Communal Harmony: ತಂದೆಯ ಕೊನೆಯಾಸೆ ಈಡೇರಿಸಲು ಈದ್ಗಾಗೆ ಭೂಮಿ ದಾನ ಮಾಡಿದ ಹಿಂದೂ ಸೋದರಿಯರು

ಸುಮಾರು 20 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಅಂತಿಮ ಆಸೆಯಂತೆ . 2 ಕೋಟಿ ರೂಪಾಯಿ ಮೌಲ್ಯದ 2.1 ಎಕರೆ ಭೂಮಿಯನ್ನು ಈದ್ಗಾಗೆ ದಾನ ಮಾಡಿದ್ದಾರೆ ಮಕ್ಕಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ (Communal Riots) , ಜಾತಿ ವೈಷಮ್ಯ ಮುಂತಾದ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಆದರೆ, ಮಹಿಳೆಯರಿಬ್ಬರು ತಮ್ಮ ತಂದೆಯ ಕೊನೆಯ ಆಸೆ (Last Wish) ಈಡೇರಿಸಲು ಕೋಮು ಸಾಮರಸ್ಯ (Communal Harmony) ಮೆರೆದಿದ್ದಾರೆ. ಹೌದು, ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರ ಎಂಬ ಸಣ್ಣ ಪಟ್ಟಣದಲ್ಲಿ ಸಾವಿರಾರು ಮುಸ್ಲಿಮರ ಹೃದಯವನ್ನು ಗೆದ್ದಿದ್ದಾರೆ. 

62 ವರ್ಷದ ಅನಿತಾ ಮತ್ತು ಆಕೆಯ ಸಹೋದರಿ 57 ವರ್ಷದ ಸರೋಜ್. ಇದಕ್ಕೆ ಕಾರಣ ಕೋಟ್ಯಂತರ ರೂ. ಭೂಮಿಯನ್ನು ಈದ್ಗಾಗೆಂದು ದಾನ ಮಾಡಿದ್ದಾರೆ. ಅದು ಅವರ ತಂದೆಯ ಅಂತಿಮ ಆಸೆಯಾಗಿತ್ತಂತೆ.

ತಂದೆ ಆಸೆ ತೀರಿಸಲು ಕೋಟಿ ಬೆಲೆ ಬಾಳುವ ಭೂಮಿ ದಾನ

ಸುಮಾರು 20 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಅಂತಿಮ ಆಸೆಯನ್ನು ಈಡೇರಿಸಲು ಈದ್‌ ಹಬ್ಬಕ್ಕೆ ಮೊದಲು 1. 2 ಕೋಟಿ ರೂಪಾಯಿ ಮೌಲ್ಯದ 2.1 ಎಕರೆ ಭೂಮಿಯನ್ನು ಈದ್ಗಾಗೆ ದಾನ ಮಾಡುವ ಮೂಲಕ ಪೂರೈಸಿದರು.

ಈ ಗೌರವದ ಸಂಕೇತಕ್ಕಾಗಿ ಮುಸ್ಲಿಂ ಸಮುದಾಯದ ಸದಸ್ಯರು ಮಂಗಳವಾರ ತಮ್ಮ ಈದ್ ಪ್ರಾರ್ಥನೆಯ ಸಮಯದಲ್ಲಿ ಮೃತ ತಂದೆಗೆ ನಮನ ಸಲ್ಲಿಸಿದರು. ಅಲ್ಲದೆ, ಮುಸ್ಲಿಂ ಸಮುದಾಯದ ಅನೇಕರು ತಮ್ಮ ವಾಟ್ಸ್‌ಆ್ಯಪ್‌ ಪ್ರೊಫೈಲ್‌ ಫೋಟೋದಲ್ಲಿ ಅವರ ಫೋಟೋವನ್ನು ಹಾಕಿಕೊಂಡಿದ್ದರು.

ಏನಿದು ಘಟನೆ

2003 ರಲ್ಲಿ ತಮ್ಮ 80 ರ ದಶಕದ ಅಂತ್ಯದಲ್ಲಿ ನಿಧನರಾದ ಲಾಲಾ ಬ್ರಜ್ನಂದನ್ ರಸ್ತೋಗಿ ಅವರು ಕೃಷಿಕರಾಗಿದ್ದರು ಮತ್ತು ಕಾಶಿಪುರದಲ್ಲಿ ಕೆಲವು ಎಕರೆ ಜಮೀನನ್ನು ಹೊಂದಿದ್ದರು. ಈ ಜಮೀನಿನಲ್ಲಿ ಒಂದು ಭಾಗವು ಅವರ ಮರಣದ ನಂತರ ಅನಿತಾ ಮತ್ತು ಸರೋಜ್ ಅವರಿಗೆ ಹೋಯಿತು.

ಆದರೆ, ಅವರು ಮೃತಪಟ್ಟ ಕೆಲ ವರ್ಷಗಳ ನಂತರ, ಕೆಲವು ಸಂಬಂಧಿಕರೊಂದಿಗೆ ಆ ಹೆಣ್ಣು ಮಕ್ಕಳು ಮನೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರ ಅಪ್ಪನಿಗಿದ್ದ ಅಂತಿಮ ಆಸೆಯನ್ನು ಅವರು ತಿಳಿದುಕೊಂಡರು. ಲಾಲಾ ತನ್ನ ಮುಸ್ಲಿಂ ಸಹೋದರರಿಗೆ ತನ್ನ ಆಸ್ತಿಯಲ್ಲಿ ಸ್ವಲ್ಪ ಪಾಲನ್ನಾದರೂ ನೀಡಬೇಕೆಂದು ಬಯಸಿದ್ದರಂತೆ. ಆದರೆ, ಇದನ್ನು ತಮ್ಮ ಬಳಿ ಹೇಳಿಕೊಳ್ಳಲು ಅವರು ಹಿಂಜರಿದ್ದರು ಎಂದು ಮಕ್ಕಳು ಆ ಸಂಭಾಷಣೆ ವೇಳೆ ತಿಳಿದುಕೊಂಡಿದ್ದಾರೆ.

ದಾನ ನೀಡಬೇಕು ಎಂಬುದು ತಂದೆ ಕೊನೆ ಆಸೆ

ನಂತರ, ಇತ್ತೀಚೆಗೆ, ತಮ್ಮ ಸಂಬಂಧಿಕರೊಂದಿಗೆ ಈ ವಿಷಯವನ್ನು ಚರ್ಚಿಸಿದ ನಂತರ, ಮೀರತ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಸರೋಜ್ ಮತ್ತು ದೆಹಲಿಯಲ್ಲಿ ತನ್ನ ಕುಟುಂಬದೊಂದಿಗೆ ಇರುವ ಅನಿತಾ ಕಾಶಿಪುರಕ್ಕೆ ತೆರಳಿದ್ದ ವೇಳೆ ಅವರ ತಂದೆಯ ಅಂತಿಮ ಆಸೆ ಈಡೇರಿಸಿದ್ದಾರೆ. ಕಾಶಿಪುರದ ನಿವಾಸಿಯೇ ಆಗಿರುವ ತಮ್ಮ ಸಹೋದರ ರಾಕೇಶ್‌ ಸಹಾಯದಿಂದ ಅಂತಿಮವಾಗಿ ಭೂಪರಿವರ್ತನೆಯ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಕೇಶ್‌, ‘’ನನ್ನ ತಂದೆ ಕೋಮು ಸೌಹಾರ್ದತೆಯಲ್ಲಿ ಅಪಾರ ನಂಬಿಕೆ ಹೊಂದಿದ್ದವರು, ಈದ್‌ನಂತಹ ಹಬ್ಬಗಳಂದು ನಮಾಜ್‌ ಮಾಡಲು ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಈದ್ಗಾಗೆ ಭೂಮಿಯನ್ನು ದಾನ ಮಾಡಲು ಬಯಸಿದ್ದರು. ಅವರ ಆಸೆಯನ್ನು ನನ್ನ ಸಹೋದರಿಯರು ಗೌರವಿಸಿದ್ದಾರೆ’’ ಎಂದು ಹೇಳಿದರು.

ದೊಡ್ಡ ಹೃದಯದ ವ್ಯಕ್ತಿ

ಇನ್ನು, ಲಾಲಾ ಅವರನ್ನು "ದೊಡ್ಡ ಹೃದಯವುಳ್ಳ ವ್ಯಕ್ತಿ" ಎಂದು ಈದ್ಗಾ ಸಮಿತಿಯ ಅಧ್ಯಕ್ಷ ಹಸೀನ್ ಖಾನ್ ಕರೆದರು ಮತ್ತು "ಅವರು ಬದುಕಿದ್ದಾಗ, ಸಮಿತಿಯು ಯಾವಾಗಲೂ ಎಲ್ಲಾ ಪ್ರಮುಖ ಸಂದರ್ಭಗಳಲ್ಲಿ ಅವರಿಂದ ಮೊದಲ ದೇಣಿಗೆಯನ್ನು ತೆಗೆದುಕೊಳ್ಳುತ್ತಿತ್ತು. ಅವರು ಯಾವಾಗಲೂ ಉದಾರವಾಗಿ ಹಣವನ್ನು ನೀಡುತ್ತಿದ್ದರಲ್ಲದೆ, ಮುಸ್ಲಿಂ ಭಕ್ತರಿಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸುತ್ತಿದ್ದರು. ಅವರ ಮರಣದ ನಂತರ, ಅವರ ಮಗ ಲಾಲಾ ಅವರ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ ಮತ್ತು ಈಗ ಅಂತಹ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿದ ಮೊದಲಿಗರಾಗಿದ್ದಾರೆ’’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:  ಭಾರತೀಯ ಮಹಿಳೆಯರು ಗಂಡನ ಬಗ್ಗೆ ಹೆಚ್ಚು ಪೊಸೆಸಿವ್ : ಹೈಕೋರ್ಟೇ ಹೀಗೆ ಹೇಳಿದ್ದೇಕೆ?

ಅಲ್ಲದೆ, "ಲಾಲಾ ಮತ್ತು ನನ್ನ ತಂದೆ ಮೊಹಮ್ಮದ್ ರಝಾ ಖಾನ್ ಸುಮಾರು 50 ವರ್ಷಗಳ ಕಾಲ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ಈಗ ಬದುಕಿಲ್ಲ, ಆದರೆ ಅವರ ಸಹೋದರತ್ವದ ನಂಬಿಕೆ ನಮಗೆ ಬಹಳಷ್ಟು ಕಲಿಸಿದೆ" ಎಂದು ಅವರು ಹೇಳಿದರು.

ಶಾಂತಿಯ ಓಯಸಿಸ್‌ ಆಗಿದೆ ಕಾಶಿಪುರ..!

ಈ ಪ್ರದೇಶವು ವಾಸ್ತವವಾಗಿ ಶಾಂತಿಯ ಓಯಸಿಸ್ ಆಗಿದೆ. ಅಲ್ಲಿನ ವಿವಿಧ ಸಮುದಾಯಗಳ ನಡುವಿನ ಸಹೋದರತ್ವದ ಬಗ್ಗೆ ಮಾತನಾಡಿದ ಹಸೀನ್ ಖಾನ್, ‘’ಈದ್ಗಾವನ್ನು ಗುರುದ್ವಾರ ಮತ್ತು ಹನುಮಾನ್ ದೇವಾಲಯದಿಂದ ಸುತ್ತುವರೆದಿದೆ. ಆದರೆ ಈವರೆಗೆ ಯಾವುದೇ ಕೋಮು ಉದ್ವಿಗ್ನ ಘಟನೆ ನಡೆದಿಲ್ಲ. ಇಂದೂ (ಮಂಗಳವಾರ) ಹನುಮಾನ್ ಮಂದಿರದ ಅರ್ಚಕರು ಈದ್ ಪ್ರಾರ್ಥನೆಯ ಸಮಯದ ಬಗ್ಗೆ ನನ್ನನ್ನು ಕೇಳಿದರು, ನಾನು ಬೆಳಗ್ಗೆ 9 ಗಂಟೆಗೆ ಎಂದು ಅವರಿಗೆ ತಿಳಿಸಿದಾಗ, ಅವರು ಅದೇ ಸಮಯದಲ್ಲಿ ಬೆಳಗ್ಗೆ ಆರತಿ ಇದೆ. ಆದರೆ, ದೇವಸ್ಥಾನದ ಧ್ವನಿವರ್ಧಕ ಬಳಸುವುದಿಲ್ಲ’’ಎಂದು ಹೇಳಿದ್ದರು ಎಂದೂ ಆ ಪ್ರದೇಶದ ಕೋಮು ಸಾಮರಸ್ಯದ ಬಗ್ಗೆ ವಿವರಿಸಿದ್ದಾರೆ.

ಇದನ್ನು ಓದಿ: ಮಕ್ಕಳಲ್ಲಿನ ವಿಟಮಿನ್ ಎ ಕೊರತೆ ನೀಗಿಸುವ ಆಹಾರಗಳಿವು

ಇನ್ನೊಂದೆಡೆ, ಈದ್ಗಾ ಸಮಿತಿ ಸದಸ್ಯ ನೌಶಾದ್ ಹುಸೇನ್ ಮಾತನಾಡಿ, ‘ಲಾಲಾ ಬ್ರಜನಂದನ್ ಮತ್ತು ಅವರ ಕುಟುಂಬದವರ ಈ ಭೂಮಿ ದಾನವನ್ನು ಸುತ್ತಮುತ್ತಲಿನ ಎಲ್ಲಾ ಮುಸ್ಲಿಂ ಮನೆಗಳಲ್ಲಿ ಚರ್ಚೆ ನಡೆಸಲಾಗಿದೆ. ನಾವು ಈಗ ವಾಸಿಸುತ್ತಿರುವ ಕೋಮುವಾದದ ವಾತಾವರಣದಲ್ಲಿ ಅಂತಹ ಔದಾರ್ಯ ಮತ್ತು ನಿಜವಾದ ಜಾತ್ಯತೀತತೆಗೆ ನಾವು ನಮಸ್ಕರಿಸುತ್ತೇವೆ. ಇಂತಹ ಜನರು ನಮ್ಮ ನಡುವೆ ಇದ್ದಾಗ, ದೇಶಕ್ಕೆ ಎಂದಿಗೂ ಹಾನಿಯಾಗುವುದಿಲ್ಲ’’ ಎಂದು ತಿಳಿಸಿದ್ದಾರೆ.
Published by:Seema R
First published: