿ ಪ್ರಮುಖ ಬ್ಯಾಂಕ್ಗಳು ನಿರ್ಧರಿಸಿದೆ ಎನ್ನಲಾಗಿದೆ.
ಗೃಹ ಸಾಲ ಪಡೆದ ವ್ಯಕ್ತಿಯ ಆದಾಯದಲ್ಲಿ ಸಂಪೂರ್ಣ ಕುಸಿತ ಕಂಡಿದ್ದರೆ ಅಂಥವರಿಗೆ ಇಎಂಐನಿಂದ ಕೆಲ ತಿಂಗಳ ಕಾಲ ವಿನಾಯಿತಿ ನೀಡಲು ಬ್ಯಾಂಕ್ಗಳು ಚಿಂತನೆ ನಡೆಸಿವೆ. ಈ ಮೂಲಕ ಸಾಮಾನ್ಯರಿಗೆ ದೊಡ್ಡ ರಿಲೀಫ್ ನೀಡುತ್ತಿವೆ.
ಮುಂದಿನ ತಿಂಗಳ ಆರಂಭದಲ್ಲಿ ಈ ಕುರಿಯಂತೆ ಕೆವಿ ಕಾಮತ್ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಲಿದೆ ಎನ್ನಲಾಗಿದೆ. ಈ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಕೊರೋನಾದಿಂದ ಸಾಕಷ್ಟು ಜನರು ಭಾರೀ ನಷ್ಟ ಅನುಭವಿಸಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡಿದ್ದು, ಸಾಲ ಹಿಂದಿರುಗಿಸಲು ಪರದಾಡುವ ಸ್ಥಿತಿ ಬಂದೊದಗಿದೆ. ಹೀಗಾಗಿ, ಬ್ಯಾಂಕ್ಗಳು ಇದಕ್ಕೆ ಅವಕಾಶ ನೀಡಿದರೆ ಸಾಲ ಹಿಂದಿರುಗಿಸುವವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗುತ್ತದೆ.
ಕೊರೋನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ತೀವ್ರಗೊಂಡಾಗ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 26 ಲಕ್ಷ ದಾಟಿದೆ. ಅದೂ ಅಲ್ಲದೆ ಮೂರನೇ ಹಂತದ ಅನ್ಲಾಕ್ ಕೂಡ ಜಾರಿ ಆಗುತ್ತಿದ್ದಂತೆ ಪ್ರತಿದಿನವೂ 60 ಸಾವಿರಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುತ್ತಿದ್ದು ಅದೇ ಟ್ರೆಂಡ್ ಮುಂದುವರೆದಿದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ