Crime News: ದತ್ತು ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ ತಂದೆ: ಆತ ಏಡ್ಸ್​ ರೋಗಿಯೂ ಹೌದು

HIV Positive Father rapes Stepdaughter: ಮೂಲಗಳ ಪ್ರಕಾರ ಸಂತ್ರಸ್ಥೆಯ ಅಮ್ಮ ಕೂಡ ಏಡ್ಸ್​ ರೋಗಿಯಾಗಿದ್ದು, ಕಳೆದ ವರ್ಷ ಬೆಂಗಳೂರಿನಿಂದ ಚೆನ್ನೈಗೆ ಬಂದಿದ್ದಾಳೆ. ಈ ಹಿಂದೆ ಚೆನ್ನೈ ತೊರೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆಕೆ, ಅಲ್ಲಿ ಆರೋಪಿಯ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಬೆಳೆದು ನಂತರ ಆರೋಪಿಯನ್ನು ಮದುವೆಯಾಗಿ ಚೆನ್ನೈಗೆ ಹೋಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Crime News: ನಲವತ್ತು ವರ್ಷದ HIV Positive​ ರೋಗಿಯೊಬ್ಬ ದತ್ತು ಮಗಳ ಮೇಲೆ ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ಥೆ ಶಾಲೆಯ ವಾರ್ಡನ್​ಗೆ ತಾನು ಅನುಭವಿಸುತ್ತಿರುವ ನರಕದ ಬಗ್ಗೆ ಹೇಳಿದ ನಂತರ ದೂರು ದಾಖಲಾಗಿದೆ. ಸಂತ್ರಸ್ಥೆ ಅಪ್ರಾಪ್ತೆಯಾಗಿದ್ದು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜತೆಗೆ ಆಕೆ ಶಾಲೆಯ ಹಾಸ್ಟೆಲ್​ನಲ್ಲೇ ವಾಸವಿದ್ದಳು, ಆದರೆ ಕೊರೋನಾ ಆರಂಭವಾದ ನಂತರ, ಹಾಸ್ಟೆಲ್​ನಿಂದ ಮನೆಗೆ ವಾಪಸಾಗಿದ್ದಳು. ಚೆನ್ನೈನ ಶೋಲಾವರಂನಲ್ಲಿ ಹುಡುಗಿ ಸ್ವಂತ ತಾಯಿ ಮತ್ತು ತಾಯಿಯ ಹೊಸ ಗಂಡನ ಜೊತೆ ವಾಸವಾಗಿದ್ದಾಳೆ.

  ಸಂತ್ರಸ್ಥೆಯ ಅಮ್ಮನಿಗೂ AIDS:

  ಮೂಲಗಳ ಪ್ರಕಾರ ಸಂತ್ರಸ್ಥೆಯ ಅಮ್ಮ ಕೂಡ ಏಡ್ಸ್​ ರೋಗಿಯಾಗಿದ್ದು, ಕಳೆದ ವರ್ಷ ಬೆಂಗಳೂರಿನಿಂದ ಚೆನ್ನೈಗೆ ಬಂದಿದ್ದಾಳೆ. ಈ ಹಿಂದೆ ಚೆನ್ನೈ ತೊರೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆಕೆ, ಅಲ್ಲಿ ಆರೋಪಿಯ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿ ಬೆಳೆದು ನಂತರ ಆರೋಪಿಯನ್ನು ಮದುವೆಯಾಗಿ ಚೆನ್ನೈಗೆ ಹೋಗಿದ್ದಾರೆ. ಆತನಿಂದಲೇ ಆಕೆಗೂ ಏಡ್ಸ್​ ರೋಗ ತಗುಲಿರುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಆಕೆ ಮನೆಗೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈ ಹಿಂದೆ ಆಕೆಗೆ ಮದುವೆಯಾಗಿದ್ದು ಮಗಳಿದ್ದಳು. ಆದರೆ ಗಂಡನ ಸಾವಿನ ನಂತರ ಆಕೆ ಮತ್ತು ಮಗಳು ಇಬ್ಬರೇ ಇದ್ದರು.

  ಪೊಲೀಸ್​ ಮೂಲಗಳ ಪ್ರಕಾರ ಹೆಂಡತಿ ಕೆಲಸಕ್ಕೆ ಆಚೆ ಹೋದ ವೇಳೆ ಆರೋಪಿ, ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಸಂತ್ರಸ್ಥೆಯ ಮೇಲೆ ಸತತವಾಗಿ ತಿಂಗಳುಗಳಿಂದ ಆರೋಪಿ ಅತ್ಯಾಚಾರ ಮಾಡುತ್ತಿದ್ದ, ಭಯದಿಂದ ಹುಡುಗಿ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ ಘಟನಾವಳಿಯ ಕುರಿತು ಹುಡುಗಿ ಹಾಸ್ಟೆಲ್​ ವಾರ್ಡನ್​ಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ವಾರ್ಡನ್​ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಹುಡುಗಿಯನ್ನು ಕೌನ್ಸೆಲಿಂಗ್​ಗೆ ಕಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಎರಡು ವರ್ಷದ ಮಗುವಿನ ಮೇಲೂ ನಡೆದಿತ್ತು ಅತ್ಯಾಚಾರ:

  ಇತ್ತೀಚೆಗಷ್ಟೇ ಚೆನ್ನೈನಲ್ಲಿ ಎರಡವು ವರ್ಷದ ಮಗುವಿನ ಮೇಲೆ ಸ್ವಂತ ಅಪ್ಪನೇ ಅತ್ಯಾಚಾರ ಮಾಡಿದ್ದ ಘಟನೆ ನಡೆದಿದ್ದು. ಗಂಡನ ವರ್ತನೆಯಿಂದ ಬೇಸತ್ತು, ಇನ್ನೊಂದು ಮದುವೆಯಾಗಿದ್ದ ಹೆಂಡತಿಯ ಮೇಲೆ ದ್ವೇಷದಿಂದ ಗಂಡ ಈ ಕೃತ್ಯವನ್ನು ಎಸಗಿದ್ದ. ಹೊಸ ಪತಿ ಮನೆಯಲ್ಲಿ ಇರದ ವೇಳೆ ಮನೆಗೆ ನುಗ್ಗಿದ ಗಂಡ, ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದ. ಇದರ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಪೋಕ್ಸೊ (Protection of Children from Sexual Offences Act) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

  ಇದನ್ನೂ ಓದಿ: 60 ವರ್ಷದ ವೃದ್ಧೆ ಕೊಲೆಗೈದು ಮೃತದೇಹದ ಮೇಲೆ ಅತ್ಯಾಚಾರ ಎಸಗಿದ 19 ವರ್ಷದ ಕಾಮುಕ!

  ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೇಶದ ವಿವಿಧೆಡೆ ಈ ರೀತಿಯ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ಹೊರಬಂದ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ (National Crime Records Bureau) ವರದಿಯ ಅನ್ವಯ ಉತ್ತರ ಪ್ರದೇಶದಲ್ಲಿ ಎಲ್ಲಾ ರೀತಿಯ ಅಪರಾಧ ಪ್ರಕರಣಗಳೂ ಹೆಚ್ಚು. ದೇಶದಲ್ಲೇ ಅತಿ ಹೆಚ್ಚು ಅಪರಾಧಗಳು ಉತ್ತರ ಪ್ರದೇಶ ರಾಜ್ಯದಲ್ಲಾಗಿದೆ. ಜತೆಗೆ ದೆಹಲಿ ಕೂಡ ಮಹಿಳೆಯರಿಗೆ ಸುರಕ್ಷಿತ ನಗರವಲ್ಲ ಎಂಬ ವರದಿಯೂ ಇತ್ತೀಚೆಗೆ ಕೇಳಿ ಬಂದಿತ್ತು. ಮೈಸೂರಿನಲ್ಲಿ ನಡೆದ ಗ್ಯಾಂಗ್​ ರೇಪ್​, ತುಮಕೂರಿನಲ್ಲಿ ಕುರಿ ಕಾಯಲು ಹೋದ ಹುಡುಗಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಹೀಗೇ ರಾಜ್ಯದಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕಣಗಳು ಹೆಚ್ಚುತ್ತಲೇ ಇವೆ.

  ಇದನ್ನೂ ಓದಿ: ಅಪ್ರಾಪ್ತೆಯ ತಲೆಕೆಡಿಸಿ ಒಂದೇ ಹುಡುಗಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಹುಡುಗರು: ನಾಲ್ವರ ಬಂಧನ

  ಎಷ್ಟೋ ಪ್ರಕರಣಗಳಲ್ಲಿ ಸೂಕ್ತ ಸಾಕ್ಷಾಧಾರವಿಲ್ಲದೇ ಆರೋಪಿಗಳು ನ್ಯಾಯಾಲಯದಿಂದ ಖುಲಾಸೆಗೊಳ್ಳುತ್ತಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ತೋರುವ ಸಾಮರ್ಥ್ಯವನ್ನು ಶಿಕ್ಷೆ ಕೊಡಿಸುವಲ್ಲಿಯೂ ಮಾಡಿದರೆ ಮಾತ್ರ ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.
  Published by:Sharath Sharma Kalagaru
  First published: