Gujarat| ಅಹ್ಮದ್ ಪಟೇಲ್ ಅನುಪಸ್ಥಿತಿ, ಕ್ಷೀಣಿಸುತ್ತಿರುವ ಹಾರ್ದಿಕ್ ಜನಪ್ರಿಯತೆ; ಗುಜರಾತ್​ ಗೆಲುವಿಗೆ ಕಾಂಗ್ರೆಸ್​ ತಂತ್ರವೇನು?

ಪರಿಸ್ಥಿತಿ ಹೀಗೆ ಮುಂದುವರೆದರೆ 2022ರ ಚುನಾವಣೆಯಲ್ಲಿ ಗುಜರಾತ್​ನಲ್ಲಿ ಬಿಜೆಪಿ ಸೋಲು ಖಚಿತ ಎಂಬುದು ಹೈಕಮಾಂಡ್​ಗೂ ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಬಿಜೆಪಿ ಇದೀಗ ಪಾಟೀಲ್ ಸಮುದಾಯಕ್ಕೆ ಮಣೆ ಹಾಕಿದೆ. ಹಾಗಾದರೆ ಕಾಂಗ್ರೆಸ್​ ರಣತಂತ್ರವೇನು? ಎಂಬುದು ಪ್ರಶ್ನೆ?.

ರಾಹುಲ್ ಗಾಂಧಿ-ಸೋನಿಯಾ ಗಾಂಧಿ.

ರಾಹುಲ್ ಗಾಂಧಿ-ಸೋನಿಯಾ ಗಾಂಧಿ.

 • Share this:
  ಕೋವಿಡ್​ನ ಕೆಟ್ಟ ನಿರ್ವಹಣೆಯ ಕಾರಣದಿಂದಾಗಿ ಗುಜರಾತ್​ನಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಲೇ ಇದೆ. ಇದೇ ಕಾರಣಕ್ಕೆ ಕ್ಷೀಣಿಸುತ್ತಿರುವ ಜನಪ್ರಿಯತೆ ಮತ್ತು ಮತ ಬ್ಯಾಂಕ್​ ಅನ್ನು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ ಬಿಜೆಪಿ ದಿಢೀರ್ ಬೆಳವಣಿಗೆಯಲ್ಲಿ ವಿಜಯ್ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಿ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿದೆ. ಈ ಮೂಲಕ ಕಾಂಗ್ರೆಸ್ ಕಡೆಗೆ ವಾಲುತ್ತಿರುವ ಬಹುಸಂಖ್ಯಾತ ಪಟೇಲ್ ಸಮುದಾಯದ ಮತಗಳನ್ನು ಮುಂದಿನ ಚುನಾವಣೆಯಲ್ಲಿ ತನ್ನತ್ತ ಸೆಳೆಯುವುದು ಬಿಜೆಪಿ ತಂತ್ರ. ಏಕೆಂದರೆ ಬಿಜೆಪಿ ಗುಜರಾತ್​ನಲ್ಲೇ ಸೋಲನುಭವಿ ಸಿದರೆ, ದೇಶದಾದ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮುಂದಿನ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಕಮಲ ಪಾಳಯದ ಲೆಕ್ಕಾಚಾರ.

  ಈ ಮೂಲಕ 2022 ರಲ್ಲಿ ಗುಜರಾತಿನ ರಾಜ್ಯ ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿ ಪ್ರಬಲ ಪಟೇಲ್ ಸಮುದಾಯವನ್ನು ಓಲೈಸಲು ಬಯಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ವಿಜಯ್ ರೂಪಾನಿಯ ಕಾರ್ಯಕ್ಷಮತೆ ಜನರ ನಿರೀಕ್ಷೆಯ ಮಟ್ಟಕ್ಕೆ ಏರಿಲ್ಲ. ಅಲ್ಲದೆ, ಇದು ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಎಂಬ ಸಮೀಕ್ಷೆಗಳೂ ಸಹ ರೂಪಾನಿ ರಾಜೀನಾಮೆಗೆ ಕಾರಣ ಎನ್ನಲಾಗುತ್ತಿದೆ.

  ಬಿಜೆಪಿ ಪಕ್ಷದ ಈ ದಿಢೀರ್​ ಬೆಳವಣಿಗೆಗಳು ಸಹ ಯಾರಿಗಾದರೂ ಅರ್ಥವಾಗುವಂತಹದ್ದೇ ಆಗಿದೆ. ಏಕೆಂದರೆ 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಗುಜರಾತ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಬಿಜೆಪಿಗೆ ಆಘಾತ ನೀಡಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಶೇ.40ಕ್ಕಿಂತ ಅಧಿಕ ಮತಗಳನ್ನು ಹೆಚ್ಚುವರಿಯಾಗಿ ಗಳಿಸಿತ್ತು. ಪರಿಣಾಮ ಮ್ಯಾಜಿಕ್​ ನಂಬರ್​ಗೆ ಹತ್ತಿರವಾಗಿತ್ತು.

  ಈ ವೇಳೆ ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಮೂವರು ರಾಜ್ಯದಲ್ಲಿ ಬಿಜೆಪಿ ವಿರುದ್ಧ ನಡೆಸಿದ್ದ ಪ್ರಚಾರಗಳು ಕಾಂಗ್ರೆಸ್​ಗೆ ಸಹಾಯ ಮಾಡಿತ್ತು. ಪಾಟಿದಾರ್ ಮೀಸಲಾತಿಗೆ ಆಗ್ರಹಿಸಿ ರಾಜ್ಯ ಬಿಜೆಪಿ ಮೇಲೆ ಒತ್ತಡ ಹೇರುವಲ್ಲಿ ಹೆಸರುವಾಸಿಯಾದ ಹಾರ್ದಿಕ್ ಪಟೇಲ್ ನಡೆ ಗುಜರಾತ್​ನಲ್ಲಿ ಕಾಂಗ್ರೆಸ್‌ಗೆ ಸಾಕಷ್ಟು ಸಹಾಯ ಮಾಡಿತ್ತು.

  ಇದು ಹೀಗೆ ಮುಂದುವರೆದರೆ 2022ರ ಚುನಾವಣೆಯಲ್ಲಿ ಗುಜರಾತ್​ನಲ್ಲಿ ಬಿಜೆಪಿ ಸೋಲು ಖಚಿತ ಎಂಬುದು ಹೈಕಮಾಂಡ್​ಗೂ ತಿಳಿಯದ ವಿಚಾರವೇನಲ್ಲ. ಇದೇ ಕಾರಣಕ್ಕೆ ಬಿಜೆಪಿ ಇದೀಗ ಪಾಟೀಲ್ ಸಮುದಾಯಕ್ಕೆ ಮಣೆ ಹಾಕಿದೆ. ಹಾಗಾದರೆ ಕಾಂಗ್ರೆಸ್​ ರಣತಂತ್ರವೇನು? ಎಂಬುದು ಪ್ರಶ್ನೆ?.

  ವಾಸ್ತವವಾಗಿ, ರಾಹುಲ್ ಗಾಂಧಿ 2017 ರಲ್ಲಿ ಗುಜರಾತ್​ಗೆ ಪ್ರಚಾರಕಾಗಿ ಆಗಮಿಸಿದ್ದಾಗ, ಆದಿವಾಸಿಗಳು, ರೈತರು, ಪಟೇಲ್‌ಗಳು ಮತ್ತು ಎಲ್ಲಾ ಪ್ರಮುಖ ಪಾಲುದಾರರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಗೆ ಗುಜರಾತ್​ನಲ್ಲಿ ಬಲವಾದ ಸ್ಥಾನಮಾನ ಇದೆ ಎಂಬುದನ್ನು ಮನಗಂಡಿದ್ದ ರಾಹುಲ್ ಗಾಂಧಿ ಅವರ ಬಗ್ಗೆ ಹೆಚ್ಚು ವ್ಯಯಕ್ತಿಕ ದಾಳಿಗಳನ್ನು ನಡೆಸಲು ಮುಂದಾಗಿರಲಿಲ್ಲ. ಬದಲಾಗಿ "ವಿಕಾಸ್ ಗಂಡೋ ತಾಯೊ ಛೆ" (ವಿಕಾಸ್ ಹುಚ್ಚನಾಗಿದ್ದಾನೆ) ಇದು ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಘೋಷವಾಕ್ಯವಾಗಿತ್ತು.

  ಆದರೆ ಆ ವಿಧಾನಸಭಾ ಚುನಾವಣೆಯ ನಂತರ ಗುಜರಾತ್​ನಲ್ಲಿ ಮತ್ತೆ ಕಾಂಗ್ರೆಸ್‌ ಹದಗೆಟ್ಟಿದೆ. ಸ್ಥಳೀಯ ಚುನಾವಣೆಗಳಲ್ಲಿನ ವಾಷ್‌ಔಟ್ ರಾಜ್ಯ ಘಟಕದ ಅಧ್ಯಕ್ಷ ಅಮಿತ್ ಚಾವ್ಡಾ ಮತ್ತು ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಪರೇಶ್ ಧನಾನಿ ಅವರ ರಾಜೀನಾಮೆಗೆ ಕಾರಣವಾಯಿತು. 2019 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಯುವ ಹಾರ್ದಿಕ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದ್ದು, ಪಟೇಲ್‌ಗಳನ್ನು ಓಲೈಸಲು ಮತ್ತು ತಲೆಮಾರಿನ ಬದಲಾವಣೆಯನ್ನು ತರಲು ಸ್ಪಷ್ಟ ಪ್ರಯತ್ನ ನಡೆಸಿದ್ದರು.

  ಆದಾಗ್ಯೂ, ಪಕ್ಷದ ಕಾರ್ಯಕರ್ತರು ಹತಾಶರಾಗಿ ಮತ್ತು ಚುರುಕಿಲ್ಲದವರಂತೆ ಕಾಣುತ್ತಿದ್ದಾರೆ ಮತ್ತು ಅಹ್ಮದ್ ಪಟೇಲ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ರಾಜ್ಯಸಭೆಯ ಚುನಾವಣೆಯಲ್ಲಿ ಎಲ್ಲಾ ಆಡ್ಸ್‌ಗಳ ವಿರುದ್ಧದ ಆಕ್ರಮಣಕಾರಿ ಗೆಲುವಿನಿಂದಾಗಿ, ಬಿಜೆಪಿಯ ಫೀಫಡಮ್ ಆಗಿದ್ದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮೇಲುಗೈ ಸಾಧಿಸಬಹುದೆಂಬ ಗ್ರಹಿಕೆಯನ್ನು ಹೆಚ್ಚಿಸಿತ್ತು. ಆದರೆ ಇಂದು, ಪಕ್ಷವು ಬೇಗನೆ ಬದಲಾಗಬಹುದು ಎಂದು ಭಾವಿಸಿದವರೂ ಸಹ ನಿರಾಶೆಯಿಂದ ನೋಡುವಂತಾಗಿದೆ.

  ಇದಕ್ಕಾಗಿಯೇ ರಾಹುಲ್ ಗಾಂಧಿ ರಾಜ್ಯಕ್ಕೆ ವಿಶೇಷ ಗಮನ ನೀಡುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಪ್ರಧಾನಿಯವರ ತವರು ರಾಜ್ಯದಲ್ಲಿ ಬಿಜೆಪಿಯ ಸೋಲು 2024 ರ ಚುನಾವಣೆಗೆ ಮುಂಚಿತವಾಗಿ ಅತಿದೊಡ್ಡ ಆಘಾತ ಎಂದು ಅವರು ಭಾವಿಸಿದ್ದಾರೆ. ಕೋವಿಡ್ ನಂತರದ ತೊಡಕುಗಳಿಂದ ನಿಧನರಾದ ರಾಜ್ಯ ಉಸ್ತುವಾರಿ ರಾಜೀವ್ ಸಾತವ್ ಅವರನ್ನು ಬದಲಿಸಲು ಹುಡುಕಾಟ ನಡೆಯುತ್ತಿದೆ.

  ಇದನ್ನೂ ಓದಿ: CoronaVirus: ಕೇರಳದಲ್ಲಿ ಶೇ.17 ರಷ್ಟು ಕುಸಿದ ಕೊರೋನಾ ಪ್ರಕರಣಗಳ ಸಂಖ್ಯೆ​, ದೇಶದಾದ್ಯಂತ 2.5 ಲಕ್ಷ ಜನರಿಗೆ ಸೋಂಕು!

  ಮೂಲಗಳು ಹೇಳುವಂತೆ ರಾಹುಲ್ ಗಾಂಧಿ ಅವರು ಕ್ರಿಯಾಶೀಲರಾಗಿರುವ ಯಾರಾದರೂ ಗುಜರಾತ್ ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಪ್ರಸ್ತಾಪಿಸಿದ ಒಂದು ಹೆಸರು ಭೂಪೇಶ್ ಬಘೇಲ್ ಅವರದ್ದು. ಮತ್ತೊಂದು ಹೆಸರು ಸಚಿನ್ ಪೈಲಟ್ ಅವರದ್ದು. ಪಿಸಿಸಿ ಮುಖ್ಯಸ್ಥರಾಗಿ ತಮ್ಮ ಪಕ್ಷವನ್ನು ರಾಜಸ್ಥಾನದಲ್ಲಿ ಗೆಲ್ಲುವಂತೆ ಮಾಡಿದ್ದ ಸಚಿನ್ ಪೈಲಟ್ ಅವರಂತಹ ಯುವ ಕ್ರಿಯಾತ್ಮಕ ಮುಖವು ಗುಜರಾತ್‌ನಲ್ಲಿ ಕೆಲಸ ಮಾಡಬಹುದು ಎಂದು ಭಾವಿಸಲಾಗಿದೆ.
  Published by:MAshok Kumar
  First published: