Netaji Subhas Chandra Bose ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಕಲ್ಲಿನಿಂದ ನಿರ್ಮಿಸಲಾಗುವ ನೇತಾಜಿ ಭವ್ಯ ಪ್ರತಿಮೆಯ ಕಾಮಗಾರಿ ಪೂರ್ಣಗೊಳ್ಳುವವರೆಗೂ ಅದೇ ಸ್ಥಳದಲ್ಲಿ ಹೊಲೊಗ್ರಾಮ್ ಪ್ರತಿಮೆ ಇರುವುದು ಎಂದು ಮೋದಿ ತಿಳಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ನೇತಾಜಿ ಸುಭಾಷ್ ಚಂದ್ರಬೋಸ್ (Netaji Subhas Chandra Bose) ಅವರ 125 ನೇ ಜನ್ಮದಿನದ ಹಿನ್ನೆಲೆ ಅವರ ಸ್ಮರಣಾರ್ಥ ಇಂಡಿಯಾ ಗೇಟ್‌ (India Gate)ನಲ್ಲಿ ಹೊಲೊಗ್ರಾಮ್ (Hologram)‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣ ಮಾಡಿದರು. ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) 2019, 2020, 2021 ಮತ್ತು 2022 ರ ಸುಭಾಸ್ ಚಂದ್ರಬೋಸ್ ಆಪ್ತ್ ಪ್ರಬಂಧನ್ ಪುರಸ್ಕಾರಗಳನ್ನು7 ಮಂದಿಗೆ ಪ್ರದಾನ ಮಾಡಿದರು. ಇದೇ ವೇಳೆ ಮಾತನಾಡಿದ ನರೇಂದ್ರ ಮೋದಿ ಇಡೀ ದೇಶವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್​ನಲ್ಲಿ ಸ್ಥಾಪಿಸಲಾಗುತ್ತೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಇದು ಅದರ ಸಂಕೇತವಾಗಿದೆ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೂ ಅವರ ಹೊಲೊಗ್ರಾಮ್ ಪ್ರತಿಮೆ ಅದೇ ಸ್ಥಳದಲ್ಲಿ ಇರುತ್ತೆ ಎಂದು ಹೇಳಿದ್ರು.

ರಾಷ್ಟ್ರದ ಜನರಿಗೆ ಶುಭಕೋರಿದ ಮೋದಿ

ಇದೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನಾಚರಣೆ ಅಂಗವಾಗಿ ಆಚರಿಸುವ ಪರಾಕ್ರಮ್ ದಿನದ ಶುಭಾಶಯಗಳನ್ನು ಕೋರಿದರು. ನಾವು ಸುಧಾರಣೆಗೆ ಒತ್ತು ನೀಡುವುದರ ಜೊತೆಗೆ ಪರಿಹಾರ, ರಕ್ಷಣೆ ಮತ್ತು ಪುನರ್ವಸತಿಗೆ ಒತ್ತು ನೀಡಿದ್ದೇವೆ. ನಾವು ಎನ್‌ಡಿಆರ್‌ಎಫ್‌ ಅನ್ನು ಆಧುನೀಕರಿಸಿದ್ದೇವೆ. ಅದನ್ನು ದೇಶಾದ್ಯಂತ ವಿಸ್ತರಿಸಿದ್ದೇವೆ. ಯೋಜನೆ ಮತ್ತು ನಿರ್ವಹಣೆಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಇತರ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಹೊಲೊಗ್ರಾಮ್​ ಪ್ರತಿಮೆ ಹೇಗಿದೆ?

ಈ ಹೊಲೊಗ್ರಾಮ್ ಪ್ರತಿಮೆಗೆ 4ಕೆ ಪ್ರೊಜೆಕ್ಟರ್ ಬಳಸಿ 30,000ದಷ್ಟು ಬೆಳಕಿನ ತೀಕ್ಷಣತೆಯ ಪ್ರಮಾಣ ಇದ್ದು, ಶೇ.90ರಷ್ಟು ಪಾರದರ್ಶಕವಾಗಿರುವಂತಹ ಹಾಲೊಗ್ರಾಫಿಕ್​ ಸ್ಕ್ರೀನ್ ಮೂಲಕ ಈ ಪ್ರತಿಮೆ ಮೂಡಿಸಲಾಗುತ್ತೆ. ನೋಡುಗರಿಗೆ ಈ ಪರದೆ ಕಾಣದಂತೆ ಅಳವಡಿಸಲಾಗಿರುತ್ತದೆ. 3ಡಿ ಚಿತ್ರವು ಹಾಲೋಗ್ರಾಮ್ನ ಪ್ರತಿಮೆ ಮೂಡುವಂತೆ ವಿನ್ಯಾಸಗೊಳಿಸಲಾಗುತ್ತದೆ. ಈ ಪ್ರತಿಮೆಯ ಎತ್ತರವು 28 ಅಡಿ, ಅಗಲ ಆರು ಅಡಿ ಆಗಿರುತ್ತದೆ.

ಇದನ್ನೂ ಓದಿ: ದೇಶದ ಜಿಲ್ಲಾಧಿಕಾರಿಗಳ ಜೊತೆ PM Modi ವಿಡಿಯೋ ಸಂವಾದ...! ಯಾದಗಿರಿ ಡಿಸಿ ಜೊತೆ ಕೂಡ ಚರ್ಚೆ

7 ಮಂದಿಗೆ ಪ್ರಶಸ್ತಿ ಪ್ರದಾನ

ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಭಾರತದಲ್ಲಿನ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರ ಸರ್ಕಾರವು ವಾರ್ಷಿಕ ಸುಭಾಸ್ ಚಂದ್ರ ಬೋಸ್ ಆಪ್ತ್ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಜನವರಿ 23 ರಂದು ಘೋಷಿಸಲಾಗುತ್ತದೆ. ಪ್ರಶಸ್ತಿಯು ₹ 51 ಲಕ್ಷ ನಗದು ಬಹುಮಾನ ಮತ್ತು ಸಂಸ್ಥೆಯಾಗಿದ್ದರೆ ಪ್ರಮಾಣಪತ್ರ ಮತ್ತು ₹ 5 ಲಕ್ಷ ಮತ್ತು ವ್ಯಕ್ತಿಯ ಪ್ರಮಾಣಪತ್ರವನ್ನು  ಒಳಗೊಂಡಿರುತ್ತದೆ.

ಸುಭಾಸ್ ಚಂದ್ರ ಬೋಸ್ ಅವರ ಗೌರವಾರ್ಥವಾಗಿ, ಇಂದು ಚಲನಚಿತ್ರ ವಿಭಾಗವು  ಅವರ ಜೀವನ, ಅದಮ್ಯ ಮನೋಭಾವ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಯ ಕುರಿತು ಎರಡು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವುದೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಇಂದು ಅವರ ಬಯೋಪಿಕ್‌ಗಳು, ಫಿಲ್ಮ್ಸ್ ಗಳು ದಿನದ 24 ಗಂಟೆಗಳ ಕಾಲ ಸ್ಟ್ರೀಮ್ ಆಗಲಿವೆ.

ಇದನ್ನೂ ಓದಿ:   PM Narendra Modi: ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ

ಇವರ ಪ್ರಮುಖ ಸಾಕ್ಷ್ಯಚಿತ್ರಗಳೆಂದರೆ ದಿ ಫ್ಲೇಮ್ ಬರ್ನ್ಸ್ ಬ್ರೈಟ್ (1973/ಆಶಿಸ್ ಮುಖರ್ಜಿ) ಮತ್ತು ನೇತಾಜಿ (1973/ಅರುಣ್ ಚೌಧುರಿ) ಇದು ಮಹಾನ್ ನಾಯಕನ ಜೀವನ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ವೀರೋಚಿತ ಮತ್ತು ಪಟ್ಟುಬಿಡದ ಹೋರಾಟವನ್ನು ಎತ್ತಿ ತೋರಿಸುತ್ತದೆ.  ಚಲನಚಿತ್ರಗಳಲ್ಲಿ ನೇತಾಜಿಯವರ ನಿಜವಾದ ಭಾಷಣಗಳನ್ನು ಬಳಸುತ್ತದೆ, ಅಲ್ಲದೆ ಅವರ ದ್ವನಿಯನ್ನು ಸಹ ಈ ಚಿತ್ರಗಳಲ್ಲಿ ಸಿಂಕ್ ಮಾಡಲಾಗಿದೆ.
Published by:Pavana HS
First published: