ಉಗ್ರ ಸಂಘಟನೆ ಹಿಜ್ಬುಲ್​ ಮುಜಾಹಿದ್ದೀನ್​ ಮುಖ್ಯಸ್ಥನ ಮಗನ ಬಂಧನ

news18
Updated:August 30, 2018, 12:17 PM IST
ಉಗ್ರ ಸಂಘಟನೆ ಹಿಜ್ಬುಲ್​ ಮುಜಾಹಿದ್ದೀನ್​ ಮುಖ್ಯಸ್ಥನ ಮಗನ ಬಂಧನ
news18
Updated: August 30, 2018, 12:17 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.30): ಹಿಜ್ಬುಲ್​ ಮುಜಾಹಿದ್ದೀನ್​ ಮುಖ್ಯಸ್ಥ ಸಲ್ಲಾಹುದ್ದೀನ್​ ಮೊದಲ ಮಗ ಶಕೀಲ್​ ಯುಸೊಫ್​ ನನ್ನು ರಾಷ್ಟ್ರೀಯ ತನಿಖಾದಳ (ಎನ್​ಐಎ) ಮಂಗಳವಾರ ಬಂಧಿಸಿದೆ.

ಶ್ರೀನಗರದಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಾಚಾರಣೆಯಲ್ಲಿ ಎನ್​ಐಎ, ಸಿಆರ್​ಪಿಎಫ್​ ಹಾಗೂ ​ ಪೊಲೀಸರು ಶಕೀಲನನ್ನು ಬಂಧಿಸಿದ್ದಾರೆ.

ಕಳೆದ ಜುಲೈನಲ್ಲಿ ಶರಣಾಗುವಂತೆ ಎನ್​ಐಎ ಶಕೀಲ್​ ವಿರುದ್ಧ ಜಾಮೀನುರಹಿತ ಸಮನ್ಸ್​ ಜಾರಿ ಮಾಡಲಾಗಿತ್ತಾದರೂ ಆತ ಕೋರ್ಟ್​ ಮುಂದೆ ಹಾಜರಾಗಿರಲಿಲ್ಲ.

2011ರಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಈತ ನಿಧಿ ಸಂಗ್ರಹಿಸುತ್ತಿದ್ದು, ವಿದೇಶಿ ಮೂಲದಿಂದ ಈತನ ಖಾತೆಗಳಿಗೆ ಹಣ ಹರಿದು ಬರುತ್ತಿತ್ತು. ಈ ಕುರಿತು ಎನ್​ಐಎ ಮೂರು ಬಾರಿ ಸಮನ್ಸ್​ ಜಾರಿ ಮಾಡಿತ್ತು.

ಶಕೀಲ್​ ಯೂಸಫ್​ ಉಗ್ರ ಸಲ್ಲಾಹುದ್ದೀನ್​ ಮಗನಾಗಿದ್ದು, ಶೇರ್​ ಇ ಕಾಶ್ಮೀರ ವೈದ್ಯಕೀಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಈತನ ತಮ್ಮ ಶಹೀದ್​ ಯೂಸಫ್​ ನನ್ನು ಕಳೆದ ವರ್ಷ ಎನ್​ಐಎ ಬಂಧಿಸಿದ್ದರು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ