ಇಸ್ಲಾಮಾಬಾದ್: ಹಿಂದೂ ಮಹಿಳೆ (Hindu Women) ಮೇಲೆ ಅತ್ಯಾಚಾರವೆಸಗಿ (Rape) ಭೀಕರವಾಗಿ ಹತ್ಯೆಗೈದಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ. ಪಾಕಿಸ್ತಾನದ ಸಿಂಧ್ನ (Sindh) ಸಿಂಝೋರೋ ಪಟ್ಟಣದಲ್ಲಿ (Sinjhoro town) ಈ ಘಟನೆ ವರದಿಯಾಗಿದ್ದು, ಹಲವಾರು ಮಂದಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ಮಹಿಳೆಯ ಸ್ತನಗಳನ್ನು ಕತ್ತರಿಸಿ, ಶಿರಚ್ಛೇದ ಮಾಡಲಾಗಿದೆ. ಇಷ್ಟೇ ಅಲ್ಲ ಮುಖದ ಚರ್ಮ ಸುಲಿಯಲಾಗಿದೆ ಎನ್ನಲಾಗಿದೆ. ಮೃತ ಮಹಿಳೆಯನ್ನು ದಯಾ ಬೆಲ್(40) ಎಂದು ಗುರುತಿಸಲಾಗಿದ್ದು, ಅಲ್ಪಸಂಖ್ಯಾತರ ಗುಂಪಿಗೆ ಸೇರಿರುವ ಈ ಮಹಿಳೆ ವಿಧವೆಯಾಗಿದ್ದರು (Widow) ಮತ್ತು ತಮ್ಮ ನಾಲ್ಕು ಮಕ್ಕಳೊಂದಿಗೆ (Children) ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು.
ಘಟನೆ ಬಗ್ಗೆ ಮೊದಲ ಬಾರಿಗೆ ಧನಿ ಎತ್ತಿದ ಸೆನೆಟರ್ ಕೃಷ್ಣ ಕುಮಾರಿ
ಮೊದಲ ಬಾರಿಗೆ ಈ ಕುರಿತಂತೆ ಪಾಕಿಸ್ತಾನದ ಏಕೈಕ ಹಿಂದೂ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಅವರು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮಹಿಳೆಯನ್ನು ಭೀಕರವಾಗಿ ಹತ್ಯೆಗೈದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Daya Bhel 40 years widow brutally murdered and body was found in very bad condition. Her head was separated from the body and the savages had removed flesh of the whole head. Visited her village Police teams from Sinjhoro and Shahpurchakar also reached. pic.twitter.com/15bIb1NXhl
— Krishna Kumari (@KeshooBai) December 29, 2022
ಭೀಕರ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಬರ್ಬರವಾಗಿ ಹತ್ಯೆಗೈದಿರುವ ದಯಾ ಭೇಲ್ ಮೃತದೇಹ ಅತ್ಯಂತ ಭೀಕರವಾಗಿ ಪತ್ತೆಯಾಗಿದ್ದು, ಆಕೆಯ ತಲೆ ದೇಹದಿಂದ ಬೇರ್ಪಟ್ಟಿದೆ ಮತ್ತು ಆರೋಪಿಗಳು ತಲೆಯ ಮಾಂಸವನ್ನು ಸುಲಿದಿದ್ದಾರೆ. ಇನ್ನೂ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದುವರೆಗೆ ಯಾವುದೇ ನೆರವಿಗೆ ಬರದ ಸರ್ಕಾರ
ಹಿಂದೂಗಳ ಮೇಲೆ ಪಾಕಿಸ್ತಾನದಲ್ಲಿ ಸತತ ದಾಳಿ ನಡೆಯುತ್ತಿದ್ದರೂ ಇದುವರೆಗೆ ಯಾವುದೇ ಸರ್ಕಾರ ಹಿಂದೂಗಳ ನೆರವಿಗೆ ನಿಂತಿಲ್ಲ ಅನ್ನೋ ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದಾಳಿ, ಮತಾಂತರ, ಹತ್ಯೆಗಳು ನಡೆಯುತ್ತಲೇ ಇದೆ.
ಘಟನೆ ಬಗ್ಗೆ ಮಾಹಿತಿ ಇಲ್ಲ ಅಂದ ವಿದೇಶಾಂಗ ಸಚಿವಾಲಯ
ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯವು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದೆ. ಈ ಘಟನೆ ಬಗ್ಗೆ ನಮಗೆ ಯಾವುದೇ ನಿರ್ದಿಷ್ಟ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದೆ. ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ಪಾಕಿಸ್ತಾನ ಹೊಂದಿದೆ ಎಂದು ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಈ ಮುನ್ನ ಮಾರ್ಚ್ನಲ್ಲಿ 18 ವರ್ಷದ ಹಿಂದೂ ಹಡುಗಿ ಪೂಜಾಳನ್ನು ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ್ದರು. ಮತಾಂತರ ಮಾಡಿ ಮದುವೆಯಾಗುವಂತೆ ಹಲ್ಲೆ ನಡೆಸಲಾಗಿತ್ತು. ಈ ವೇಳೆ ತೀವ್ರ ವಿರೋಧ ತೋರಿದ್ದ ಹುಡುಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಮದುವೆ ಮನೆಯಿಂದ ಹಿಂದೂ ಯುವತಿ ಅಪಹರಿಸಿ ಮತಾಂತರ
ಪಾಕಿಸ್ತಾನದಲ್ಲಿ 24 ವರ್ಷದ ಹಿಂದೂ ಯುವತಿಯನ್ನು ಆಕೆಯ ಮದುವೆ ಸ್ಥಳದಿಂದಲೇ ಅಪಹರಿಸಿದ ಶಸ್ತ್ರಧಾರಿಗಳು, ಬಲವಂತವಾಗಿ ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಮನೊಬ್ಬನ ಜತೆ ವಿವಾಹ ಮಾಡಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: Pakistan Minister: ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ ಅನ್ನೋದು ಭಾರತಕ್ಕೆ ಗೊತ್ತಿರಲಿ! ಪಾಕ್ ಸಚಿವೆಯಿಂದ ಎಚ್ಚರಿಕೆ
ಮುಸ್ಲಿಂ ಯುವಕನೊಂದಿಗೆ ಬಲವಂತವಾಗಿ ಹಿಂದೂ ಯುವತಿ ಮದುವೆ
15 ವರ್ಷದ ಹಿಂದೂ ಯುವತಿಯನ್ನು ಸಿಂಧ್ ಪ್ರಾಂತ್ಯದಲ್ಲೇ ಅಪಹರಿಸಿ ಹಾಗೂ ಮತಾಂತರಿಸಿ ಮುಸ್ಲಿಮನೊಬ್ಬನಿಗೆ ವಿವಾಹ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಸಿಂಧ್ ಪ್ರಾಂತ್ಯದ ಮತಿಯಾರಿ ಜಿಲ್ಲೆಯ ಹಾಲಾ ಪಟ್ಟಣದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಂಧ್ ಅಲ್ಪಸಂಖ್ಯಾತ ವ್ಯವಹಾರ ಸಚಿವ ಹರಿರಾಂ ಕಿಶೋರಿ ಅವರು ಪೊಲೀಸರಿಂದ ಘಟನೆಯ ವರದಿ ಬಯಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ