ಎಣ್ಣೆ ಏಟಲ್ಲಿ ಏನೇನೋ ಮಾಡ್ಬೇಡಿ, ನಿಮ್ಗೂ ಈ ಪೂಜಾರಿಯ ಕಥೆಯೇ ಆಗ್ಬಹುದು..!

news18
Updated:August 6, 2018, 11:52 AM IST
ಎಣ್ಣೆ ಏಟಲ್ಲಿ ಏನೇನೋ ಮಾಡ್ಬೇಡಿ, ನಿಮ್ಗೂ ಈ ಪೂಜಾರಿಯ ಕಥೆಯೇ ಆಗ್ಬಹುದು..!
news18
Updated: August 6, 2018, 11:52 AM IST
ನ್ಯೂಸ್ 18 ಕನ್ನಡ

ತಿರುವನಂತಪುರಂ (ಆ.6): ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಪೊಲೀಸ್ ಕಂಟ್ರೋಲ್ ರೂಮ್ಗೆ ಹುಸಿ ಕರೆ ಮಾಡಿ, ಆತಂಕದ ವಾತಾವರಣ ಸೃಷ್ಟಿಸಿದ ಇಲ್ಲಿನ ತ್ರಿಸೂರಿನ ಪೂಜಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ತ್ರಿಸೂರಿನ ಪೂಜಾರಿ ಈ ಕೆಲಸವನ್ನು ಮಾಡಿದ್ದು, ಪೊಲೀಸ್​ ವಿಚಾರಣೆ ವೇಳೆ ಮತ್ತಿನಲ್ಲಿ ಏನು ಮಾಡಿದ್ದೇನೆ ಎಂಬುದೇ ಆಸಾಮಿಗೆ ಗೊತ್ತಿಲ್ಲ.

ಜಯರಾಮ್ ಎಂಬ ವ್ಯಕ್ತಿಯೇ ಹುಸಿ ಕರೆ ಮಾಡಿ, ಪೊಲೀಸರ ಕೈಗೆ ಸಿಕ್ಕ ಭೂಪ. ಪೊಲೀಸರು ಯಾಕೆ ಬಂಧಿಸಿದ್ದಾರೆ ಎಂಬುದೇ ಪಾಪ ಈತನಿಗೆ ಗೊತ್ತಿರಲಿಲ್ಲ. ಯಾಕಂದ್ರೆ ಒಂದಿಷ್ಟು ಪೆಗ್​ ಆದ ಮೇಲೆ ನಂತರ ಒಳಗೆ ಹೋಗಿದ್ದೆಷ್ಟು, ಹೊರಗೆ ಮಾಡಿದ್ದೆಷ್ಟು ಎಂಬ ಲೆಕ್ಕಾಚಾರ ಜಯರಾಮ್​ಗೆ ತಿಳಿದೇ ಇಲ್ಲ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಸೇಂಟ್ ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು. ಬೆಳಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಜಯರಾಮ್ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕರೆಯ ಮಾಹಿತಿ ಬೇಧಿಸಿ, ಜಯರಾಮ್ನನ್ನು ಬಂಧಿಸಿದ್ದಾರೆ.

ತ್ರಿಸ್ಸೂರು ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಜಯರಾಮ್ ಕುಡಿತದ ನಶೆಯಲ್ಲಿದ್ದ. ಮತ್ತು ಯಾವುದನ್ನು ನೆನಪಿಸಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಕಾಲ ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿಗಳು, ಭಾನುವಾರ ತಿರುವಂತನಪುರಂಗೆ ಆಗಮಿಸಿದ್ದರು. ಸೋಮವಾರ ಕೇರಳ ವಿಧಾನಸಭೆಯ ವಜ್ರಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

ಒಟ್ಟಿನಲ್ಲಿ ಕುಡಿದ ಮತ್ತಿನಲ್ಲಿ ಮಾಡಿದ ಯಡವಟ್ಟಿನಿಂದ ವ್ಯಕ್ತಿ ಜೈಲು ಪಾಲಾಗಿದ್ದಾನೆ. ರಾಷ್ಟ್ರಪತಿಯವರ ಕಾರ್ಯಕ್ರಮಕ್ಕೆ ಬಾಂಬ್​ ಇಟ್ಟಿರುವುದಾಗಿ ಹೇಳಿದ್ದರಿಂದ ಕುಡಿದು ಮಾಡಿದ್ದಾನೆ ಹೋಗಲಿ ಬಿಡಿ ಎಂದು ಬಿಡಲೂ ಸಾಧ್ಯವಿಲ್ಲ. ಪ್ರೋಟೊಕಾಲ್​ ಪ್ರಕಾರ ಹಲವು ಸುತ್ತಿನ ವಿಚಾರಣೆಗೆ ಜಯರಾಮ್​ನನ್ನು ಒಳಪಡಿಸಿದ ನಂತರಷ್ಟೇ ಬಿಡುಗಡೆಯ ಭಾಗ್ಯ ಸಿಗಲಿದೆ. ಕುಡಿದ ಮತ್ತಿನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದಕ್ಕೆ ಜಯರಾಮ್​ ಮಾಡಿದ ಕೆಲಸ ಉತ್ತಮ ಉದಾಹರಣೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ