ಆಫ್ರಿಕಾ: ತನ್ನ ದೇಹದ ವಿಶಿಷ್ಠ ರಚನೆಯಿಂದ ಈ ಭೂಮಿಯ ಮೇಲೆ ಯಾರೇ ಆದರೂ ಸುಲಭವಾಗಿ ಗುರುತಿಸಬಹುದಾದ ಪ್ರಾಣಿ ಎಂದರೆ ಘೇಂಡಾಮೃಗ (Hippopotamus) ಅಥವಾ ಖಡ್ಗಮೃಗ. ಪ್ರಾಣಿ ಜಗತ್ತಿನಲ್ಲಿ ಸ್ತನಿ ವರ್ಗಕ್ಕೆ ಸೇರಿದ ಘೇಂಡಾಮೃಗದ ವೈಜ್ಞಾನಿಕ ಹೆಸರು ರಿನೋಸೆರೋಟೋಯ್ಡೆ. ಈ ಪ್ರಾಣಿ ಎಷ್ಟು ಸಮ್ಮನೇ ಇರುತ್ತದೋ ಅಷ್ಟೇ ಅಪಾಯಕಾರಿ. ಈ ಪ್ರಾಣಿಯನ್ನು(Animal) ಹೆಚ್ಚಾಗಿ ಕಾಡುಗಳಲ್ಲಿ ಕಾಣಬಹುದು. ಇನ್ನೂ ನಾಡಿನಲ್ಲಿ ಪ್ರಾಣಿ ಸಂಗ್ರಹಾಲಯದಲ್ಲಿ (Zoo) ಕಾಣಬಹುದಾಗಿದೆ. ಸದ್ಯ ನದಿಯಲ್ಲಿ(River) ಆಟವಾಡುತ್ತಿದ್ದ 2 ವರ್ಷದ ಬಾಲಕನನ್ನು (Boy) ಘೇಂಡಾ ಮೃಗವೊಂದು ನುಂಗಿ ನಂತರ ಹೊರಗೆ ಉಗುಳಿದ್ದು, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಲ್ಲುಗಳಿಂದ ಏಕಾಏಕಿ ಬಾಲಕನನ್ನು ಸೆರೆ ಹಿಡಿದ ಘೇಂಡಾ ಮೃಗ
ಉಗಾಂಡದ ಕಾಟ್ವೆ ಕಬಟೊರೊದಲ್ಲಿರುವ ತನ್ನ ಮನೆ ಸಮೀಪದಲ್ಲಿರುವ ನದಿಯಲ್ಲಿ ಬಾಲಕ ಆಟವಾಡುತ್ತಿದ್ದನು. ಈ ವೇಳೆ ಬಂದ ಘೇಂಡಾ ಮೃಗ, ತನ್ನ ದೊಡ್ಡ ಹಲ್ಲುಗಳಿಂದ ಏಕಾಏಕಿ ಬಾಲಕನನ್ನು ಸೆರೆ ಹಿಡಿದು ನುಂಗಲು ಆರಂಭಿಸಿತ್ತು.
UNBELIEVABLE NEWS!!!!!
In the pictures below Hippo in Queen Elizabeth National park, A hippopotamus swolls this kid and vomits him back, The mother rushed him to hospital and found out he was still alive.
Unbelievably in Uganda’s wildlife pic.twitter.com/blZVtAwt80
— Gorilla Sights Safaris | "ADVENTURE FOR MEMORIES" (@gorillasights) December 13, 2022
ಘೇಂಡಾ ಮೃಗ ಬಾಯಿಯಿಂದ ತಪ್ಪಿಸಿಕೊಂಡ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇದರಿಂದ ಬೆಚ್ಚಿ ಬಿದ್ದ ಘೇಂಡಾ ಮೃಗ ಬಾಲಕನನ್ನು ತಕ್ಷಣವೇ ಹೊರಗೆ ಉಗುಳಿದೆ. ನಂತರ ಘೇಂಡಾ ಮೃಗ ಬಾಯಿಯಿಂದ ತಪ್ಪಿಸಿಕೊಂಡ ಬಾಲಕನನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಂಗೋ ಬ್ವೆರಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಫ್ರಿಕಾದಲ್ಲಿ ಪ್ರತಿ ವರ್ಷ ಘೇಂಡಾ ಮೃಗಗಳಿಗೆ ಕನಿಷ್ಠ 500 ಮಂದಿ ಬಲಿಯಾಗುತ್ತಿದ್ದಾರೆ ಎಂದು ಸಂಶೋಧನೆಯ ಪ್ರಕಾರ ತಿಳಿದುಬಂದಿದೆ. ಘೇಂಡಾ ಮೃಗಗಳ ಹಲ್ಲುಗಳು ಒಂದು ಅಡಿಗಿಂತ ಉದ್ದವಿರಬಹುದು. ಆದರೆ ಅವುಗಳ ಆಕ್ರಮಣಶೀಲತೆ ಶೇಕಡಾ 29 ರಿಂದ 87 ವರೆಗೆ ಇರುತ್ತದೆ.
ಇದೇ ಮೊದಲ ಬಾರಿಗೆ ಪುಟ್ಟ ಬಾಲಕನ ಮೇಲೆ ಘೇಂಡಾ ಮೃಗ ದಾಳಿ
ಇನ್ನೂ ನದಿಯಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಘೇಂಡಾ ಮೃಗ ದಾಳಿ ಮಾಡಿರುವುದು ಇದೇ ಮೊದಲ ಪ್ರಕರಣವಾಗಿದೆ ಎಂದು ಉಗಾಂಡಾ ಪೊಲೀಸ್ ತಂಡ ತಿಳಿಸಿದೆ.
ಕ್ವೀನ್ ಎಲಿಜಬೆತ್ ರಾಷ್ಟ್ರೀಯ ಉದ್ಯಾನವನದೊಳಗೆ ವಾಸಿಸುತ್ತಿರುವ ಕಟ್ವೆ ಕಬಟೊರೊ ಟೌನ್ ಕೌನ್ಸಿಲ್ನ ಎಲ್ಲಾ ನಿವಾಸಿಗಳು ತಮ್ಮ ಅಕ್ಕಪಕ್ಕದ ಪ್ರದೇಶದಿಂದ ದಾರಿ ತಪ್ಪಿ ಬರುವ ಪ್ರಾಣಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಯಾವಾಗಲೂ ಪಾರ್ಕ್ನಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಘೇಂಡಾ ಮಗಕ್ಕೆ 500 ಮಂದಿ ಬಲಿ
ಕ್ರೂರ ಸ್ವಭಾವ ಹೊಂದಿರುವ ಘೇಂಡಾ ಮೃಗಗಳು ಆಫ್ರಿಕಾದಲ್ಲಿರುವ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಘೇಂಡಾ ಮೃಗಗಳ ದಾಳಿಗೆ ಪ್ರತಿ ವರ್ಷ 500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ.
ಇದನ್ನೂ ಓದಿ: Trending Video: ಮೇಕೆಯಂತೆಯೇ ಜಿಗಿದಾಡಿದೆ ನೋಡಿ ಈ ಮರಿ ಘೇಂಡಾಮೃಗ! ಮುದ್ದಾಗಿದೆ ಅಂದ್ರು ನೆಟ್ಟಿಗರು
1200 ರಿಂದ 3000 ಕಿಲೋಗ್ರಾಂ ಇರುವ ಘೇಂಡಾ ಮೃಗ
ಆನೆಗಳು ಮತ್ತು ಬಿಳಿ ಘೇಂಡಾಮೃಗಗಳನ್ನು ಬಿಟ್ಟರೆ, ವಯಸ್ಕ ಘೇಂಡಾ ಮೃಗಗಳೇ ಮೂರನೇಯ ಅತಿ ದೊಡ್ಡ ಪ್ರಾಣಿಯಾಗಿದ್ದು, ಇವು 1200 ರಿಂದ 3000 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ ಮತ್ತು ಮತ್ತು 7 ರಿಂದ 16 ಅಡಿ ಎತ್ತರದಷ್ಟು ಬೆಳೆಯುತ್ತವೆ. ಇವು ಹೆಚ್ಚಾಗಿ ನದಿ, ಸರೋವರ ಮತ್ತು ಜೌಗು ಪ್ರದೇಶಗಳಲ್ಲಿ ವಾಸಿಸುತ್ತದೆ.
ಇದನ್ನೂ ಓದಿ:Viral Video: ಖುಷಿಯಿಂದ ಕುಣಿದಾಡಿದ ಘೇಂಡಾಮೃಗದ ವಿಡಿಯೋ ವೈರಲ್! ಅಷ್ಟಕ್ಕೂ ಸಂತೋಷಕ್ಕೆ ಕಾರಣವೇನು ಗೊತ್ತಾ?
ಆಫ್ರಿಕಾ, ಏಷ್ಯಾದ ಹುಲ್ಲುಗಾವಲುಗಳಲ್ಲಿ ಘೇಂಡಾ ಮೃಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇವುಗಳಲ್ಲಿ ಕರಿ ಅಥವಾ ಕಂದು ಘೇಂಡಾಮೃಗ, ಬಿಳಿ ಘೇಂಡಾಮೃಗ, ಜಾವನ್ ಘೇಂಡಾಮೃಗ, ಸುಮಾತ್ರನ್ ಘೇಂಡಾಮೃಗ, ಗ್ರೇಟರ್ ಒನ್ ಹಾರ್ನ್ಡ್ ಘೇಂಡಾಮೃಗ ಎಂಬ ಒಟ್ಟು ಐದು ವಿಧವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ