• Home
  • »
  • News
  • »
  • national-international
  • »
  • Hindu Word: ಹಿಂದೂ ಪದದ ಅರ್ಥವೇನು? ಪುರಿಯ ಶಂಕರಾಚಾರ್ಯ ಸ್ವಾಮೀಜಿ ವಿವರಿಸಿದ್ದಾರೆ ನೋಡಿ

Hindu Word: ಹಿಂದೂ ಪದದ ಅರ್ಥವೇನು? ಪುರಿಯ ಶಂಕರಾಚಾರ್ಯ ಸ್ವಾಮೀಜಿ ವಿವರಿಸಿದ್ದಾರೆ ನೋಡಿ

ಪುರಿ ಶಂಕರಾಚಾರ್ಯ ಮತ್ತು ಸತೀಶ್ ಜಾರಕಿಹೊಳಿ

ಪುರಿ ಶಂಕರಾಚಾರ್ಯ ಮತ್ತು ಸತೀಶ್ ಜಾರಕಿಹೊಳಿ

ಶಂಕರಾಚಾರ್ಯರ ಪ್ರಕಾರ, ಹಿಂದೂ ಶಬ್ದಕ್ಕೆ ಭಾರತೀಯ ಮೂಲವಿದೆ. ಮುಸ್ಲಿಮರ ಮುಹಮ್ಮದ್ ಪೈಗಂಬರ್ ಮತ್ತು ಕ್ರಿಶ್ಚಿಯನ್ನರ ಏಸುಕ್ರಿಸ್ತ ಬರುವ ಮುನ್ನವೇ ಹಿಂದೂ ಶಬ್ದದ ಬಳಕೆ ಇತ್ತು.

  • Share this:

    ದೆಹಲಿ: ಕರ್ನಾಟಕ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಹಿಂದೂ (Hindu) ಎಂಬುದು ಪರ್ಷಿಯನ್ ಪದವಾಗಿದ್ದು ಅದು ಭಾರತದಲ್ಲಿ ಹುಟ್ಟಿಲ್ಲ ಎಂದು ಹೇಳಿಕೆ ನೀಡಿ ರಾಜಕೀಯ ವಾಗ್ಯುದ್ಧಕ್ಕೆ ಕಾರಣರಾಗಿದ್ದಾರೆ. ಹಿಂದೂ ಎಂಬುದು ಅಶ್ಲೀಲ ಪದ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ವಿರೋಧಕ್ಕೆ ಗುರಿಯಾಗಿರುವ ಸತೀಶ್ ಜಾರಕಿಹೊಳಿ ಅವರ (Satish Jarkiholi) ಈ ಹೇಳಿಕೆಗೆ ಈಗಾಗ್ಲೇ ಅನೇಕ ಪರ-ವಿರೋಧಗಳು ಕೇಳಿ ಬರುತ್ತಿವೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಹಿಂದೂ ಪದದ ಬಗ್ಗೆ ಜೋರಾದ ಚರ್ಚೆ ಆರಂಭವಾಗಿದೆ. ಅಲ್ಲದೆ, 2017ರಲ್ಲಿ ಪುರಿಯ ಶಂಕರಾಚಾರ್ಯ ಸ್ವಾಮೀಜಿಗಳು ನೀಡಿದ್ದ ಭಾಷಣವೊಂದರ ವಿಡಿಯೋ ಈಗ ವೈರಲ್‌ ಆಗುತ್ತಿದೆ.


    ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನು ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.


    ʼಹಿಂದೂʼ ಪದದ ಬಗ್ಗೆ ಪುರಿಯ ಶಂಕರಾಚಾರ್ಯ ಸ್ವಾಮೀಜಿಗಳು ಹೇಳಿದ್ದೇನು?ಆಗಸ್ಟ್ 21, 2017ರಲ್ಲಿ, ಪುರಿಯ ಶಂಕರಾಚಾರ್ಯರು ಪ್ರಶ್ನೆಯೊಂದಕ್ಕೆ ಉತ್ತರವಾಗಿ, ಭಾರತೀಯ ಗ್ರಂಥಗಳಲ್ಲಿ ಹಿಂದೂ ಪದದ ಅರ್ಥವನ್ನು ವಿವರಿಸಿದ್ದಾರೆ. ಶಂಕರಾಚಾರ್ಯರ ಪ್ರತಿಕ್ರಿಯೆಯ ವಿಡಿಯೋವನ್ನು ಪುರಿಯ ಗೋವರ್ಧನ ಮಠವು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ.


    ಸಂಸ್ಕೃತದಲ್ಲಿ ಹಿಂದೂ ಎಂದರೆ ಏನು? ವೈದಿಕ ಗ್ರಂಥಗಳಲ್ಲಿ ಅದರ ಉಲ್ಲೇಖ ಮತ್ತು ಪರ್ಷಿಯನ್ ಭಾಷೆಯಲ್ಲಿ ಹಿಂದೂ ಪದದ ಮೂಲದ ಬಗ್ಗೆ ಆಗಾಗ್ಗೆ ಹೇಳಲಾದ ಸಿದ್ಧಾಂತಗಳ ಬಗ್ಗೆ ಪ್ರಶ್ನಿಸಲಾಯಿತು.


    "ಹಿಂದೂ ಶಬ್ದಕ್ಕೆ ಭಾರತೀಯ ಮೂಲವಿದೆ"
    ಶಂಕರಾಚಾರ್ಯರ ಪ್ರಕಾರ, ಹಿಂದೂ ಶಬ್ದಕ್ಕೆ ಭಾರತೀಯ ಮೂಲವಿದೆ. ಮುಸ್ಲಿಮರ ಮುಹಮ್ಮದ್ ಪೈಗಂಬರ್ ಮತ್ತು ಕ್ರಿಶ್ಚಿಯನ್ನರ ಏಸುಕ್ರಿಸ್ತ ಬರುವ ಮುನ್ನವೇ ಹಿಂದೂ ಶಬ್ದದ ಬಳಕೆ ಇತ್ತು. ಇದು ಸೌಮ್ಯ, ಸುಂದರ, ಸ್ನೇಹಪರ, ಅಲಂಕೃತ, ನ್ಯಾಯಸಮ್ಮತ, ಮತ್ತು ಶತ್ರುಗಳನ್ನು ಕೊಲ್ಲುವ ಅರ್ಥದಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂದಿದ್ದಾರೆ.



    ಹಿಂದೂ ಪದದ ಉಲ್ಲೇಖ ಇಲ್ಲೂ ಇದೆ
    ಅಲೆಕ್ಸಾಂಡರ್ ಭಾರತಕ್ಕೆ ಬಂದಾಗ, ಹಿಂದೂಖುಷ್ ಪರ್ವತ ಅಥವಾ ಹಿಂದ್‌ ಕೂಟ ಪರ್ವತಕ್ಕೆ ಭೇಟಿ ನೀಡುವ ಆಸೆ ಇಟ್ಟುಕೊಂಡಿದ್ದ ಎಂಬ ಉಲ್ಲೇಖಗಳಿವೆ. ಪಾರ್ಸಿಯವರ ಗ್ರಂಥಗಳಲ್ಲಿ ಒಂದಾದ 'ಶಾತಿರ್' ನಲ್ಲಿ ಹಿಂದೂ ಪದದ ಉಲ್ಲೇಖವಿದೆ.


    ಪಾರ್ಸಿಯವರ ಅವೆಸ್ತಾದಲ್ಲಿಯೂ ಹಲವಾರು ಹಿಂದೂ ಪದಗಳಿವೆ. ಅಲೆಕ್ಸಾಂಡರ್ ಬರುವ ಮುನ್ನವೇ, ನೂರಾರು ವರ್ಷಗಳಿಂದ ಹಲವಾರು ವೈದಿಕ ಪದಗಳಿದ್ದು ಈ ಶಬ್ದಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಸ್ವಾಮೀಜಿಗಳು ಹೇಳಿದ್ದಾರೆ.


    "ಕಲ್ಕಿ ಪುರಾಣದಲ್ಲಿಯೂ ಹಿಂದ್ವೋ ಪದ ಬಳಕೆ"
    ಕಲ್ಕಿ ಪುರಾಣದಲ್ಲಿಯೂ ಹಿಂದ್ವೋ ಪದವನ್ನು ಬಳಕೆ ಮಾಡಲಾಗಿದೆ. ಶರಗಂಧರ್ ಪದ್ಧತಿಯೂ ಹಿಂದ್ವೋ ಎಂಬ ಪದವನ್ನು ಬಳಕೆ ಮಾಡಿದೆ. ಹಿಂದೆ ಜನರು ತಮ್ಮನ್ನು ವೇದ ಮಾರ್ಗೀಯರೆಂದೇ ಗುರುತಿಸಿಕೊಳ್ಳುತ್ತಿದ್ದರು. ವೇದಗಳ ಹಾದಿಯಲ್ಲಿ ನಡೆಯುವವರನ್ನು ಹಿಂದೂ ಎಂದು ಕರೆಯುತ್ತಾರೆ. ಹಿಂದೂ ಎಂದರೆ ಆರ್ಯರು. ಇವನ್ನು ಇಂದು ಸಿಂಧು ಸಮಾನಾರ್ಥಕ ಪದಗಳೆಂದು ಪರಿಗಣಿಸಲಾಗಿದೆ, ಇವೆರಡೂ ಸಂಸ್ಕೃತ ಪದಗಳಾಗಿವೆ ಎಂದಿದ್ದಾರೆ.


    ಹೀಗೂ ಅರ್ಥ ಇದೆಯಂತೆ
    ಹಾಗೆಯೇ ರಾಮ್ಕೋಶ ಮತ್ತು ಪಾರಿಜಾತರಣ್ ಎಂಬ ನಾಟಕದಲ್ಲಿ ಹಿಂದೂ ಪದ ಬಳಕೆ ಮಾಡಲಾಗಿದೆ. ʼಮಾಧವದಿಗ್ವಿಜಯ'ದಲ್ಲಿ ಹಿಂದೂಗಳ ವಿಸ್ತಾರವಾದ ವ್ಯಾಖ್ಯಾನ ಲಭ್ಯವಿದೆ. ಅಲ್ಲದೆ ಯಾವೊಬ್ಬ ವ್ಯಕ್ತಿ ವೇದದ ಬೀಜಾಕ್ಷರ ಮಂತ್ರಗಳಾದ ʼಓಂʼ ಅನ್ನು ಬಳಕೆ ಮಾಡುತ್ತಾನೆಯೋ, ಯಾರಿಗೆ ಪುನರ್ಜನ್ಮದ ಮೇಲೆ ನಂಬಿಕೆ ಇರುತ್ತದೆಯೋ, ಗೋವನ್ನು ಪೂಜಿಸುವಾತ, ಗಂಗೆಯನ್ನು ಪೂಜೆ ಮಾಡುವಾತ, ಭಾರತೀಯ ಸಂಪ್ರದಾಯದ ಪ್ರಕಾರ ವೇದಿಕ್ ಋಷಿಗಳನ್ನು ತನ್ನ ಗುರುವೆಂದು ನಂಬುವ, ಹಿಂಸಾತ್ಮಕ ಪ್ರಾಣಿಗಳನ್ನು ಕೊಲ್ಲುವ ಸಾಮರ್ಥ್ಯವಿರುವಂತಹ ಕ್ಷತ್ರಿಯ ಧರ್ಮದ ಉದ್ಭಾಷಕ್ ಆಗಿರುವವರನ್ನು ಹಿಂದೂ ಎಂದು ಕರೆಯಲಾಗುತ್ತದೆ ಎಂದು ಶಂಕರಾಚಾರ್ಯ ಸ್ವಾಮೀಜಿಗಳು ವಿವರಿಸಿದ್ದಾರೆ.


    ಇದನ್ನೂ ಓದಿ: Satish Jarkiholi: ಸತೀಶ್ ಜಾರಕಿಹೊಳಿ ವಿರುದ್ಧ ಕೇಸರಿ ಪಡೆ ವಾಗ್ದಾಳಿ; ಯಾರು, ಏನ್ ಹೇಳಿದ್ರು?


    ಇತಿಹಾಸಕಾರರು ಹೇಳೋದೇನು?
    ಆದರೂ, ಕೆಲವು ಇತಿಹಾಸಕಾರರ ಪ್ರಕಾರ ಹಿಂದೂ ಎಂಬ ಪದವನ್ನು ಬಳಸಲು ಆರಂಭಿಸಿದ್ದು ಪರ್ಷಿಯನ್ನರು. ಸಿಂಧು ಎಂಬ ಪದ ಪರ್ಷಿಯನ್ ಭಾಷೆಯಲ್ಲಿ ಹಿಂದೂವಾಗಿ ಬದಲಾಯಿತು ಎಂದು ಹೇಳುತ್ತಾರೆ.


    ಓಪನ್ ಸೋರ್ಸ್ ಸಾಹಿತ್ಯದ ಪ್ರಕಾರ, ಪರ್ಷಿಯನ್ನರು ಹಿಂದೂ ಪದವನ್ನು ಮೊದಲು ಬಳಸಿದವರು ಎಂದು ನಂಬಲಾಗಿದೆ. ಡೇರಿಯಸ್ I ರ 6 ನೇ ಶತಮಾನದ BCE ಶಾಸನವು 'ಹಿಂದೂ' ಅನ್ನು ಅವನ ಸಾಮ್ರಾಜ್ಯದ ಭಾಗವೆಂದು ಪಟ್ಟಿಮಾಡಿದೆ.


    ಇದನ್ನೂ ಓದಿ: Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ


    ತಮಿಳುನಾಡಿನ ರಾಜ್ಯ ಶಿಕ್ಷಣದಲ್ಲೂ ಹಿಂದೂ ಪದ ಪರ್ಷಿಯಾದಿಂದ ಬಂದಿದ್ದು ಎಂದು ಉಲ್ಲೇಖಿಸಲಾಗಿದೆ. ಸಂಸ್ಕೃತದಲ್ಲಿ, ಸಿಂಧು ಎಂದರೆ ಸಮುದ್ರ, ಸಿಂಧೂ ಎಂಬ ಬೃಹತ್ ನದಿಯ ವಿವರಣೆ ಕೂಡ ಇದೆ.

    Published by:ಗುರುಗಣೇಶ ಡಬ್ಗುಳಿ
    First published: