Mosque: ತಮ್ಮ ಹಳ್ಳಿಯ ಪುರಾತನ ಮಸೀದಿಯನ್ನು ಉಳಿಸಲು ಮುಂದಾದ ಹಿಂದೂ ಗ್ರಾಮಸ್ಥರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉತ್ತರ ಪ್ರದೇಶದ ಶಾಮಿಲಿ ಜಿಲ್ಲೆಯ ಗೌಸ್ಗಡ್ ದ ಹಿಂದೂ ಧರ್ಮೀಯ ಗ್ರಾಮಸ್ಥರು ತಮ್ಮ ಹಳ್ಳಿಯ ಪುರಾತನ ಮಸೀದಿಯನ್ನು ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗೌಸ್ಗಡ್ ಶ್ರೀಮಂತ ಇತಿಹಾಸವನ್ನು ಹೊಂದಿದ ಪ್ರದೇಶ. ಆದರೆ ಇದು ಹೆಚ್ಚಿನ ಜನಪ್ರಿಯತೆಯನ್ನು ಹೊಂದಿಲ್ಲ ಮತ್ತು ಈ ಬಗ್ಗೆ ಕೆಲವೇ ಮಂದಿಗಷ್ಟೇ ಮಾಹಿತಿ ಇದೆ.

ಮುಂದೆ ಓದಿ ...
  • Share this:

ಶಾಮಿಲಿ: ದೇಶದೆಲ್ಲೆಡೆ ಮಂದಿರ, ಮಸೀದಿಗಳ (Mosque) ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ, ಉತ್ತರ ಪ್ರದೇಶದ (Uttar Pradesh) ಪುಟ್ಟ ಗ್ರಾಮವೊಂದರಲ್ಲಿ (Village) ಸದ್ದಿಲ್ಲದೆ, ಕೋಮು ಸೌರ್ಹಾದತೆಯನ್ನು ಎತ್ತಿ ಹಿಡಿಯುವ ಕೆಲಸವೊಂದು (Work) ಆರಂಭವಾಗಿದೆ. ಹೌದು, ಉತ್ತರ ಪ್ರದೇಶದ ಶಾಮಿಲಿ ಜಿಲ್ಲೆಯ ಗೌಸ್ಗಡ್ ದ (Gausgarh) ಹಿಂದೂ ಧರ್ಮೀಯ ಗ್ರಾಮಸ್ಥರು ತಮ್ಮ ಹಳ್ಳಿಯ ಪುರಾತನ ಮಸೀದಿಯನ್ನು ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗೌಸ್ಗಡ್ ಶ್ರೀಮಂತ ಇತಿಹಾಸವನ್ನು ಹೊಂದಿದ ಪ್ರದೇಶ. ಆದರೆ ಇದು ಹೆಚ್ಚಿನ ಜನಪ್ರಿಯತೆಯನ್ನು ಹೊಂದಿಲ್ಲ ಮತ್ತು ಈ ಬಗ್ಗೆ ಕೆಲವೇ ಮಂದಿಗಷ್ಟೇ ಮಾಹಿತಿ ಇದೆ.


ನೂರಾರು ವರ್ಷಗಳ ಹಿಂದಿನ ಈ ಧಾರ್ಮಿಕ ಕಟ್ಟಡ


ಗೌಸ್ಗಡ್ ಗ್ರಾಮವು ಮೊಘಲ್ ಚಕ್ರವರ್ತಿ ಎರಡನೇ ಷಾ ಆಲಂನ ಆಳ್ವಿಕೆಯ ಕಾಲದಲ್ಲಿ, ಅಂದರೆ 1760 ರಿಂದ 1806 ನಡುವೆ ಒಮ್ಮೆ ರಾಜಾಡಳಿತ ಪ್ರದೇಶವಾಗಿತ್ತು. ಅದೆಲ್ಲಾ ನಡೆದು ಇದೀಗ 250 ವರ್ಷಗಳು ಕಳೆದಿದ್ದರೂ, ಈಗಲೂ ಆ ಗ್ರಾಮದಲ್ಲಿ ರಾಜಾಡಳಿತಕ್ಕೆ ಒಳಪಟ್ಟಿದ್ದರ ಕುರುಹುಗಳು ಕಾಣ ಸಿಗುತ್ತವೆ. ಆದರೆ ಆವೆಲ್ಲವೂ ಈಗ ಸಂಪೂರ್ಣವಾಗಿ ಹೀನಾಯ ಸ್ಥಿತಿಯಲ್ಲಿ ಇವೆ.


ಅವುಗಳ ಮಧ್ಯೆ ಒಂದು ಮಸೀದಿ ಮಾತ್ರ ತಕ್ಕಮಟ್ಟಿಗೆ, ಆದರೂ ಶಿಥಿಲವಾದ ಸ್ಥಿತಿಯಲ್ಲಿ ಇದೆ. ಆದರೆ 1940 ರಿಂದ ಗೌಸ್ಗಡ್ ಗ್ರಾಮದಲ್ಲಿ ಮುಸ್ಲಿಮರು ವಾಸವಾಗಿಲ್ಲದ ಕಾರಣ, ಆಗಿನಿಂದಲೂ ಈ ಮಸೀದಿಯಲ್ಲಿ ನಮಾಜ್ ನಡೆದಿಲ್ಲ. ಇದೀಗ ಆ ಗ್ರಾಮದ ಕೆಲವು ಹಿಂದುಗಳು, ನೂರಾರು ವರ್ಷಗಳ ಹಿಂದಿನ ಈ ಧಾರ್ಮಿಕ ಕಟ್ಟಡದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.


ಈ ಮಸೀದಿಯು ದೇಶದ ಕೋಮು ಸೌಹಾರ್ದತೆಗೆ ಖಂಡಿತಾ ಉತ್ತಮ ಉದಾಹರಣೆ ಆಗಬಲ್ಲದು. ಮಸೀದಿಯ ಜೀರ್ಣೋದ್ಧಾರಕ್ಕೆ ಮುಂದೆ ಬಂದಿರುವ ಗ್ರಾಮಸ್ಥರ ನಂಬಿಕೆಯು ಕೂಡ ಇದೇ ಆಗಿದೆ.


ಮಸೀದಿ ಪುನರ್ ನಿರ್ಮಾಣದ ಕುರಿತು ಮಾತುಕತೆ
ಈಗಾಗಲೇ ಗ್ರಾಮದಲ್ಲಿ ಮಸೀದಿ ಪುನರ್ ನಿರ್ಮಾಣದ ಕುರಿತು ಮಾತುಕತೆ ಆರಂಭವಾಗಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಗ್ರಾಮದ ಹಾಲಿ ಮುಖ್ಯಸ್ಥರ ಪತಿ ಕೂಡ ಆಗಿರುವ ಚೌಧರಿ ನೀರಜ್ ರೋಡ್ ಅವರ ನೇತೃತ್ವದಲ್ಲಿ ಈ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ.


“ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಸಾರುವ ಏಕೈಕ ಕುರುಹಾಗಿ ಉಳಿದಿರುವ ಈ ಮಸೀದಿಯನ್ನು ಸಂರಕ್ಷಿಸುವ ಅಗತ್ಯವಿದೆ ಎಂಬುವುದು ಗೌಸ್ಗಡ್ ಗ್ರಾಮ ಪಂಚಾಯತ್‍ನ ಸದಸ್ಯರೆಲ್ಲರೂ ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Viral Photo: ಭಾರತ-ಪಾಕಿಸ್ತಾನ ವಿಭಜನೆಯಲ್ಲಿ ಕಳೆದು ಹೋಗಿದ್ದ ತಂಗಿ ಮರಳಿ ಸಿಕ್ಕಳು! ಪಟಿಯಾಲ ಬ್ರದರ್ಸ್ ಖುಷ್


ಈ ಗ್ರಾಮದಲ್ಲಿ ಮುಸ್ಲಿಮರು ವಾಸವಿಲ್ಲದೇ ಇದ್ದರೂ, ವಿವಿಧ ಪ್ರದೇಶಗಳ ಮುಸ್ಲಿಮರು ಈ ಮಸೀದಿಯನ್ನು ನೋಡಲು ಗ್ರಾಮಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಾಗಾಗಿ ಈ ಮಸೀದಿಯನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ರೂಪಿಸುವ ಬಗ್ಗೆ ನಾವುಗಳು ಯೋಜನೆ ರೂಪಿಸುತ್ತಿದ್ದೇವೆ” ಎಂದು ಚೌಧರಿ ನೀರಜ್ ರೋಡ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.


ಎರಡು ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡ ಮಸೀದಿ


ಈ ಮಸೀದಿಯು ಸುಮಾರು ಮೂರೂವರೆ ಬಿಘಾ (ಸುಮಾರು ಎರಡು ಎಕರೆಗಳಷ್ಟು) ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟ ಕೆಲವು ಭಾಗಗಳನ್ನು ಒತ್ತೂವರಿ ಕೂಡ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಾರೆ ಅಲ್ಲಿನ ಗ್ರಾಮಸ್ಥರು.


“ಒಂದು ವೇಳೆ ಮಸೀದಿಯ ಜಾಗ, ಹಳ್ಳಿಯ ರೈತರ ಗದ್ದೆಗಳನ್ನು ಒಳಗೊಂಡಿದ್ದರೆ, ಆ ರೈತರ ಜೊತೆ ಮಾತುಕತೆ ನಡೆಸಿ, ಆ ಜಾಗವನ್ನು ತೆರವುಗೊಳಿಸಲು ಪ್ರಯತ್ನಿಸುತ್ತೇವೆ. ಈ ಸ್ಥಳವನ್ನು ಸಂರಕ್ಷಿಸಬೇಕು ಎಂಬುವುದು ನಮ್ಮೆಲ್ಲರ ಬಯಕೆಯಾಗಿದೆ. ಇ ಮಸೀದಿ ದೇಶದಲ್ಲಿ ಕೋಮು ಸೌರ್ಹಾತೆಯ ಉದಾಹರಣೆ ಆಗಬಲ್ಲದು” ಎಂದು ಗ್ರಾಮದ ರೈತ ಸಂಜಯ್ ಚೌಧರಿ ತಿಳಿಸಿದ್ದಾರೆ.


ಇದನ್ನೂ ಓದಿ: Afghanistan: ಬೀದಿಯಲ್ಲಿ ತಿನಿಸು ಮಾರುತ್ತಿರುವ ಟಿವಿ ಆ್ಯಂಕರ್!


ಈ ಮಸೀದಿಯ ಸ್ಥಳದ ಪರಿಸ್ಥಿತಿಯ ಕುರಿತು ಕೂಡ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. “ಈ ಪ್ರದೇಶದ ಸ್ವಚ್ಚತೆಯನ್ನು ನೋಡಿಕೊಳ್ಳಲು 50-60 ಮಂದಿ ಗ್ರಾಮಸ್ಥರ ತಂಡವನ್ನು ರಚಿಸಲಾಗಿದೆ. ಬಹಳಷ್ಟು ಮುಸ್ಲಿಮರು ಈ ಮಸೀದಿಯನ್ನು ನೋಡಲು ಬರುತ್ತಿರುವುದರಿಂದ ಇದರ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಮತ್ತು ಈ ವಿಷಯದಲ್ಲಿ ಸಹಾಯ ಸರಕಾರದಿಂದ ಕೂಡ ನಾವು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಗ್ರಾಮ ಪಂಚಾಯತ್ ಸದಸ್ಯ ಶಿವ್‍ಲಾಲ್ ಹೇಳಿದ್ದಾರೆ.


ಮಸೀದಿ ಬಗ್ಗೆ ಇತಿಹಾಸಕಾರರು ಹೇಳಿದ್ದು ಹೀಗೆ


ಇತಿಹಾಸಕಾರರು ಹೇಳುವ ಪ್ರಕಾರ, ಈ ಮಸೀದಿಯು ನಜೀಬ್ ಉದ್ ದೌಲಾನ ಮೊಮ್ಮಗ ಖಾದಿರ್ ಎಂಬಾತನ ಅರಮನೆಯ ಒಳಗೆ ಕಟ್ಟಲ್ಪಟ್ಟಿತ್ತು. ಕಾಲ ಕ್ರಮೇಣ ಅರಮನೆಯು ಪಾಳು ಬಿದ್ದು, ನಶಿಸಿಹೋಗಿದೆ. ಕೇವಲ ಈ ಶೀಥಿಲಗೊಂಡಿರುವ ಮಸೀದಿ ಮಾತ್ರ ಉಳಿದುಕೊಂಡಿದೆ.ಮಸೀದಿಯ ಪುನರುಜ್ಜೀನವನದ ಕೆಲಸವನ್ನು ಆರಂಭಿಸಲು, ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು