ಲಕ್ನೋನಲ್ಲಿ ಹಿಂಸಾಚಾರ ನಡೆಸಿದವರ ಹೆಸರು, ವಿಳಾಸ ಇರುವ ಹೋರ್ಡಿಂಗ್ಸ್ ಪ್ರದರ್ಶನ

ಆಡಳಿತದ ಅಂದಾಜು ಪ್ರಕಾರ ಲಕ್ನೋ ಹಿಂಸಾಚಾರಗಳಲ್ಲಿ 1.55 ಕೋಟಿ ನಷ್ಟವಾಗಿದೆ. ಠಾಕೂರ್​ಗಂಜ್​ ಪ್ರದೇಶದ 10 ಜನರಿಗೆ ಮತ್ತು ಕೈಸರ್ಬಾಂಗ್ ಪ್ರದೇಶದ ಆರು ಜನರಿಗೆ ಈವರೆಗೆ 69 ಲಕ್ಷ ರೂ.ಗಳಷ್ಟು ನಷ್ಟ ಭರಿಸುವಂತೆ ಸೂಚಿಸಿ ನೋಟೀಸ್ ಜಾರಿ ಮಾಡಲಾಗಿದೆ.

ಲಕ್ನೋ ಹಿಂಸಾಚಾರದಲ್ಲಿ ಭಾಗಿಯಾದವರ ಚಿತ್ರಗಳಿರುವ ಹೋರ್ಡಿಂಗ್ಸ್

ಲಕ್ನೋ ಹಿಂಸಾಚಾರದಲ್ಲಿ ಭಾಗಿಯಾದವರ ಚಿತ್ರಗಳಿರುವ ಹೋರ್ಡಿಂಗ್ಸ್

 • News18
 • Last Updated :
 • Share this:
  ಲಕ್ನೋ: ಸಿಎಎ ವಿರುದ್ದ ಹೋರಾಟದಲ್ಲಿ ಭಾಗವಹಿಸಿದ 53 ಜನರ ಹೆಸರು, ಫೋಟೋ ಮತ್ತು ವಿಳಾಸಗಳಿರುವ ಹೋರ್ಡಿಂಗ್​ಗಳನ್ನು ನಗರದ ವಿವಿಧೆಡೆ ಹಾಕಲಾಗಿದೆ. ಈ ಹೋರ್ಡಿಂಗ್ಸ್​ನಲ್ಲಿ ಶಿಯಾ ಧರ್ಮಗುರು ಮೌಲನಾ ಸೈಫ್ ಅಬ್ಬಸ್ ಮತ್ತು ನಿವೃತ್ತ ಐಪಿಎಸ್ ಆಫೀಸರ್ ಎಸ್.ಆರ್. ದಾರಾಪುರಿ ಹಾಗೂ ಕಾಂಗ್ರೆಸ್ ನಾಯಕ ಸದಾಫ್ ಜಾಫಾರ್ ಅವರ ವಿವರವೂ ಇದೆ. ಇವರು ಡಿಸೆಂಬರ್ 19 ರಂದು ನಡೆದ ಲಕ್ನೋ ಗಲಭೆಗೆ ಕಾರಣರಾಗಿದ್ದರೆಂಬ ಆರೋಪವಿದೆ.

  ವರದಿಗಾರೊಂದಿಗೆ ಮಾತನಾಡಿದ, ಲಕ್ನೋ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್, “ನಗರದಾದ್ಯಂತ ಗಲಭೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಜಿಲ್ಲಾಡಳಿತ ಗುರುತಿಸಿದ್ದು ಅವರ ಫೋಟೋ ಮತ್ತು ವಿಳಾಸ ಸಹಿತ ನಗರದ ಭಾಗಗಳಲ್ಲಿ ಹೋರ್ಡಿಂಗ್ಸ್​ಗಳನ್ನು ಹಾಕಲಾಗಿದೆ. ಸುಮಾರು 100ಕ್ಕೂ ಹೆಚ್ಚು ಹೋರ್ಡಿಂಗ್ಸ್​ಗಳನ್ನು ವಿವಿಧ ಭಾಗಗಳಲ್ಲಿ ಹಾಕಲಾಗುವುದು. ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡಿರುವರಿಂದ ನಷ್ಟಭರಿಸಲು ನೋಟೀಸ್ ಜಾರಿ ಮಾಡಲಾಗುತ್ತಿದೆ. ಅವರು ನಷ್ಟಭರಿಸದೇ ಹೋದಲ್ಲಿ ಅವರ ಆಸ್ತಿ ಜಫ್ತಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

  ಇದನ್ನೂ ಓದಿ: YES ಬ್ಯಾಂಕ್ ಬಿಕ್ಕಟ್ಟು: ಭಾರತೀಯ ಷೇರುಪೇಟೆಗೆ ಭಾರೀ ಹೊಡೆತ; ಪ್ರಪಾತಕ್ಕೆ ಕುಸಿದ ಸೆನ್ಸೆಕ್ಸ್, ನಿಫ್ಟಿ

  ಆಡಳಿತದ ಅಂದಾಜು ಪ್ರಕಾರ ಲಕ್ನೋ ಹಿಂಸಾಚಾರಗಳಲ್ಲಿ 1.55 ಕೋಟಿ ನಷ್ಟವಾಗಿದೆ. ಠಾಕೂರ್​ಗಂಜ್​ ಪ್ರದೇಶದ 10 ಜನರಿಗೆ ಮತ್ತು ಕೈಸರ್ಬಾಂಗ್ ಪ್ರದೇಶದ ಆರು ಜನರಿಗೆ ಈವರೆಗೆ 69 ಲಕ್ಷ ರೂ.ಗಳಷ್ಟು ನಷ್ಟ ಭರಿಸುವಂತೆ ಸೂಚಿಸಿ ನೋಟೀಸ್ ಜಾರಿ ಮಾಡಲಾಗಿದೆ. ಶಿಯ ಧರ್ಮಗುರು ಮೌಲಾನಾ ಸೈಫ್ ಅಬ್ಬಾಸ್ ಮತ್ತು ಶಿಯಾ ಧರ್ಮಗುರು ಮೌಲಾನಾ ಕಲ್ಬೆ ಸಾದಿಕ್ ಅವರ ಪುತ್ರ ಸಿಬ್ಟೆನ್ ನೂರಿ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ.

  ಹಿಂಸಾಚಾರಗಳಲ್ಲಿ ಭಾಗಿಯಾಗಿರುವವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ.

  ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತಂದ ಬಳಿಕ ಉತ್ತರ ಪ್ರದೇಶ ರಾಜ್ಯದ ಹಲವೆಡೆ ತೀವ್ರತರವಾದ ಹಿಂಸಾಚಾರಗಳು ನಡೆದಿದ್ದವು. ಸಿಎಎ ಸಮಾಜವನ್ನು ವಿಭಜಿಸುವ ಮತ್ತು ಮುಸ್ಲಿಂ ವಿರೋಧಿ ಎಂಬುದು ವಿರೋಧಿಗಳ ಆಕ್ರೋಶ.

  ಯುಪಿ ಸರ್ಕಾರದ ಕ್ರಮದಂತೆ ಗುಜರಾತ್​ನಲ್ಲೂ ಸಹ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಜನರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಅಲ್ಲಿನ ಪೊಲೀಸರಿಗೆ ಸೂಚನೆ ನೀಡಲಾಗಿದೆ.

  - ಸಂಧ್ಯಾ ಎಂ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: