ನಾರದ ಶಾಸ್ತ್ರದಂತೆ ಹಿಂದು ನ್ಯಾಯಾಲಯದಲ್ಲಿ ತೀರ್ಪು; ಪೂಜಾ ಶಕುನ್​ ಪಾಂಡೆ ಮೊದಲ ನ್ಯಾಯಮೂರ್ತಿ

news18
Updated:August 26, 2018, 7:35 PM IST
ನಾರದ ಶಾಸ್ತ್ರದಂತೆ ಹಿಂದು ನ್ಯಾಯಾಲಯದಲ್ಲಿ ತೀರ್ಪು; ಪೂಜಾ ಶಕುನ್​ ಪಾಂಡೆ ಮೊದಲ ನ್ಯಾಯಮೂರ್ತಿ
news18
Updated: August 26, 2018, 7:35 PM IST
ನ್ಯೂಸ್​18 ಕನ್ನಡ

ನೌರಂಗಾಬಾದ್​ (ಆ. 26): ಮಾರ್ಬಲ್​ ಒಳಾಂಗಣ ವಿನ್ಯಾಸ, ಹಿಂದು ಮಹಾಸಭಾದ ನಾಯಕರ ಕಂಚಿನ ಪುತ್ಥಳಿಗಳೊಂದಿಗೆ ಉತ್ತರಪ್ರದೇಶದ ಹತ್ರಾಸ್​ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಹಿಂದು ಕೋರ್ಟ್​ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ಈ ನ್ಯಾಯಾಲಯದಲ್ಲಿ 'ನಾರದ ಶಾಸ್ತ್ರ'ದ ಅನುಸಾರದಲ್ಲಿ ತೀರ್ಪು ಪ್ರಕಟಿಸಲಾಗುತ್ತದೆ.

ಶರಿಯಾ ಕೋರ್ಟ್‌ ರೀತಿಯಲ್ಲೇ ಹಿಂದೂ ಕೋರ್ಟ್‌ ಸ್ಥಾಪಿಸುವುದಾಗಿ ಇತ್ತೀಚೆಗೆ ಹಿಂದೂ ಮಹಾಸಭಾ ಘೋಷಿಸಿತ್ತು. ಅದರಂತೆ ಮೊದಲ ಹಿಂದು ಕೋರ್ಟ್​ ಹತ್ರಾಸ್​ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ಈ ಹಿಂದು ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿ ತೀರ್ಪು ನೀಡಲಿದ್ದಾರೆ.

ಪೂಜಾ ಶಕುನ್​ ಪಾಂಡೆಗಾಗಿ ದೊಡ್ಡ ಮರದ ಕುರ್ಚಿ, ಅದರ ಮೇಲೆ ಮೆತ್ತನೆಯ ವಿಶೇಷ ವಿನ್ಯಾಸದ ದಿಂಬುಗಳನ್ನಿಡಲಾಗುವುದು. ಐಷಾರಾಮಿ ಸೋಫಾಗಳನ್ನಿಡಲಾಗುವುದು. ಒಂದು ಭಾಗದಲ್ಲಿ ದೂರುದಾರರು ಕುಳಿತರೆ ಇನ್ನೊಂದು ಕಡೆ ನ್ಯಾಯಮೂರ್ತಿಗಳು ಕೂರಲಿದ್ದಾರೆ.ನಾರದ ಸಂಹಿತೆ ಆಧರಿಸಿ ಬ್ರಿಟಿಷರ ಕಾಲದಲ್ಲಿ ಪಂಡಿತರು ಕಾನೂನುಗಳನ್ನು ರೂಪಿಸಿದ್ದರು. ಇದನ್ನು ಆಧರಿಸಿ ಕೋರ್ಟ್‌ ತೀರ್ಪು ನೀಡಲಿದೆ. ಅಲ್ಲದೆ ಕೋರ್ಟ್‌ ರಾಮನ ದರ್ಬಾರ್‌ ರೀತಿ ಇರಲಿದೆ. ನಾರದ ಸಂಹಿತೆಯಲ್ಲಿರುವಂತೆಯೇ ನ್ಯಾಯಮೂರ್ತಿಗಳ ಡ್ರೆಸ್​, ವಾತಾವರಣ ಹಾಗೂ ಜಡ್ಜ್ ಕುರ್ಚಿ ಇರಲಿದೆ.
Loading...

ನಾಥೂರಾಮ್​ ಗೋಡ್ಸೆ ಫೋಟೋ:
ಈ ಹಿಂದು ನ್ಯಾಯಾಲಯದಲ್ಲಿ ಮಹಾತ್ಮ ಗಾಂಧಿ ಅವರ ಹತ್ಯೆ ಮಾಡಿರುವ ನಾಥುರಾಮ್​ ಗೋಡ್ಸೆ ಅವರ ದೊಡ್ಡ ಭಾವಚಿತ್ರವನ್ನು ಹಾಕಲಾಗಿದೆ. ನಾವು ಗೋಡ್ಸೆಯನ್ನು ಪೂಜಿಸುತ್ತೇವೆ. ಅವರಿಗಿಂತ ಹೆಚ್ಚಾಗಿ ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು ಬೇರೊಬ್ಬರಿದ್ದಾರೆ ಎಂದು ನಮಗೆ ಅನಿಸುವುದಿಲ್ಲ. ಈ ಕಾರಣದಿಂದಲೇ ಮೀರತ್​ನಲ್ಲಿ 2016ರಲ್ಲಿ ಗೋಡ್ಸೆಯ ಮೊದಲ ಪುತ್ಥಳಿಯನ್ನು ಸ್ಥಾಪಿಸಲಾಯಿತು.ಆಗಸ್ಟ್​ 15ರಂದು ಭಾರತದ ಎಲ್ಲ ಭಾಗಗಳಲ್ಲಿ ಹಿಂದು ನ್ಯಾಯಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಅಖಿಲ ಭಾರತ ಹಿಂದು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಅಶೋಕ್​ ಶರ್ಮ ಅವರು ಪೂಜಾ ಶಕುನ್​ ಪಾಂಡೆ ಅವರನ್ನು ಈ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದ್ದರು. ಪೂಜಾ ಶಕುನ್​ ಪಾಂಡೆ ಅವರ ಮನೆ ಆಜಾದ್​ ಭವನದಲ್ಲಿಯೇ ನ್ಯಾಯ ತೀರ್ಮಾನವಾಗುತ್ತದೆ.ಕೋರ್ಟ್​ನಲ್ಲಿ ಶಿಕ್ಷೆ ನೀಡುವುದಿಲ್ಲ:
ಅಂದಹಾಗೆ, ಈ ಕೋರ್ಟ್‌ನಲ್ಲಿ ಶಿಕ್ಷೆ ವಿಧಿಸಲಾಗುವುದಿಲ್ಲ. ಬದಲಿಗೆ ಮನಃಪರಿವರ್ತನೆಗೆ ಒತ್ತು ನೀಡಲಾಗುತ್ತದೆ. ಭಾರತೀಯ ದಂಡ ಸಂಹಿತೆ ಉಲ್ಲಂಘಿಸುವಂತಹ ಯಾವುದೇ ಶಿಕ್ಷೆ ವಿಧಿಸುವ ಪ್ರಸ್ತಾವನೆ ಈ ಕೋರ್ಟ್‌ನಲ್ಲಿಲ್ಲ. ಬದಲಿಗೆ ತಪ್ಪು ಮಾಡಿದವರಿಗೆ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗುತ್ತದೆ.

ನಾವು ಹಿಂದು ನ್ಯಾಯಾಲಯವನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಯಾರೂ ಭಯಪಡಬೇಕಾಗಿಲ್ಲ. ಶರಿಯಾ ಕೋರ್ಟ್​ನಂತೆಯೇ ನಾವು ಕೂಡ ಕಾರ್ಯ ನಿರ್ವಹಿಸಲಿದ್ದೇವೆ. ನಾವು ಹಿಂದುಗಳ ಜೊತೆಯಲ್ಲಿ ನ್ಯಾಯಕ್ಕಾಗಿ ಕೆಲಸ ಮಾಡಲಿದ್ದೇವೆ. ನಾವು ಭಾರತವನ್ನು ಜಾತ್ಯತೀತ ದೇಶ ಎನ್ನುತ್ತೇವೆ. ಆದರೂ ಯಾಕೆ ನಮ್ಮಲ್ಲಿ ಧರ್ಮದ ಆಧಾರದಲ್ಲಿ ಎರಡೆರಡು ಕಾನೂನುಗಳಿವೆ? ನಮ್ಮ ಪ್ರಧಾನಿ ಈಗ ಎಸ್​ಸಿ/ಎಸ್ಟಿ ತಿದ್ದುಪಡಿ ಕಾಯ್ದೆಯನ್ನು ತಂದಿದ್ದಾರೆ. ಇಲ್ಲಿಯವರೆಗೂ ನಾವು ಧರ್ಮದ ಆಧಾರದಲ್ಲಿ ವಿಭಜನೆಯಾಗಿದ್ದೆವು. ಇನ್ನು ಮುಂದೆ ಜಾತಿಯ ಆಧಾರದಲ್ಲೂ ನಮ್ಮನ್ನು ವಿಂಗಡಿಸಲಾಗುತ್ತದೆ. ಈ ಮೂಲಕ ರಾಜಕೀಯ ನಾಯಕರು ಒಡೆದು ಆಳುವ ನೀತಿಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಪೂಜಾ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಯಾರಾದರೂ ನನ್ನ ಬಳಿ ದೂರು ನೀಡಲು ಬಂದಾಗ ನಾನು ಅವರ ಸಮಸ್ಯೆಯನ್ನು ಕೇಳಿಸಿಕೊಳ್ಳುತ್ತೇನೆ. ನಂತರ ನಮ್ಮ ಜನರು ಅವರ ಮೇಲೆ ನಿಗಾ ಇಡುತ್ತಾರೆ. ಯಾರು ನಿಜವಾಗಲೂ ಅಸಹಾಯಕರು ಅಥವಾ ಮುಗ್ಧರು ಎಂಬ ವಿಷಯವನ್ನು ಅವರಿಂದ ತಿಳಿದುಕೊಂಡು ನಾನು ನ್ಯಾಯ ತೀರ್ಮಾನ ಮಾಡುತ್ತೇನೆ ಎಂದು ಪೂಜಾ ತಿಳಿಸಿದ್ದಾರೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...