• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಭಯೋತ್ಪಾದಕರಿಗೆ ವಾಹನ ವ್ಯವಸ್ಥೆ ಮಾಡುತ್ತಿದ್ದ ಮೂವರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಭಯೋತ್ಪಾದಕರಿಗೆ ವಾಹನ ವ್ಯವಸ್ಥೆ ಮಾಡುತ್ತಿದ್ದ ಮೂವರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮೂವರು ಹಿಜ್ಬುಲ್​ ಉಗ್ರ ಸಂಘಟನೆಯ ಉಗ್ರರಿಗೆ ಸಹಾಯ ಮಾಡುತ್ತಿದ್ದರು. ಜಮ್ಮು –ಕಾಶ್ಮೀರದಲ್ಲಿ ಉಗ್ರರಿಗೆ ಓಡಾಡಲು ಬೇಕಾದ ವಾಹನ ವ್ಯವಸ್ಥೆಯನ್ನು ಇವರೇ ಮಾಡಿಕೊಡುತ್ತಿದ್ದರು. ಹೀಗಾಗಿ, ಇವರ ವಿಚಾರಣೆಯಿಂದ ಸಾಕಷ್ಟು ವಿಚಾರ ತಿಳಿದು ಬರುವ ನಿರೀಕ್ಷೆ ಇದೆ.

  • Share this:

ಶ್ರೀನಗರ (ಜು.21): ಕಣಿವೆ ರಾಜ್ಯ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಭಾರತೀಯ ಸೇನೆ ಈ ಭಾಗದಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ, ಉಗ್ರರರನ್ನು ಹತ್ಯೆ ಮಾಡುತ್ತಿದೆ. ಈಗ ಉಗ್ರರರಿಗೆ ಸಹಾಯ ಮಾಡುತ್ತಿದ್ದ ಮೂವರು ಬಂಧಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.


ಮೆಹ್ರಜ್​ದಿನ್​ ಕುಮಾರ್​, ತಾಹಿರ್​ ಕುಮಾರ್ ಹಾಗೂ ಸಾಹಿಲ್​ ಹುರ್ರಾ ಬಂಧಿತರು. ಮೆಹ್ರಜ್​ದಿನ್​ ಹಾಗೂ ತಾಹಿರ್​ ಪಾಕೆರ್​ಪೊರದವರಾಗಿದ್ದು, ಸಾಹಿಲ್ ತಿಲ್ಸಾರ್​​ಗೆ ಸೇರಿದವನಾಗಿದ್ದಾನೆ. ಇವರಿಂದ ಎಕೆ-47, ಹಿಜ್ಬುಲ್​ ಸಂಘಟನೆಗೆ ಸೇರಿದ ಪೋಸ್ಟರ್​ಗಳು ಸೇರಿ ಸಾಕಷ್ಟು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


ಈ ಮೂವರು ಹಿಜ್ಬುಲ್​ ಉಗ್ರ ಸಂಘಟನೆಯ ಉಗ್ರರಿಗೆ ಸಹಾಯ ಮಾಡುತ್ತಿದ್ದರು. ಜಮ್ಮು –ಕಾಶ್ಮೀರದಲ್ಲಿ ಉಗ್ರರಿಗೆ ಓಡಾಡಲು ಬೇಕಾದ ವಾಹನ ವ್ಯವಸ್ಥೆಯನ್ನು ಇವರೇ ಮಾಡಿಕೊಡುತ್ತಿದ್ದರು. ಹೀಗಾಗಿ, ಇವರ ವಿಚಾರಣೆಯಿಂದ ಸಾಕಷ್ಟು ವಿಚಾರ ತಿಳಿದು ಬರುವ ನಿರೀಕ್ಷೆ ಇದೆ.


ಇನ್ನು, ಕಳೆದ ಶುಕ್ರವಾರ ಹಾಗೂ ಶನಿವಾರ ತಲಾ ಮೂರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಆಮ್ಶಿಪೊರ ಭಾಗದಲ್ಲಿ ಉಗ್ರರು ಅಡಗಿರುವ ಬಗ್ಗೆ ಸೇನೆಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಸೇನೆ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಯೋಧರು ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.


ಶುಕ್ರವಾರ ಮುಂಜಾನೆ ಕುಲ್ಗಮ್​ ಭಾಗದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಈ ಪೈಕಿ ಜೈಲ್​-ಎ-ಮೊಹ್ಮದ್​ ಉಗ್ರ ಸಂಘಟನೆಯ ಕಮಾಂಡರ್​ ಕೂಡ ಹತನಾಗಿದ್ದ.

top videos
    First published: