ಪುಲ್ವಾಮ ಕಾರ್ಯಾಚರಣೆ; ಹಿಜ್ಬುಲ್ ಉಗ್ರ ಸಂಘಟನೆಯ ನಾಯಕ ರಿಯಾಜ್​ ನಾಯ್ಕೋನನ್ನು ಸುತ್ತುವರೆದ ಸೇನೆ

ಬೀಗ್​ಪುರ ಗ್ರಾಮದೊಳಗೆ ಇಂದು ಬೆಳಗ್ಗೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೊಬೈಲ್ ನೆಟ್​ವರ್ಕ್​ಗಳನ್ನು ಸ್ಥಗಿತಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರೀನಗರ (ಮೇ 6): ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಎನ್​ಕೌಂಟರ್ ಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿನ ಆವಂತಿಪುರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭಾರತೀಯ ಸೇನಾಪಡೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಇನ್ನೊಂದೆಡೆ, ಪುಲ್ವಾಮದ ಬೀಗ್​ಪುರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ರಿಯಾಜ್​ ನಾಯ್ಕೋನನ್ನು ಸೇನಾಪಡೆ ಸುತ್ತುವರೆದಿದೆ. ನಿನ್ನೆ ರಾತ್ರಿಯಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಉಗ್ರರು ಮತ್ತು ಸೇನಾಪಡೆಯ ಸಿಬ್ಬಂದಿ ನಡೆಯುವ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಮತ್ತು ಸೇನಾಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಹಿಜ್ಬುಲ್ ಸಂಘಟನೆಯ ನಾಯಕ ರಿಯಾಜ್ ನಾಯ್ಕೋ ತನ್ನ ಊರಾದ ಬೀಗ್​ಪುರದಲ್ಲಿ ಅವಿತುಕೊಂಡಿದ್ದಾನೆ. ಆತನಿರುವ ಸ್ಥಳವನ್ನು ಪತ್ತೆಹಚ್ಚಿರುವ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಗ್ರಾಮವನ್ನು ಸುತ್ತುವರೆದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಪುಲ್ವಾಮ ಬಳಿ ಎನ್​ಕೌಂಟರ್; ಭಾರತೀಯ ಸೇನೆಯಿಂದ ಓರ್ವ ಉಗ್ರನ ಹತ್ಯೆ

ಈ ಕಾರ್ಯಾಚರಣೆಯಲ್ಲಿ ಸಿಆರ್​ಪಿಎಫ್​ ಯೋಧರು, ರಾಷ್ಟ್ರೀಯ ರೈಫಲ್ಸ್​, ಎಸ್​ಓಜಿ ಮತ್ತು ಸ್ಥಳೀಯ ಪೊಲೀಸರು ಭಾಗಿಯಾಗಿದ್ದಾರೆ. ಬೀಗ್​ಪುರ ಗ್ರಾಮದೊಳಗೆ ಬರುವ ಮತ್ತು ಹೋಗುವ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿದೆ. ಹಾಗೇ ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದ ಸುತ್ತಮುತ್ತಲೂ ಮೊಬೈಲ್ ನೆಟ್​ವರ್ಕ್​ಗಳನ್ನು ಇಂದು ಬೆಳಗ್ಗೆಯಿಂದ ಸ್ಥಗಿತಗೊಳಿಸಲಾಗಿದೆ.ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಆಗಿರುವ ರಿಯಾಜ್ ನಾಯ್ಕೋನನ್ನು ಹುಡುಕಿಕೊಟ್ಟವರಿಗೆ 12 ಲಕ್ಷ ರೂ. ನೀಡುವುದಾಗಿಯೂ ಘೋಷಿಸಲಾಗಿತ್ತು. ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಈ ಉಗ್ರ ಇದೀಗ ಪೊಲೀಸರಿಂದ ಮತ್ತು ಭದ್ರತಾ ಪಡೆಯಿಂದ ಸುತ್ತುವರೆಯಲ್ಪಟ್ಟಿದ್ದಾನೆ. ಉಗ್ರ ಸಂಘಟನೆ ಸೇರುವ ಮೊದಲು ರಿಯಾಜ್ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.
First published: