ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳು, ಯಾವುದೇ ದಾಳಿ ಮಾಡುವುದಿಲ್ಲ: ಹಿಜ್ಬುಲ್ ಆಶ್ವಾಸನೆ


Updated:June 27, 2018, 12:06 PM IST
ಅಮರನಾಥ ಯಾತ್ರಿಕರು ನಮ್ಮ ಅತಿಥಿಗಳು, ಯಾವುದೇ ದಾಳಿ ಮಾಡುವುದಿಲ್ಲ: ಹಿಜ್ಬುಲ್ ಆಶ್ವಾಸನೆ
  • Share this:
ನ್ಯೂಸ್ 18 ಕನ್ನಡ

ಜಮ್ಮು ಕಾಶ್ಮೀರ(ಜೂ.27): ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಯಾವಿಉದೇ ಹಾನಿಯುಂಟು ಮಾಡುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಜಮ್ಮು ಕಾಶ್ಮೀರದ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಸುರಕ್ಷತೆಯ ಆಶ್ವಾಸನೆ ನೀಡಿದೆ. ಹಿಜ್ಬುಲ್​ ಸಂಘಟನೆಯ ಪರವಾಗಿ ಬಿಡುಗಡೆಗೊಳಿಸಿರುವ ಆಡಿಯೋ ಒಂದರಲ್ಲಿ ಅಮರನಾಥ ಯಾತ್ರೆ ಕೈಗೊಳ್ಳುವ ಶ್ರದ್ಧಾಳುಗಳ ಮೇಲೆ ದಾಳಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಹೇಳಿದ್ದಾರೆ. ಅಲ್ಲದೇ ರಾಜ್ಯದ ಸೇನೆಯ 'ಆಪರೇಷನ್ ಆಲೌಟ್' ಕುರಿತಾಗಿ ಮಾತನಾಡುತ್ತಾ ಒಂದು ವೇಳೆ ಸೇನೆಯ ಆಪರೇಷನ್ ಯಶಸ್ವಿಯಾದರೆ ಗಡಿ ಪ್ರದೇಶದಲ್ಲಿ NSG ಕಮಾಂಡೋಗಳನ್ನು ನಿಯೋಜಿಸುವ ಅಗತ್ಯವೇನು? ಎಂದೂ ಪ್ರಶ್ನಿಸಲಾಗಿದೆ.

ಈ ಆಡಿಯೋ ಟೇಪ್​ನಲ್ಲಿ ಕೇಳಿ ಬರುವ ಧ್ವನಿ ಹಿಜ್ಬುಲ್ ಕಮಾಂಡರ್ ರಿಯಾಜ್ ನಾಯಿಕೂ ಅವರದ್ದಾಗಿದೆ ಎನ್ನಲಾಗುತ್ತಿದೆ. ಹೀಗಿದ್ದರೂ ಇದೆಷ್ಟು ಸತ್ಯ ಎಂಬುದು ತಿಳಿದು ಬಂದಿಲ್ಲ.

ನಾಯಿಕೂ ಈ ಆಡಿಯೋದಲ್ಲಿ "ಅಮರನಾಥ ಯಾತ್ರೆಗೆ ಬರುವ ಶ್ರದ್ಧಾಳುಗಳು ತಮ್ಮ ಪರಂಪರೆ ಪೂರ್ಣಗೊಳಿಸಲು ಬರುತ್ತಾರೆ. ಅವರು ನಮ್ಮ ಅತಿಥಿಗಳು. ಹೀಗಾಗಿ ಯಾತ್ರೆ ಕೈಗೊಳ್ಳುವ ಭಕ್ತರು ಯಾವುದೇ ಭಯ ಪಡಬೇಕಾಗಿಲ್ಲ. ನಾವು ಅವರನ್ನು ಗುರಿಯಾಗಿಸುವುದಿಲ್ಲ"


ಪಾಕಿಸ್ತಾನದಿಂದ ಸತತವಾಗಿ ನಡೆಯುತ್ತಿರುವ ಯುದ್ಧ ವಿರಾಮ​ ಉಲ್ಲಂಘನೆ ಹಾಗೂ ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಘಟನೆಗಳನ್ನು ನೋಡಿ ಅಮರನಾಥ ಯಾತ್ರಿಗಳ ಸುರಕ್ಷತೆಯನ್ನು ಮೊದಲಿಗಿಂತಲೂ ಹೆಚ್ಚು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ನಿಯೋಜಿಸಿದ್ದಕ್ಕಿಂತ ಶೇ. 17 ರಷ್ಟು ಹೆಚ್ಚಿನ ಭದ್ರತಾ ಪಡೆಯನ್ನು ಈ ಬಾರಿ ನಿಯೋಜಿಸಲಾಗಿದೆ. 2017 ರಲ್ಲಿ 204 ಏಜೆನ್ಸಿಗಳು ಭದ್ರತೆಗಾಗಿ ನಿಯೋಜನೆಗೊಂಡಿದ್ದವು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಏರಿಕೆಯಾಗಿ 238 ಏಜೆನ್ಸಿಗಳಿಗೆ ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ.
First published:June 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading