HIV ಹೀಗೆಂದ ತಕ್ಷಣ ಎಲ್ಲರೂ ಬೆಚ್ಚಿಬೀಳುತ್ತಾರೆ. ಸುಮಾರು ನಾಲ್ಕು ದಶಕಗಳಿಂದ ಹೆಚ್‌ಐವಿ/ಏಡ್ಸ್(AIDS) ಪ್ರಪಂಚದಾದ್ಯಂತ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರೀತಿ ತೋರಿ ಈ ಹೋರಾಟದಲ್ಲಿ ಅವರಿಗೆ ಧೈರ್ಯ ತುಂಬುವ, ಮಾನಸಿಕವಾಗಿ ಕುಗ್ಗದಂತೆ ಮಾಡುವ ಕೆಲಸವನ್ನೂ ಎಲ್ಲರೂ ಮಾಡಬೇಕಾಗಿದೆ. ಇಂತಹ ಜಾಗೃತಿಗೆ ಇದು ಸಕಾಲವಾಗಿದೆ. ಹೀಗಾಗಿ ಇದೆ ಉದ್ದೇಶದಿಂದ ನಿನ್ನೆ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು(World AIDS Day) ಆಚರಣೆ ಮಾಡಲಾಗಿದೆ.ಆಗಿ ಎಲ್ಲರಿಗೂ ಎಚ್ಐವಿ ರೋಗದ ಕುರಿತು ಜಾಗೃತಿ(Awareness) ಮೂಡಿಸಲಾಗಿದೆ..ಇನ್ನೊಬ್ಬ ವ್ಯಕ್ತಿ ಎಚ್ಐವಿ ರೋಗದ ಬಗ್ಗೆ ಅರಿವು ಇದ್ದರೂ ಕೂಡ ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿ ಇನ್ನೊಬ್ಬರಿಗೆ ಅದು ಹರಡುವಂತೆ ಮಾಡಿದ್ದಾನೆ..
ಎಚ್ಐವಿ ಸೋಂಕು ಮುಚ್ಚಿಟ್ಟು 5 ವರ್ಷಗಳ ಕಾಲ ಸಂಸಾರ
ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿ ವಾಸಿಸುವ 38 ವರ್ಷದ ರೆನೀ ಬರ್ಗೆಸ್ ಅವರು ಸುಮಾರು ಐದು ವರ್ಷಗಳಿಂದ ಎಚ್‌ಐವಿ ಪಾಸಿಟಿವ್ ವ್ಯಕ್ತಿಯಾಗಿದ್ದ.ಮಹಿಳೆ ಗರ್ಭಿಣಿಯಾದಾಗಲೇ ಈ ವಿಚಾರ ಬಿಹಿರಂಗಗೊಂಡಿದ್ದು. ಅಕೆಯ ಹೊಟ್ಟೆಯಲ್ಲಿ ಇಬ್ಬರು ಅವಳಿ ಮಕ್ಕಳಿದ್ದರು. ಆಗ ಮಹಿಳೆಯ ಪತಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇದಾದ ಬಳಿಕ ಪತಿರಾಯ ತನಗೆ 2002 ರಿಂದಲೇ ಈ ಕಾಯಿಲೆ ಇದೆ ಎಂದು ತಿಳಿದಿತ್ತು ಎಂದು ಬಹಿರಂಗಪಡಿಸಿದ್ದಾನೆ.. ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಗಂಡನ ವಿರುದ್ಧ ದೂರು ನೀಡಿ ಪೊಲೀಸರ ಅತಿಥಿಯಾಗಿಸಿದ್ದಾಳೆ..
ಇದನ್ನೂ ಓದಿ :ಡಿ.1 ವಿಶ್ವ ಏಡ್ಸ್ ದಿನ , ಅಸಮಾನತೆ ಕೊನೆಗೊಳಿಸಿ, ಏಡ್ಸ್ ನಿರ್ಮೂಲನೆ ಮಾಡಿ
ಮಹಿಳೆಯರಲ್ಲದೆ,ಪುರುಷರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ
ಎಚ್ಐವಿ ಸೋಂಕು ಇರುವುದನ್ನು ಮರೆಮಾಚಿ ಹೆಂಡತಿ ಜೊತೆ ಐದು ವರ್ಷಗಳ ಕಾಲ ಸಂಸಾರ ನಡೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದವನು ಮದುವೆಯ ನಂತರವೂ ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದಾನೆ.. ಹಲವು ಮಹಿಳೆಯರು ಹಾಗೂ ಪುರುಷರ ಜೊತೆ ಸೇರಿ ಗರ್ಭಿಣಿಗೆ ಮೋಸ ಮಾಡಿದ್ದಾನೆ..
ಆರೋಪಿತನಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ..
ಪ್ರತಿ ನನಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಗಂಡನಿಂದ ವಿಚ್ಛೇದನ ತೆಗೆದುಕೊಳ್ಳಲು ಮುಂದಾಗಿದ್ದಾಳೆ...ಅಲ್ಲದೆ ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಸೋಂಕು ತಗುಲಿಸಿರುವ ಆರೋಪ ಮಾಡಿದ್ದಾಳೆ. ನ್ಯಾಯಾಲಯ ಆತನನ್ನು ಅಪರಾಧಿ ಎಂದು ಘೋಷಿಸಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದದೆ. ತನಗೆ ಏನಾಯಿತು ಎಂಬ ಒತ್ತಡವು ಅವಧಿಪೂರ್ವ ಹೆರಿಗೆಗೆ ಒಳಗಾಗುವಂತೆ ಮಾಡಿದೆ ಎಂದು ರೆನೀ ಹೇಳಿದ್ದಾರೆ. ನಾಲ್ಕು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇನ್ನು ಆಕೆ ಎಚ್‌ಐವಿ ನೆಗೆಟಿವ್ ಆಗಿದ್ದಾರೆ. ರೆನೀ ಬರ್ಗೆಸ್ ಅವರು ಫ್ಲೋರಿಡಾ ಆರೋಗ್ಯ ಇಲಾಖೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಎಚ್‌ಐವಿ ಸೋಂಕಿತ ವ್ಯಕ್ತಿಯೊಂದಿಗೆ 5 ವರ್ಷಗಳ ಕಾಲ ಇದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ :ಔಷಧ ಇಲ್ಲದೇ ಈ ವ್ಯಕ್ತಿಯಲ್ಲಿ ಎಚ್ಐವಿ ಸೋಂಕು ತಾನಾಗೇ ಗುಣವಾಗಿಬಿಟ್ಟಿದೆ, ವೈದ್ಯರಿಗೇ ಆಶ್ಚರ್ಯ!
ಉದ್ದೇಶಪೂರ್ವಕ ಸೋಂಕು ಹಬ್ಬಿಸುವುದು ಅಪರಾಧ
ಗೊತ್ತಿದ್ದೂ ಎಚ್ ಐವಿ ಸೋಂಕಿಗೆ ಒಳಗಾಗುವುದು ಅಪರಾಧ ಎಂದು ರೆನೀಗೆ ಮೊದಲು ಗೊತ್ತಿರಲಿಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಇದೇ ರೀತಿಯ ವರದಿ ಗಮನಿಸಿದ್ದರು. ಅಲ್ಲಿ ಪುರುಷನೊಬ್ಬ ಮಹಿಳೆಗೆ ಮೋಸದಿಂದ ಸೋಂಕು ತಗುಲಿಸಿದ್ದ ಪ್ರಕರಣ ಉಲ್ಲೇಖಿಸಲಾಗಿತ್ತು. ಮಹಿಳೆಯ ದೂರಿನ ಬಳಿಕ ಆತ ಜೈಲಿಗೆ ಹೋಗಬೇಕಾಯಿತು. ಇಲ್ಲಿಂದ ಮಾಹಿತಿ ಪಡೆದ ರೆನೀ ಕೂಡ ತನ್ನ ಪತಿಯ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದಳು. ಆರೋಪಿ ಪತಿ ಇತರ ಮಹಿಳೆಯರೊಂದಿಗೆ ಮಾತ್ರವಲ್ಲದೆ ಇತರ ಪುರುಷರೊಂದಿಗೂ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ