ಶ್ರೀನಗರದಲ್ಲಿ ಇಬ್ಬರು ಹಿಜ್ಬುಲ್ ಸಂಘಟನೆಯ ಉಗ್ರರ ಎನ್​ಕೌಂಟರ್​

ಇಂದು ಶ್ರೀನಗರದ ನವಕಾದಲ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

Sushma Chakre | news18-kannada
Updated:May 19, 2020, 6:42 PM IST
ಶ್ರೀನಗರದಲ್ಲಿ ಇಬ್ಬರು ಹಿಜ್ಬುಲ್ ಸಂಘಟನೆಯ ಉಗ್ರರ ಎನ್​ಕೌಂಟರ್​
ಭಾರತೀಯ ಸೇನಾಪಡೆ (ಸಾಂದರ್ಭಿಕ ಚಿತ್ರ)
  • Share this:
ಶ್ರೀನಗರ (ಮೇ 19): ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಇಂದು ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಇಂದು ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಕಾಶ್ಮೀರದ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ಇಬ್ಬರು ಉಗ್ರರಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಯ ಮಗನೂ ಸೇರಿದ್ದಾನೆ.

ಇಂದು ಶ್ರೀನಗರದ ನವಕಾದಲ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಸಾವನ್ನಪ್ಪಿದವರನ್ನು ಶ್ರೀನಗರದ ಜುನೈದ್ ಅಶ್ರಫ್ ಖಾನ್ ಮತ್ತು ಪುಲ್ವಾಮಾದ ತಾರಿಖ್ ಅಹಮದ್ ಶೇಖ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ವಲಸಿಗರನ್ನು ಶವಗಳ ಜೊತೆ ಟ್ರಕ್​ನಲ್ಲಿ ಕಳುಹಿಸಿದ ಉತ್ತರ ಪ್ರದೇಶ; ಜಾರ್ಖಂಡ್ ಸಿಎಂ ಆಕ್ರೋಶ

ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನಾಯಕ ರಿಯಾಜ್ ನಾಯ್ಕೋನನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಳಿಕ, ರಿಯಾಜ್​ ಜೊತೆಗೆ ನಂಟು ಹೊಂದಿದ್ದ ಕೆಲವರನ್ನು ಬಂಧಿಸಲಾಗಿತ್ತು. 2 ದಿನಗಳ ಹಿಂದೆ ಎನ್​ಕೌಂಟರ್​ನಲ್ಲಿ ಹಿಜ್ಬುಲ್ ಸಂಘಟನೆಯ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿತ್ತು.

 
First published: May 19, 2020, 6:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading