Holi 2019: ಹೋಳಿ ಸಂಭ್ರಮದಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ..!

ನಿನ್ನೆ ಆ ಕಂದಮ್ಮ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ದಿನಗೂಲಿ ಮಾಡಿ ಹೊಟ್ಟೆ ಹೊರೆಯುವ ಪೋಷಕರು ತಮ್ಮ ಕಂದನನ್ನು ಎಲ್ಲಾ ಕಡೆ ಹುಡುಕಿದ್ದರು. ಆದರೆ ಎಲ್ಲೂ ಸಹ ಮಗು ಪತ್ತೆಯಾಗಿರಲಿಲ್ಲ. ನಂತರ ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ಅಲ್ವಾಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

Latha CG | news18
Updated:March 22, 2019, 2:13 PM IST
Holi 2019: ಹೋಳಿ ಸಂಭ್ರಮದಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ..!
ಸಾಂದರ್ಭಿಕ ಚಿತ್ರ
Latha CG | news18
Updated: March 22, 2019, 2:13 PM IST
ತೆಲಂಗಾಣ,(ಮಾ.22): ನಿನ್ನೆ ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಎಲ್ಲರೂ ಸಹ ರಂಗಿನಾಟದಲ್ಲಿ ಮಿಂದೆದ್ದಿದ್ದರು. ಆದರೆ ಆ 6 ವರ್ಷದ ಬಾಲಕಿಗೆ ಹೋಳಿ ದಿನವೇ ಕರಾಳ ದಿನವಾಗಿತ್ತು. ಏಕೆಂದರೆ ಹೋಳಿಯ ಸಂಭ್ರಮದಲ್ಲಿ ಕುಣಿದಾಡುತ್ತಿದ್ದ ದಿನಗೂಲಿ ಕಾರ್ಮಿಕನ ಮಗಳು ಮೇಲೆ ಅತ್ಯಾಚಾರಕ್ಕೊಳಗಾಗಿ ಹೆಣವಾಗಿದ್ದಳು.

ಯುವಕನೊಬ್ಬ ಕುಡಿದ ಮತ್ತಿನಲ್ಲಿ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಇಂತಹ ಭಯಾನಕ ಕೃತ್ಯ ನಡೆದಿರುವುದು ತೆಲಂಗಾಣ ರಾಜ್ಯದ  ಟರ್ಕಪಲ್ಲಿ ಹಳ್ಳಿಯಲ್ಲಿ. ಆ ಮಗುವಿನ ದೇಹ ಪೊದೆಯೊಳಗೆ ಪತ್ತೆಯಾಗಿತ್ತು. ಆ ಮೃತ ದೇಹ ನೋಡಿದ ಪೊಲೀಸರಿಗೆ ಇದು ಅತ್ಯಾಚಾರ ಮಾಡಿ ಕೊಲೆಗೈದಿರುವುದು ಎಂದು ತಿಳಿಯಲು ಹೆಚ್ಚಿನ ಸಮಯ ಬೇಕಿರಲಿಲ್ಲ.

ರಸ್ತೆ ಬದಿ ಎಸೆಯಲಾಗಿದ್ದ ನವಜಾತ ಶಿಶುವಿನ ಜಾಡು ಹಿಡಿದು ಹೊರಟ ಪೊಲೀಸರು ಬಂದು ನಿಂತಿದ್ದು ಸಿಪಿಐ(ಎಂ) ಕಚೇರಿ ಮುಂದೆ!

ನಿನ್ನೆ ಆ ಕಂದಮ್ಮ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ದಿನಗೂಲಿ ಮಾಡಿ ಹೊಟ್ಟೆ ಹೊರೆಯುವ ಪೋಷಕರು ತಮ್ಮ ಕಂದನನ್ನು ಎಲ್ಲಾ ಕಡೆ ಹುಡುಕಿದ್ದರು. ಆದರೆ ಎಲ್ಲೂ ಸಹ ಮಗು ಪತ್ತೆಯಾಗಿರಲಿಲ್ಲ. ನಂತರ ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ಅಲ್ವಾಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ಮಗುವಿಗಾಗಿ ಹುಡುಕಾಟ ಪ್ರಾರಂಭಿಸಿದ್ದರು. ದುರಾದೃಷ್ಟವೆಂಬಂತೆ ಆ ಮಗು ಪೊದೆಯೊಂದರಲ್ಲಿ ಹೆಣವಾಗಿ ಪತ್ತೆಯಾಗಿತ್ತು. ತಕ್ಷಣ ಪೊಲೀಸರು ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಇಷ್ಟರಲ್ಲಾಗಲೇ ಆ ಮಗು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದೆ ಎಂಬುದು ಪೊಲೀಸರಿಗೆ ಖಾತ್ರಿಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಅದು ದೃಢಪಟ್ಟಿತ್ತು.

ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಬಿಹಾರದ ಪಶ್ಚಿಮ ಚಂಪರನ್​ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Loading...

First published:March 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626