Beef: ಮುಸ್ಲಿಂ ಹುಡುಗಿ ಮದ್ವೆಯಾದ ಹಿಂದೂ ಯುವಕ ಆತ್ಮಹತ್ಯೆ! ಗೋಮಾಂಸ ತಿನ್ನಿಸಿದ್ದಕ್ಕೆ ನೊಂದು ಸೂಸೈಡ್

ಗುಜರಾತ್‌ನ ಸೂರತ್ ನಗರದಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಕಳೆದ ಜೂನ್‌ನಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ಆತ ಸಾಯುವ ಮುನ್ನ ಫೇಸ್‌ಬುಕ್‌ನಲ್ಲಿ ತನ್ನ ಸಾವಿನ ಕಾರಣವನ್ನು ವಿವರಿಸಿದ್ದ. ಇದೀಗ 3 ತಿಂಗಳ ಬಳಿಕ ಆತನ ಮನೆಯವರು, ಸಂಬಂಧಿಕರು, ಸ್ನೇಹಿತರ ಗಮನಕ್ಕೆ ಬಂದಿದೆ.

ಹೆಂಡತಿ ಮನೆಯಲ್ಲಿ ಗೋಮಾಂಸ ತಿನ್ನಿಸಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ಹೆಂಡತಿ ಮನೆಯಲ್ಲಿ ಗೋಮಾಂಸ ತಿನ್ನಿಸಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

  • Share this:
ಸೂರತ್, ಗುಜರಾತ್: ಆತ ಹಿಂದೂ ಯುವಕ (Hindu Man), ಆಕೆ ಮುಸ್ಲಿಂ ಯುವತಿ (Muslim Girl). ಆದರೆ ಪ್ರೀತಿಗೆ (Love) ಜಾತಿ, ಧರ್ಮದ ಹಂಗೇಕೆ ಅಂತ ಅವರಿಬ್ಬರು ಪ್ರೀತಿಸಿದ್ದರು. ಜಾತಿ ಧರ್ಮದ ಎಲ್ಲೆ ಮೀರಿ, ಮನೆಯವರ ವಿರೋಧ (Family Opposition) ಎದುರಿಸಿ ಮದುವೆಯನ್ನೂ (Marriage) ಆಗಿದ್ದರು. ಒಂದು ವರ್ಷ ಸಂಸಾರವೇನೋ ಚೆನ್ನಾಗೇ ನಡೆಯಿತು. ನನಗೆ ನೀನು, ನಿನಗೆ ನಾನು ಅಂತ ಇಬ್ಬರೂ ಅನ್ಯೋನ್ಯವಾಗೇ ಇದ್ದರು. ಆದರೆ ಒಂದು ವರ್ಷದ ಬಳಿಕ ಅದೇನಾಯ್ತೋ ಏನೋ ಆ ಯುವಕ ಆತ್ಮಹತ್ಯೆ (Suicide) ಮಾಡಿಕೊಂಡು ಬಿಟ್ಟಿದ್ದಾನೆ. ಸಾಯುವ ಮುನ್ನ ಆತ ಫೇಸ್‌ಬುಕ್‌ನಲ್ಲಿ (Facebook) ತನ್ನ ಆತ್ಮಹತ್ಯೆಗೆ ಕಾರಣ ಏನು ಅಂತ ಬರೆದಿದ್ದಾನೆ. ಇದನ್ನು ಓದಿ ಆತನ ಮನೆಯವರು, ಸಂಬಂಧಿಕರು, ಸ್ನೇಹಿತರೆಲ್ಲ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅವನ ಸಾವಿಗೆ ಕಾರಣವಾಗಿದ್ದು ಗೋಮಾಂಸ (Beef)!

ಗುಜರಾತ್‌ನ ಸೂರತ್‌ನಲ್ಲಿ ವಿವಾಹಿತ ಆತ್ಮಹತ್ಯೆ

ಗುಜರಾತ್‌ನ ಸೂರತ್ ನಗರದಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಕಳೆದ ಜೂನ್‌ನಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ಆತ ಸಾಯುವ ಮುನ್ನ ಫೇಸ್‌ಬುಕ್‌ನಲ್ಲಿ ತನ್ನ ಸಾವಿನ ಕಾರಣವನ್ನು ವಿವರಿಸಿದ್ದ. ಇದೀಗ 3 ತಿಂಗಳ ಬಳಿಕ ಆತನ ಮನೆಯವರು, ಸಂಬಂಧಿಕರು, ಸ್ನೇಹಿತರ ಗಮನಕ್ಕೆ ಬಂದಿದೆ.

ಪ್ರೀತಿಸಿ ಮದುವೆಯಾಗಿದ್ದ ಹಿಂದೂ-ಮುಸ್ಲಿಂ ಜೋಡಿ

ಸೂರತ್‌ ನಿವಾಸಿ, ಹಿಂದೂ ಯುವಕ ರೋಹಿತ್ ಪ್ರತಾಪ್ ಸಿಂಗ್ ಮತ್ತು ಮುಸ್ಲಿಂ ಮಹಿಳೆ ಸೋನಂ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇವರಿಬ್ಬರ ಪರಿಚಯವಾಗಿ, ಪರಿಚಯ ಪ್ರೀತಿಯೂ ಆಯಿತು. ರೋಹಿತ್ ಹಿಂದೂ ಮತ್ತು ಸೋನಂ ಮುಸ್ಲಿಂ ಆಗಿದ್ದರಿಂದ ಅವರ ಮದುವೆಗೆ ಹಿರಿಯರು ಒಪ್ಪಿರಲಿಲ್ಲ. ಆದರೆ.. ರೋಹಿತ್ ತನ್ನ ಪ್ರೀತಿಯನ್ನು ಸೋನಂ ಬಿಟ್ಟುಕೊಡಲಾರದೆ ಮದುವೆಯಾದ. ರೋಹಿತ್ ಹಾಗೂ ಸೋನಂ ಸಂಸಾರ ಕೆಲ ದಿನಗಳ ಕಾಲ ಸಲೀಸಾಗಿ ನಡೆಯಿತು.

ಬಲವಂತವಾಗಿ ಗೋಮಾಂಸ ತಿನ್ನಿಸಿದ ಹೆಂಡತಿ ಕುಟುಂಬಸ್ಥರು

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಈ ವರ್ಷದ ಜೂನ್‌ನಲ್ಲಿ ಪತ್ನಿ ಸೋನಂ ಮತ್ತು ಆಕೆಯ ಸಹೋದರ ಅಖ್ತರ್ ಅಲಿ ರೋಹಿತ್‌ಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಹೆಂಡತಿ ಹಾಗೂ ಬಾಮೈದುನನ ಬೆದರಿಕೆ ಹಾಗೂ ಒತ್ತಾಯಕ್ಕೆ ಹೆದರಿ ರೋಹಿತ್ ಸಿಂಗ್ ತನಗೆ ಇಷ್ಟವಿಲ್ಲದಿದ್ದರೂ ಗೋಮಾಂಸ ತಿಂದಿದ್ದಾನೆ. ನಂತರ ಇದನ್ನು ಸಹಿಸಲಾಗದೆ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಆತನ ಮನೆಯವರು ಆರೋಪಿಸಿದ್ದಾರೆ.

ಸಾಯುವ ಮುನ್ನ ಫೇಸ್‌ಬುಕ್‌ನಲ್ಲಿ ಸಾವಿನ ಕಾರಣ ತಿಳಿಸಿದ್ದ ರೋಹಿತ್

ಏತನ್ಮಧ್ಯೆ, ರೋಹಿತ್ ಆತ್ಮಹತ್ಯೆಗೆ ಮುನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಕಳೆದ ಜೂನಲ್ಲಿ ಆತ ಪೋಸ್ಟ್‌ ಮಾಡಿದ್ದ ಸೂಸೈಡ್ ನೋಟ್ ಇತ್ತೀಚೆಗೆ ಬೆಳಕಿಗೆ ಬಂದಿದೆ.

ರೋಹಿತ್ ಡೆತ್‌ನೋಟ್‌ನಲ್ಲಿ ಏನಿದೆ?

ನನ್ನ ಹೆಂಡತಿ ಮತ್ತು ಅವಳ ಸಹೋದರನಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಗೋಮಾಂಸ ಸೇವಿಸಿ ಕೊಲೆ ಬೆದರಿಕೆ ಹಾಕಿದ್ದರು. ನಾನು ಈ ಜಗತ್ತಿನಲ್ಲಿ ಬದುಕಲು ಅರ್ಹನಲ್ಲ. ಅದಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಆತ್ಮಹತ್ಯೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Tight Hug: ಆತ ಕರಡಿಯಂತೆ ಬಾಚಿ ತಪ್ಪಿಕೊಂಡ, ಆಕೆಯ ಎದೆಯ ಎಲುಬು ಚಟಾರ್ ಅಂತ ಮುರಿದು ಹೋಯ್ತು!

ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದ ರೋಹಿತ್ ತಾಯಿ

ರೋಹಿತ್‌ ಸಿಂಗ್ ಫೇಸ್‌ಬುಕ್ ಡೆತ್‌ ನೋಟ್‌ ಅನ್ನು ಅವನ ಸ್ನೇಹಿತರು ನೋಡಿದ್ದಾರೆ ಮತ್ತು ಅವನು ತನ್ನ ತಾಯಿ ವೀಣಾದೇವಿಗೆ ಈ ವಿಷಯವನ್ನು ಹೇಳಿದ್ದಾರೆ. ಇದೀಗ ಮಗನ ಸಾವಿಗೆ ಸೋನಂ ಕಾರಣ ಎಂದು ರೋಹಿತ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಡೆತ್ ನೋಟ್ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:Annappa Achari
First published: