ಪಾಕಿಸ್ತಾನದ ವೈದ್ಯಕೀಯ ಕಾಲೇಜು ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾದ ಹಿಂದೂ ವಿದ್ಯಾರ್ಥಿನಿ; ಕೊಲೆ ಶಂಕೆ!

ಇಲ್ಲಿನ ಘೋಟ್ಕಿ ತಾಲೂಕಿನ ಮೀರ್ಪುರ್ ಮ್ಯಾಥೆಲೋ ಗ್ರಾಮದ ನಿವಾಸಿಯಾದ ನಮ್ರಿತಾ ಚಾಂದಿನಿ ಶವ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಈಕೆ ಇದ್ದ ಕೊಣೆಯನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು ಎಂದು ವರದಿಯಾಗಿದೆ.

MAshok Kumar | news18-kannada
Updated:September 17, 2019, 4:20 PM IST
ಪಾಕಿಸ್ತಾನದ ವೈದ್ಯಕೀಯ ಕಾಲೇಜು ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾದ ಹಿಂದೂ ವಿದ್ಯಾರ್ಥಿನಿ; ಕೊಲೆ ಶಂಕೆ!
ಪ್ರಾತಿನಿಧಿಕ ಚಿತ್ರ.
  • Share this:
ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಂತಿಮ ವರ್ಷದ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದ ನಮ್ರಿತಾ ಚಾಂದಿನಿ ಎಂಬ ಹಿಂದೂ ವಿದ್ಯಾರ್ಥಿನಿ ಸೋಮವಾರ ಕಾಲೇಜು ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. 

ಇಲ್ಲಿನ ಘೋಟ್ಕಿ ತಾಲೂಕಿನ ಮೀರ್ಪುರ್ ಮ್ಯಾಥೆಲೋ ಗ್ರಾಮದ ನಿವಾಸಿಯಾದ ನಮ್ರಿತಾ ಚಾಂದಿನಿ ಶವ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಈಕೆ ಇದ್ದ ಕೊಣೆಯನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು ಎಂದು ವರದಿಯಾಗಿದೆ.

ಮರುದಿನ ಬೆಳಗ್ಗೆ ಈಕೆಯ ಸಹಪಾಠಿ ವಿದ್ಯಾರ್ಥಿನಿ ಹಾಸ್ಟೆಲ್ ಕೋಣೆಯ ಬಾಗಿಲು ಬಡಿದಿದ್ದಾಳೆ. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಕೋಣೆಯ ಕಿಟಕಿಯಿಂದ ನೋಡಿದಾಗ ನಮ್ರಿಯಾ ಚಾಂದಿನಿ ನೇಣಿಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ. ನಂತರ ಹಾಸ್ಟೆಲ್ ವಾರ್ಡನ್ ಕೋಣೆಯ ಬಾಗಿಲು ಮುರಿದು ಶವವನ್ನು ನೇಣಿನಿಂದ ಕೆಳಗಿಳಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣ ಎಂದೇ ದಾಖಲಿಸಲಾಗಿದೆ.

ಆದರೆ, ಆತ್ಮಹತ್ಯೆ ಸುದ್ದಿಯನ್ನು ಅಲ್ಲಗೆಳೆದಿರುವ ಆಕೆಯ ಅಣ್ಣ ಡಾ. ವಿಶಾಲ್ ಸುಂದರ್, “ನನ್ನ ತಂಗಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ನಾನೂ ಸಹ ವಿಧಿ ವಿಜ್ಞಾನ ವೈದ್ಯಕೀಯ ವಿದ್ಯಾರ್ಥಿ. ಮೃತಳ ದೇಹದ ಅನೇಕ ಭಾಗಗಳಲ್ಲಿ ಗಾಯದ ಗುರುತುಗಳಿವೆ. ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ನೇಣಿಗೆ ಹಾಕಿರುವ ಸಾಧ್ಯತೆ ಇದೆ. ನಾವು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೀಗಾಗಿ ಜನ ಸಾಮಾನ್ಯರು ನಮಗೆ ನ್ಯಾಯ ಸಿಗಬೇಕೆಂದು ನಮ್ಮ ಬೆಂಬಲಕ್ಕೆ ನಿಲ್ಲಿ” ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸರು ಮೃತ ದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷೆಯ ವರದಿ ಕೈಗೆ ಸಿಕ್ಕ ನಂತರ ಈ ಕುರಿತು ಸ್ಪಷ್ಟ ಚಿತ್ರಣ ತಿಳಿದುಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಲೇಜು ಉಪ ಕುಲಪತಿ ಡಾ. ಅನಿಲಾ ಅತ್ತಾವೂರ್ ರೆಹಮಾನ್ ಪ್ರತಿಕ್ರಿಯಿಸಿ, “ಈ ಘಟನೆ ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣ ಎಂಬಂತೆ ಕಂಡು ಬಂದಿದೆ. ಆದರೂ, ಇದರ ತನಿಖೆಗಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಭವಿಷ್ಯ ನಿಧಿ ಠೇವಣಿದಾರ ಕಾರ್ಮಿಕರಿಗೆ ಸಿಹಿ ಸುದ್ದಿ; ಪಿಎಫ್​ ಹಣದ ಮೇಲಿನ ಬಡ್ಡಿ ದರ ಏರಿಕೆಗೆ ಮುಂದಾದ ಕೇಂದ್ರ ಸರ್ಕಾರ
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading