ಹೈದರಾಬಾದ್: ಮುಸ್ಲಿಮರು ಮೂರು ಮದುವೆಯಾಗುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಮುಸ್ಲಿಮರು (Muslims Marriage) ಎರಡು ಮದುವೆಯಾಗಿದ್ದರೂ ಇಬ್ಬರೂ ಹೆಂಡತಿಯರಿಗೂ ನಾವು ಗೌರವ ನೀಡುತ್ತೇವೆ. ಆದರೆ ಹಿಂದೂಗಳು ಒಂದು ಮದುವೆಯಾದರೂ ಮೂವರನ್ನು ಇಟ್ಟುಕೊಂಡಿರುತ್ತಾರೆ ಎಂದು ಉತ್ತರ ಪ್ರದೇಶದ ಎಐಎಂಐಎಂ ರಾಜ್ಯಾಧ್ಯಕ್ಷ ಶೌಕತ್ ಅಲಿ (Uttar Pradesh AIMIM State President Shaukat Ali) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ಎಐಎಂಐಎಂ ರಾಜ್ಯ ಅಧ್ಯಕ್ಷ ಶೌಕತ್ ಅಲಿ ಹಿಜಾಬ್ ನಿಷೇಧದ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಮಾತನಾಡಿದ್ದಾರೆ. "ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ, ಆದರೆ ಸಂವಿಧಾನವು ನಿರ್ಧರಿಸುತ್ತದೆ" ಎಂದು ಶೌಕತ್ ಶೌಕತ್ ಅಲಿ ಪ್ರತಿಕ್ರಿಯಿಸಿದ್ದಾರೆ.
“We ruled for eight hundred years, Hindus used to bow before us with their hands behind them” : #AIMIM's state president Shaukat Ali. pic.twitter.com/h0eROSALLf
— Hemir Desai (@hemirdesai) October 15, 2022
ನಿರ್ಧರಿಸುವುದು ಹಿಂದುತ್ವವಲ್ಲ, ಸಂವಿಧಾನ
ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಸಂವಿಧಾನವು ನಿರ್ಧರಿಸುತ್ತದೆ. ಆದರೆ ಅದನ್ನು ನಿರ್ಧರಿಸುವುದು ಹಿಂದುತ್ವವಲ್ಲ, ಆದರೆ ಬಿಜೆಪಿಯು ಅಂತಹ ವಿಷಯಗಳನ್ನು ಎತ್ತುವ ಮೂಲಕ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಶೌಕತ್ ಅಲಿ ಹೇಳಿದ್ದಾರೆ.
ಶೌಕತ್ ಅಲಿ ವಿರುದ್ಧ ಪೊಲೀಸ್ ಕೇಸ್
ಸದ್ಯ ಪೊಲೀಸರು ಉತ್ತರ ಪ್ರದೇಶ ಎಐಎಂಐಎಂ ರಾಜ್ಯ ಅಧ್ಯಕ್ಷ ಶೌಕತ್ ಅಲಿ ವಿರುದ್ಧಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮದ ಸ್ಥಳ, ಭಾಷೆಯ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡಲು ಪ್ರಚೋದನೆ ನೀಡುವುದು), 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Tipu Express: ಟಿಪ್ಪು ಕಂಡ್ರೆ ಬಿಜೆಪಿಗೆ ಈಗಲೂ ಹೆದರಿಕೆ: ಓವೈಸಿ
ಮುಸ್ಲಿಮರೇ ಕಾಂಡೋಮ್ ಬಳಸೋದು ಹೆಚ್ಚು: ಸಂಸದ ಓವೈಸಿ
ಮುಸ್ಲಿಂ ಧರ್ಮದ ಜನರೇ ಹೆಚ್ಚು ಕಾಂಡೋಮ್ಗಳನ್ನು ಬಳಸುತ್ತಿದ್ದೇವೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (MP Asaduddin Owaisi) ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮುದಾಯ ಆಧಾರಿತ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಮೋಹನ್ ಭಾಗವತ್ ಅವರೇ (RSS Chief Mohan Bhagwat), ಚಿಂತಿಸಬೇಡಿ, ಮುಸ್ಲಿಂ ಜನಸಂಖ್ಯೆ (Muslims Population) ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ಮುಸ್ಲಿಮರ ಒಟ್ಟು ಫಲವತ್ತತೆ ದರವು ಕುಸಿದಿದೆ. ಕಾಂಡೋಮ್ ಅನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು. ಆದರೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: Asaduddin Owaisi: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ
ಕುರಾನ್ನಿಂದ ಉಲ್ಲೇಖವನ್ನು ನೀಡುತ್ತಾ, "ನಾನು ನಿಮ್ಮನ್ನು ಖುರಾನ್ ಓದಲು ಆಹ್ವಾನಿಸುತ್ತೇನೆ. ಭ್ರೂಣವನ್ನು ಕೊಲ್ಲುವುದು ಬಹಳ ದೊಡ್ಡ ಪಾಪ ಎಂದು ಅಲ್ಲಾ ನಮಗೆ ಹೇಳುತ್ತಾನೆ. ಎರಡು ಗರ್ಭಧಾರಣೆಯ ನಡುವೆ ಮುಸ್ಲಿಮರು ಅಂತರ ಕಾಪಾಡುತ್ತಾರೆ. ಜೊತೆಗೆ ಕಾಂಡೋಮ್ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ