Union Budget 2019 | ತೆರಿಗೆ ಕಳ್ಳತನ ತಪ್ಪಿಸಲು ಧರ್ಮಗಳ ದಾರಿ ಹುಡುಕಿದ ಆರ್ಥಿಕ ಸಮೀಕ್ಷೆ

ಭಾರತೀಯ ಸಂಸ್ಕೃತಿಯಲ್ಲಿ ಧರ್ಮಕ್ಕೆ ಪ್ರಾಧಾನ್ಯತೆ ಇರುವ ಹಿನ್ನೆಲೆಯಲ್ಲಿ ಧರ್ಮದ ಮೂಲಕ ಜನರಲ್ಲಿ ಸಾಲದ ಮತ್ತು ತೆರಿಗೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು ಎಂದು ಆರ್ಥಿಕ ಸಮೀಕ್ಷೆಯು ಸಲಹೆ ನೀಡಿದೆ.

Vijayasarthy SN | news18
Updated:July 4, 2019, 8:20 PM IST
Union Budget 2019 | ತೆರಿಗೆ ಕಳ್ಳತನ ತಪ್ಪಿಸಲು ಧರ್ಮಗಳ ದಾರಿ ಹುಡುಕಿದ ಆರ್ಥಿಕ ಸಮೀಕ್ಷೆ
ನಿರ್ಮಲಾ ಸೀತಾರಾಮನ್
  • News18
  • Last Updated: July 4, 2019, 8:20 PM IST
  • Share this:
ನವದೆಹಲಿ: ಬಜೆಟ್ ಮಂಡನೆಗೆ ಮುನ್ನಾ ದಿನವಾದ ಗುರುವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯು ಕೆಲ ಹೊಸ ವಿಚಾರಗಳಿಂದ ಗಮನ ಸೆಳೆದಿದೆ. ತೆರಿಗೆ ಕಳ್ಳತನ ಅಥವಾ ತೆರಿಗೆ ವಂಚನೆಯು ದೇಶದ ಅತ್ಯಂತ ಸಾಮಾನ್ಯ ಆರ್ಥಿಕ ಅಪರಾಧಗಳಲ್ಲೊಂದೆನಿಸಿದೆ. ಹೆಚ್ಚೆಚ್ಚು ಜನರನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರವು ಹವಣಿಸುತ್ತಿದೆ. ಹಾಗೆಯೇ, ಸಾಲದ ಮರುಪಾವತಿಯಾಗದೇ ಇರುವುದೂ ಕೂಡ ದೇಶದ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ಎಂ. ಸುಬ್ರಮಣಿಯನ್ ನೇತೃತ್ವದಲ್ಲಿ ನಡೆಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಈ ಸಮಸ್ಯೆಗಳಿಗೆ ಧರ್ಮಗಳ ದಾರಿ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

ಹಿಂದೂ, ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳ ಬೋಧನೆಯಲ್ಲಿರುವ ಕೆಲ ಅಂಶಗಳನ್ನು ಉಲ್ಲೇಖಿಸಿ ಜನರ ಮನಃ ಪರಿವರ್ತನೆ ಮಾಡಬಹುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ.

ಇದನ್ನೂ ಓದಿ: Union Budget 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್; ಮುಂದಿದೆ ಸಾಲು ಸಾಲು ಸವಾಲುಗಳು!

ಹಿಂದೂ ಧರ್ಮದಲ್ಲಿ…

ಸಾಲ ಅಥವಾ ಯಾವುದೇ ರೂಪದಲ್ಲಿ ಉಳಿಸಿಕೊಳ್ಳುವ ಋಣವು ಆ ವ್ಯಕ್ತಿಗೆ ಮೋಕ್ಷ ಸಿಗದಂತೆ ಮಾಡುತ್ತದೆ ಎಂಬ ಹಿಂದೂ ಧರ್ಮೋಕ್ತಿಯನ್ನು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ.

ಒಬ್ಬ ವ್ಯಕ್ತಿಯು ಸಾಲ ಮಾಡಿದರೆ ಅದು ಋಣ. ಈ ಋಣವನ್ನು ಈ ಜೀವಿತಾವಧಿಯಲ್ಲೇ ತೀರಿಸಬೇಕು. ಋಣ ಉಳಿಸಿಕೊಂಡು ಸಾವನ್ನಪ್ಪಿದರೆ ಅವರ ಆತ್ಮಕ್ಕೆ ಮುಕ್ತಿ ಸಿಕ್ಕೋದಿಲ್ಲ. ಸಾಲ ಉಳಿಸಿಕೊಂಡು ವ್ಯಕ್ತಿ ಸತ್ತಾಗ, ಆತನ ಮಕ್ಕಳು ಅಥವಾ ವಾರಸುದಾರರು ಆ ಸಾಲ ತೀರಿಸಿ ಋಣ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಕ್ಕುವುದಿಲ್ಲ ಎಂದು ಹಿಂದೂ ಧರ್ಮದ ಸೂಕ್ತಿಯೊಂದನ್ನು ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Economic Survey - ನಿರುದ್ಯೋಗ ಸಮಸ್ಯೆ ನಿವಾರಣೆಗೆ ಚೀನಾ ಮಾದರಿ? ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರದ ಚಿತ್ತ
Loading...

ಇಸ್ಲಾಮ್ ಧರ್ಮದಲ್ಲಿ…

ಓ ಅಲ್ಲಾಹು, ನನ್ನ ಸಾಲದ ಹೊರೆಯೊಂದಿಗೆ  ನಿನ್ನಲ್ಲಿ ಮೊರೆ ಹೋಗುತ್ತಿದ್ದೇನೆ ಎಂದು ಪ್ರವಾದಿ ಮೊಹಮ್ಮದ್ ಹೇಳಿದರೆಂದು ಕುರಾನ್ ಗ್ರಂಥದಲ್ಲಿ ಉಲ್ಲೇಖವಾಗಿದೆ. ಒಬ್ಬ ವ್ಯಕ್ತಿಯ ಸಾಲ ತೀರುವವರೆಗೂ ಆತ ಸ್ವರ್ಗಕ್ಕೆ ಹೋಗಲಾರ. ಆತನ ಸಾಲ ತೀರಿಸಲು ಆತನ ಆಸ್ತಿಯೆಲ್ಲವನ್ನೂ ಬಳಸಬೇಕು. ಆದರೂ ಸಾಲ ತೀರದಿದ್ದರೆ ಆ ವ್ಯಕ್ತಿಯ ವಾರಸುದಾರರು ಸ್ವಯಿಚ್ಛೆಯಿಂದ ತಮ್ಮ ದಿವಂಗತ ತಂದೆಯ ಸಾಲವನ್ನು ತೀರಿಸಬೇಕು ಎಂದು ಕುರಾನ್​ನಲ್ಲಿ ಬರೆಯಲಾಗಿದೆ. ಇದನ್ನು ಆರ್ಥಿಕ ಸಮೀಕ್ಷೆಯಲ್ಲಿ ಬಳಸಲಾಗಿದೆ.

ಕ್ರೈಸ್ತ ಧರ್ಮದಲ್ಲಿ…

ಪರಸ್ಪರ ಪ್ರೀತಿಸುವ ಋಣ ಬಿಟ್ಟು ಉಳಿದ ಯಾವ ಋಣವೂ ಇರಬಾರದು… ಸಾಲ ಪಡೆದು ತೀರಿಸದೇ ಇರುವವರು ದುಷ್ಟರು ಎಂದು ಬೈಬಲ್ ಗ್ರಂಥದಲ್ಲಿ ತಿಳಿಸಲಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಧರ್ಮಕ್ಕೆ ಪ್ರಾಧಾನ್ಯತೆ ಇರುವ ಹಿನ್ನೆಲೆಯಲ್ಲಿ ಧರ್ಮದ ಮೂಲಕ ಜನರಲ್ಲಿ ಸಾಲದ ಮತ್ತು ತೆರಿಗೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬಹುದು ಎಂದು ಆರ್ಥಿಕ ಸಮೀಕ್ಷೆಯು ಸಲಹೆ ನೀಡಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...