Supreme Court: ಹಿಂದೂ ಧರ್ಮ ಶ್ರೇಷ್ಠ ಧರ್ಮ, ಇಲ್ಲಿ ಧರ್ಮಾಂಧತೆಗೆ ಅವಕಾಶವಿಲ್ಲ -ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌

" ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಅದರ ಮೌಲ್ಯವನ್ನು ಕಡಿಮೆ ಮಾಡಬೇಡಿ. ಭಾರತ ಇಂದು ಜಾತ್ಯತೀತ ರಾಷ್ಟ್ರವಾಗಿದೆ, ಆದ್ದರಿಂದ ಇಡೀ ಜಗತ್ತು ಯಾವಾಗಲೂ ನಮ್ಮತ್ತ ನೋಡುತ್ತದೆ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದೇನೆ. ನೀವು ಅದರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಿ, ಬದಲಾಗಿ ನಿರ್ದಿಷ್ಟ ಉದ್ದೇಶಕ್ಕಾಗಿ ಅದನ್ನು ಬಳಸಬೇಡಿ" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.

ಮುಂದೆ ಓದಿ ...
  • Share this:

ನವದೆಹಲಿ: ವಿದೇಶಿ ಆಕ್ರಮಣಕಾರರು (Foreign Invaders) ದೇಶದಲ್ಲಿ ಬದಲಿಸಿರುವ ಐತಿಹಾಸಿಕ (Historical), ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಪತ್ತೆಹಚ್ಚಲು ಮತ್ತು ಬದಲಾಯಿಸಲು ಮರುನಾಮಕರಣ ಆಯೋಗವನ್ನು (Renaming Commission) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ (Central Government) ನಿರ್ದೇಶನ ನೀಡುವಂತೆ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(PIL) ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವನ್ನು ಪ್ರಶ್ನಿಸಿ, " ಇದು ದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನುಂಟು ಮಾಡುವ ಸಮಸ್ಯೆಗಳನ್ನು ಜೀವಂತವಾಗಿರುಸುತ್ತದೆ " ಎಂದು ತಿಳಿಸಿದೆ.


ಹಿಂದೂ ಧರ್ಮ ಶ್ರೇಷ್ಠ ಧರ್ಮ


" ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಅದರ ಮೌಲ್ಯವನ್ನು ಕಡಿಮೆ ಮಾಡಬೇಡಿ. ಭಾರತ ಇಂದು ಜಾತ್ಯತೀತ ರಾಷ್ಟ್ರವಾಗಿದೆ, ಆದ್ದರಿಂದ ಇಡೀ ಜಗತ್ತು ಯಾವಾಗಲೂ ನಮ್ಮತ್ತ ನೋಡುತ್ತದೆ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದೇನೆ. ನೀವು ಅದರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಿ, ಬದಲಾಗಿ ನಿರ್ದಿಷ್ಟ ಉದ್ದೇಶಕ್ಕಾಗಿ ಅದನ್ನು ಬಳಸಬೇಡಿ" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.


ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದ ಉಪಾಧ್ಯಾಯ


ಉಪಾಧ್ಯಾಯ ಅವರು ಈ ತಿಂಗಳ ಆರಂಭದಲ್ಲಿ ವಿದೇಶಿ ಆಕ್ರಮಣಕಾರರು ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಬದಲಾಯಿಸಿದ್ದಾರೆ. ಹಾಗಾಗಿ ಆ ಮೂಲ ಹೆಸರನ್ನು ಮತ್ತೆ ಬದಲಾಯಿಸಲು ಹಾಗೂ ಇದರ ಬಗ್ಗೆ ಅಧ್ಯಯನ ಮಾಡಲು ' ಮರುನಾಮಕರಣ ಆಯೋಗ'ವನ್ನು ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಲ್ಲಿಸಿದ್ದರು.


ಇದನ್ನೂ ಓದಿ: Explained: ಏಕರೂಪ ನಾಗರಿಕ ಸಂಹಿತೆ ಎಂದರೇನು? ಮೋದಿ ಸರ್ಕಾರಕ್ಕೆ ಬಿಗ್ ಚಾಲೆಂಜ್ ಆಗಿದ್ದು ಹೇಗೆ?


ಇತ್ತೀಚೆಗೆ ರಾಷ್ಟ್ರಪತಿ ಭವನದ ಆವರಣದಲ್ಲಿರುವ ಮೊಘಲ್ ಗಾರ್ಡನ್ ಹೆಸರನ್ನು ಕೇಂದ್ರ ಸರ್ಕಾರ ಅಮೃತ್ ಉದ್ಯಾನ್ ಎಂದು ಮರುನಾಮಕರಣ ಮಾಡಿದೆ. ಆದರೆ ವಿದೇಶಿ ಆಕ್ರಮಣಕಾರರ ಹೆಸರುಗಳಿರುವ ನಗರಗಳು ಮತ್ತು ರಸ್ತೆಗಳ ಹೆಸರನ್ನು ಬದಲಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹೆಸರುಗಳನ್ನು ಮುಂದುವರಿಸುವುದು ದೇಶದ ಸಾರ್ವಭೌಮತೆಗೆ ಮತ್ತು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿರುವ ಇತರೆ ನಾಗರಿಕ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಪಿಐಎಲ್​ನಲ್ಲಿ ತಿಳಿಸಿದ್ದಾರೆ.
ಮೂಲ ಹೆಸರಿನ ಸಂಶೋಧನೆಗೆ ಮನವಿ


ಸಂವಿಧಾನದ ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಪಡೆಯಲು ವಿದೇಶಿ ಆಕ್ರಮಣಕಾರರು ಮರುನಾಮಕರಣ ಮಾಡಿದ ಪ್ರಾಚೀನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಸಂಶೋಧಿಸಿ ಪ್ರಕಟಿಸುವಂತೆ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣೆಗೆ ನಿರ್ದೇಶಿಸಬಹುದು. ನಾವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ, ಆದರೆ ಈಗಲೂ ನಮ್ಮ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಕ್ರೂರ ವಿದೇಶಿ ಆಕ್ರಮಣಕಾರರು, ಅವರ ಸೇವಕರು ಮತ್ತು ಕುಟುಂಬ ಸದಸ್ಯರ ಹೆಸರುಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.


ಸಮಾಧಿಯಾಗಬೇಕಾದ ವಿಷಯಗಳನ್ನು ಕೆದಕಬಾರದು


ಭಾರತ ಜಾತ್ಯತೀತ ದೇಶ, ಇದೊಂದು ಜಾತ್ಯತೀತ ವೇದಿಕೆ. ನಾವು ಸಂವಿಧಾನ ಮತ್ತು ಎಲ್ಲಾ ವಿಭಾಗಗಳನ್ನು ರಕ್ಷಿಸಬೇಕು. ನೀವು ಸಮಾಧಿ ಮಾಡಬೇಕಾದ ವಿಷಯಗಳನ್ನು ಪುನಃ ಕೆದಕಲು ಬಯಸುತ್ತಿದ್ದೀರಾ, ಇದರಿಂದ ಅಸಮಾಧಾನವನ್ನು ಸೃಷ್ಟಿಯಾಗಬಹುದು ಎಂದು ನ್ಯಾಯಾಲಯವು ಉಪಾಧ್ಯಾಯರಿಗೆ ಹೇಳಿದೆ.


ಭಾರತವು ಎಲ್ಲರನ್ನೂ ಒಟ್ಟುಗೂಡಿಸಿದ ಕಾರಣ ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದೆ. ಅದರಿಂದಾಗಿ ನಾವು ಒಟ್ಟಿಗೆ ಬಾಳಲು ಸಾಧ್ಯವಾಗಿದೆ. ಬ್ರಿಟೀಷರ ಒಡೆದು ಆಳುವ ನೀತಿ ನಮ್ಮ ಸಮಾಜದಲ್ಲಿ ಒಡಕು ತಂದಿತು. ನಾವು ಮತ್ತೆ ಹಿಂದಕ್ಕೆ ಹೋಗಬಾರದು ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಉಪಾಧ್ಯಾಯರಿಗೆ ತಿಳಿಸಿದರು.

Published by:Rajesha M B
First published: